ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ ಆಸ್ಪತ್ರೆಯೊಳಗೆ ಬೆಂಕಿ: 127ಕ್ಕೂ ಹೆಚ್ಚು ಕೊವಿಡ್-19 ರೋಗಿಗಳ ರಕ್ಷಣೆ

|
Google Oneindia Kannada News

ಭುವನೇಶ್ವರ, ಸೆಪ್ಟೆಂಬರ್ 21: ಒಡಿಶಾದ ಆಸ್ಪತ್ರೆಯೊಳಗೆ ಅಗ್ನಿ ಅವಘಡ ಸಂಭವಿಸಿದ್ದು, 127 ಕ್ಕೂ ಹೆಚ್ಚು ಕೊವಿಡ್ 19 ರೋಗಿಗಳನ್ನು ರಕ್ಷಣೆ ಮಾಡಲಾಗಿದೆ.

ಸದ್ಗುರು ಕೊವಿಡ್ ಆಸ್ಪತ್ರೆಯ ಗ್ರೌಂಡ್‌ ಫ್ಲೋರ್‌ನಲ್ಲಿರುವ ಐಸಿಯುನಲ್ಲಿ ಶಾರ್ಟ್‌ ಸರ್ಕ್ಯೂಟ್ ಉಂಟಾದ ಕಾರಣ ಬೆಂಕಿ ಹೊತ್ತಿಕೊಂಡಿತ್ತು.

ಐಸಿಯು ತುಂಬಾ ಹೊಗೆ ತುಂಬಿಕೊಂಡಿತ್ತು, ತಕ್ಷಣವೇ ಜಾಗೃತಗೊಂಡು ಆಸ್ಪತ್ರೆ ಸಿಬ್ಬಂದಿ ಕೊವಿಡ್ ರೋಗಿಗಳನ್ನು ಆಸ್ಪತ್ರೆಯಿಂದ ಹೊರಗೆ ಕಳಿಸುವಲ್ಲಿ ಯಶಸ್ವಿಯಾದರು.ಸಾಕಷ್ಟು ಮಂದಿ ರೋಗಿಗಳು ಪ್ರಜ್ಞೆ ತಪ್ಪಿ ಬಿದ್ದಿದ್ದರು.

Fire Breaks Out At Odisha Hospital

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಆಂಬ್ಯುಲೆನ್ಸ್ ಹಾಗೂ ಬಸ್‌ಗಳಲ್ಲಿ ಕೊವಿಡ್ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಯಿತು.ಅಗ್ನಿ ಅವಘಡಕ್ಕೆ ನಿಜವಾದ ಕಾರಣ ತಿಳಿದುಬರಬೇಕಿದೆ. ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.

ಸದ್ಗುರು ಆಸ್ಪತ್ರೆಯಲ್ಲಿ 150 ಹಾಸಿಗೆಗಳಿವೆ, 24 ಐಸಿಯು ಹಾಸಿಗೆಗಳಿವೆ, ಕಳೆದ ತಿಂಗಳಿನಿಂದ ಕಾರ್ಯಾರಂಭ ಮಾಡಿದೆ. ಒಡಿಶಾದಲ್ಲಿ 4242 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

Recommended Video

Bangalore ಇನ್ನೂ ಕೆಲವು ದಿನ ಮಳೆ ಮುಂದುವರೆಯಲಿದೆ | Oneindia Kannada

ಆಗಸ್ಟ್ 6 ರಂದು ಅಹಮದಾಬಾದಿನಲ್ಲಿ ಮೂವರು ಮಹಿಳೆಯರು ಸೇರಿ 8 ಮಂದಿ ಕೊವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟಿದ್ದರು.
ಆಗಸ್ಟ್ 9 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ 10 ರೋಗಿಗಳು ಸಾವನ್ನಪ್ಪಿದ್ದರು.

English summary
At least 127 Covid patients in a hospital of Odisha’s Cuttack city had a narrow escape when a fire broke out in the ICU this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X