ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿನಿ ಎದುರೂ ರಫೇಲ್ ಬಗ್ಗೆಯೇ ಸಮಾ ಭಾಷಣ ಮಾಡಿದ ರಾಹುಲ್

By ಅನಿಲ್ ಆಚಾರ್
|
Google Oneindia Kannada News

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಂತರೂ- ನಿಂತರೂ ರಫೇಲ್ ಧ್ಯಾನ ಅನ್ನೋ ಹಾಗಿದೆ. ಹಾಗಂತ ಅದರ ಬಗ್ಗೆ ಮಾತನಾಡಲೇ ಬಾರದು ಅಂತಲ್ಲ. ಬೇರೆ ಯಾವ ವಿಚಾರ ಎತ್ತಿದರೂ ಸುತ್ತಿ ಬಳಸಿ ರಫೇಲ್ ಗೆ ಬರ್ತಾರಲ್ಲ ಅನ್ನೋದು ತಮಾಷಿ ಸಂಗತಿ ಆಗಿದೆ. ಒಡಿಶಾದಲ್ಲಿ ಶಾಲಾ ಮಕ್ಕಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್, ಮತ್ತೆ ಹಾಗೇ ಮಾಡಿದ್ದಾರೆ.

ಒಂದು ವೇಳೆ ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ರೀಡೆಗೆ ಸಂಬಂಧಿಸಿದಂತೆ ಏನು ಸಹಾಯ ಮಾಡ್ತೀರಿ ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ್ದಾಳೆ. ರಾಹುಲ್ ಗಾಂಧಿ ಅವರು ಬಹಳ ನಿರ್ಲಿಪ್ತರಾಗಿ, ಕ್ರೀಡಾಂಗಣಗಳನ್ನು ಸುಂದರವಾಗಿ ಮಾಡ್ತೀನಿ ಅಂದಿದ್ದಾರೆ. ಆ ನಂತರ ರಫೇಲ್ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ.

ವಿದ್ಯಾರ್ಥಿನಿ ಹಾಗೂ ರಾಹುಲ್ ಗಾಂಧಿ ಮಧ್ಯದ ಸಂಭಾಷಣೆ ಹೀಗಿತ್ತು:

ವಿದ್ಯಾರ್ಥಿನಿ: ಸರ್ ನೀವು ಈ ಹಿಂದೆ ಹೇಳಿದ್ದಿರಿ, ನೀವೇನಾದರೂ ಅಧಿಕಾರಕ್ಕೆ ಬಂದರೆ ಉಚಿತ ಶಿಕ್ಷಣ ನೀಡುತ್ತೇವೆ ಎಂದಿದ್ದಿರಿ. ಆದರೆ ಮಹಿಳೆಯರು ಹಾಗೂ ಯುವತಿಯರಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಇದೆ. ಕ್ರೀಡೆಗಾಗಿ ಏನು ಮಾಡ್ತೀರಿ?

ರಾಹುಲ್ ಗಾಂಧಿ: ನಿನಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇದೆ?

ವಿದ್ಯಾರ್ಥಿನಿ: ಬ್ಯಾಡ್ಮಿಂಟನ್, ಹಾಕಿ ಮತ್ತಿತರ ಕ್ರೀಡೆಗಳಲ್ಲಿ.

ರಾಹುಲ್ ಗಾಂಧಿ: ಸಾರಿ, ನನಗೆ ನಿನ್ನ ಧ್ವನಿ ಕೇಳುತ್ತಿಲ್ಲ?

ಸಿಪಿಎಂ, ಬಿಜೆಪಿ ವಿರುದ್ಧ ಕೇರಳದಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿಸಿಪಿಎಂ, ಬಿಜೆಪಿ ವಿರುದ್ಧ ಕೇರಳದಲ್ಲಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ

ವಿದ್ಯಾರ್ಥಿನಿ: ಸರ್, ಬ್ಯಾಡ್ಮಿಂಟನ್

ರಾಹುಲ್ ಗಾಂಧಿ: ನನಗೆ ಸಲಹೆ ಕೊಡು. ನಾನು ಅದನ್ನು ಮಾಡ್ತೀನಿ. ಮತ್ತು ನೀನು ಎಲ್ಲಿ ತರಬೇತಿ ಪಡೆದುಕೊಳ್ತಿದಿಯಾ?

Girl asked about Badminton, Rahul Gandhi gave speech on Rafale

ವಿದ್ಯಾರ್ಥಿನಿ: ನಾನು ತರಬೇತಿ ಪಡೀತಿಲ್ಲ ಸರ್.

ರಾಹುಲ್ ಗಾಂಧಿ: ಎಲ್ಲಿ ಆಟ ಆಡ್ತೀಯಾ? ಸ್ಟೇಡಿಯಂನಲ್ಲಾ?

ವಿದ್ಯಾರ್ಥಿನಿ: ಹೌದು ಸರ್, ಸ್ಟೇಡಿಯಂನಲ್ಲಿ.

ರಾಹುಲ್ ಗಾಂಧಿ: ಸ್ಟೇಡಿಯಂನಲ್ಲಿ ಮೂಲ ಸೌಕರ್ಯ ಹೇಗಿದೆ ಮತ್ತು ಅಲ್ಲಿನ ಕೋರ್ಟ್ ಯಾವುದರಿಂದ ಮಾಡಿದ್ದು? ಸಿಮೆಂಟ್ ಅಥವಾ ಹುಲ್ಲು?

ವಿದ್ಯಾರ್ಥಿನಿ: ಹುಲ್ಲು ಸರ್.

ರಾಹುಲ್ ಗಾಂಧಿ: ನಿಮ್ಮ ಸ್ಟೇಡಿಯಂನ ಗುಣಮಟ್ಟ ಹೆಚ್ಚಿಸುವುದಕ್ಕೆ ನಮ್ಮ ಶ್ರಮ ಇರುತ್ತದೆ.

'ಕಾಗದದ ವಿಮಾನ ಕೂಡ ಮಾಡಲಾಗದ ಅನಿಲ್ ಅಂಬಾನಿಗೆ ರಫೇಲ್ ಡೀಲ್''ಕಾಗದದ ವಿಮಾನ ಕೂಡ ಮಾಡಲಾಗದ ಅನಿಲ್ ಅಂಬಾನಿಗೆ ರಫೇಲ್ ಡೀಲ್'

ಸ್ಟೇಡಿಯಂ ಗುಣಮಟ್ಟ ಹೆಚ್ಚಿಸುವ ಬಗ್ಗೆ ಒಂದು ವಾಕ್ಯ ಹೇಳಿದ ರಾಹುಲ್ ಗಾಂಧಿ ದಿಢೀರನೇ ಗೇರ್ ಬದಲಾಯಿಸಿದ್ದಾರೆ. ರಫೇಲ್ ಕಡೆ ಮಾತು ತಿರುಗಿದೆ. ಕ್ರೀಡೆ ಬಗ್ಗೆ ಮಾತನಾಡುವುದು ಸಲೀಸಲ್ಲ ಅನಿಸಿದೆ.

ರಾಹುಲ್ ಗಾಂಧಿ: ಒಡಿಶಾದಲ್ಲಿ ಸಾಕಷ್ಟು ಗಣಿ ಇದೆ. ರಾಜ್ಯದಲ್ಲಿ ಸಾಕಷ್ಟ ಖನಿಜ ಹಾಗೂ ಸಂಪತ್ತಿದೆ. ಆದರೆ ನಿಮಗೆ ಏನೂ ಸಿಗುತ್ತಿಲ್ಲ. "ಜೀವನಕ್ಕಾಗಿ ನಿಮ್ಮ್ ಪೋಷಕರು ಏನು ಮಾಅಡುತ್ತಾರೆ?"

ವಿದ್ಯಾರ್ಥಿನಿ: ನನ್ನ ತಂದೆ ಶೂ ಅಂಗಡಿ ನಡೆಸುತ್ತಾರೆ.

ರಾಹುಲ್ ಗಾಂಧಿ: ನೀನು ಅನಿಲ್ ಅಂಬಾನಿ ಹೆಸರು ಕೇಳಿದ್ದೀಯಾ?

ವಿದ್ಯಾರ್ಥಿನಿ: ನಿಜವಾಗಲೂ ಇಲ್ಲ ಸರ್, ನನಗೆ ಅನಿಸುತ್ತದೆ ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿ ಇರಬೇಕು.

ರಾಹುಲ್ ಗಾಂಧಿ: ನಿಮ್ಮ ರಾಜ್ಯದಲ್ಲಿ ಎಚ್ ಎಎಲ್ ಕಾರ್ಖಾನೆ ಇದೆ. ಅದರ ಬಗ್ಗೆ ನಿನಗೆ ಗೊತ್ತಿರಲೇಬೇಕು. ಭಾರತದ್ ಅತಿ ದೊಡ್ಡ ವಿಮಾನ ತಯಾರಿಕೆ ಗುತ್ತಿದೆ ಎಚ್ ಎಎಲ್ ಗೆ ಸಿಗಬೇಕಿತ್ತು. ಆದರೆ ಅನಿಲ್ ಅಂಬಾನಿಗೆ ಕೊಡಲಾಯಿತು. ರಫೇಲ್ ಇಲ್ಲಿನ ಎಚ್ ಎ ಎಲ್ ನಲ್ಲಿ ನಿರ್ಮಾಣ ಆಗಬೇಕಿತ್ತು. ಆದರೆ ಪ್ರಧಾನಿಗಳು ಆತನಿಗೆ ಗುತ್ತಿಗೆ ನೀಡಿದರು.

ಹೀಗೆ ರಫೇಲ್ ಬಗ್ಗೆ ಇಷ್ಟುದ್ದ ಭಾಷಣ ಮಾಡಿದ್ದಾರೆ ರಾಹುಲ್: ತಾವು ಸಂಸತ್ ನಲ್ಲಿ ನಿಂತು ಮಾತನಾಡುತ್ತಿರುವಂತೆ. ಕಾಂಗ್ರೆಸ್ ಅಧ್ಯಕ್ಷರು ಏನು ಮಾತನಾಡುತ್ತಿದ್ದಾರೆ ಎಂಬ ಬಗ್ಗೆ ಚೂರು ಕೂಡ ಅಂದಾಜಿಲ್ಲದ ಆ ವಿದ್ಯಾರ್ಥಿನಿ ಕಕ್ಕಾಬಿಕ್ಕಿ.

English summary
While addressing a gathering of school children in Odisha, Rahul Gandhi apparently made ridiculed his intellect. A girl in the crowd and asked questions on sports and wished to know how Rahul Gandhi would help if he is voted to power. He flatly said, “He would “try” to make the ground wonderful”. Thereafter he started his speech on Rafale.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X