ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಮನೆಯಲ್ಲೇ ಇರೀ'' ಎಂದ ದೆವ್ವ: ಒಡಿಶಾದಲ್ಲಿ ಭೂತದ ಭಯ

|
Google Oneindia Kannada News

ಭುವನೇಶ್ವರ, ಮೇ 11: ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರೀ ಎಂದು ಜನರಿಗೆ ಎಷ್ಟೇ ಹೇಳಿದರೂ, ಕೆಲವರು ಆ ಮಾತು ಕೇಳುತ್ತಿಲ್ಲ. ಸರ್ಕಾರ, ಮಾದ್ಯಮಗಳು, ಪೊಲೀಸರ ನಂತರ ಈಗ ಭೂತದ ಮೂಲಕ ಜನರಿಗೆ ಮನೆಯಲ್ಲಿಯೇ ಇರಲು ಹೇಳಲಾಗಿದೆ.

Recommended Video

ಮದವೇರಿದ ಆನೆ ಮರದ ಮೇಲೆ ತನ್ನ ಕೋಪ ತೀರಿಸಿಕೊಂಡಿದ್ದು ಹೇಗೆ ಅಂತಾ ನೋಡಿ | Elephant | Oneindia Kannada

ಒಡಿಶಾದ ಹಳ್ಳಿಯೊಂದರಲ್ಲಿ ಅಲ್ಲಿನ ಗ್ರಾಮ ಪಂಚಾಯತಿ ಜನರಿಗೆ ಎಷ್ಟೇ ಹೇಳಿದರೂ ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಿರಲಿಲ್ಲ. ಜನರಿಗೆ ಬುದ್ದಿ ಹೇಳಿ ಸಾಕಾದ ಗ್ರಾಮ ಪಂಚಾಯತಿ ಸಿಬ್ಬಂದಿ ದೆವ್ವದ ಮೊರೆ ಹೋಗಿದ್ದಾರೆ. ಭೂತದ ಮೂಲಕ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

Ghost Roams Around The Streets And Warning People To Stay Indoors In Odisha

ಒಡಿಶಾದಲ್ಲಿ ಕ್ವಾರೆಂಟೈನ್ ಅವಧಿ ವಿಸ್ತರಣೆ: ವಿದೇಶದಿಂದ ಬಂದವರಿಗೆ ಈ ನಿಯಮ ಕಡ್ಡಾಯ ಒಡಿಶಾದಲ್ಲಿ ಕ್ವಾರೆಂಟೈನ್ ಅವಧಿ ವಿಸ್ತರಣೆ: ವಿದೇಶದಿಂದ ಬಂದವರಿಗೆ ಈ ನಿಯಮ ಕಡ್ಡಾಯ

ಜನರಲ್ಲಿ ಕೊರೊನಾ ಬಗ್ಗೆ ಭಯ ಹುಟ್ಟಿಸಲು ಗ್ರಾಮ ಪಂಚಾಯತಿ ಒಬ್ಬ ವ್ಯಕ್ತಿಗೆ ಭೂತದ ವೇಷ ಹಾಕಿಸಿದೆ. ಆ ವ್ಯಕ್ತಿ ಕಪ್ಪು ಸೀರೆ ಧರಿಸಿ, ಮುಖಕ್ಕೆ ಮೇಕಪ್ ಮಾಡಿಕೊಂಡು, ಗೆಜ್ಜೆ ಕಟ್ಟಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾರೆ. ದೆವ್ವದ ಸದ್ದಿಗೆ ಜನ ಮನೆ ಬೀಗ ಹಾಕಿ ಒಳಗೆ ಇದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಕೆಲವರು ಏನು ಕ್ರಿಯೇಟಿವಿಟಿ ಎಂದು ನಗುತ್ತಿದ್ದಾರೆ. ಇನ್ನು ಕೆಲವರು ಕಾಮಿಡಿ ಹಾರರ್‌ ಸಿನಿಮಾ ಎನ್ನುತ್ತಿದ್ದಾರೆ.

ಒಡಿಶಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 377ಕ್ಕೆ ಏರಿಕೆಯಾಗಿದೆ. 68 ಜನರು ವೈರಸ್‌ಗೆ ಬಲಿಯಾಗಿದ್ದಾರೆ.

English summary
Ghost that roams around the streets at night warning people to stay indoors in Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X