ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?

|
Google Oneindia Kannada News

ಭುವನೇಶ್ವರ, ಮೇ 15: ಒಡಿಶಾಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿ 64 ಜನರನ್ನು ಬಲಿಪಡೆದಿತ್ತು. ಇದರಿಂದ 525 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

291 ಕಿ.ಮೀ ವ್ಯಾಪ್ತಿಯ ಚರಂಡಿ, ಸುಮಾರು 750 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿವೆ. ಅಷ್ಟೇ ಅಲ್ಲದೆ ಕ್ರೀಡಾಂಗಣಗಳು, ಉದ್ಯಾನಗಳು, ಟೌನ್‌ಹಾಲ್‌ ಸೇರಿದಂತೆ ಇತರೆ ಕಟ್ಟಡಗಳಿಗೂ ಹೊಡೆದ ಬಿದ್ದಿದೆ.

ಫೋನಿ ಎಫೆಕ್ಟ್‌: ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ತಂಡಫೋನಿ ಎಫೆಕ್ಟ್‌: ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ತಂಡ

ಈ ಕುರಿತು ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಿ ಮಥಿವಥನಮ್ ಮಾಹಿತಿ ನೀಡಿದ್ದಾರೆ.

Fani cyclone Rs 525 crore infrastructure damage in Odisha

20 ನಗರಗಳಿಗೆ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಆಹಾರ ಯೋಜನೆಯ 27 ಸೆಂಟ್ರಲ್ ಕಿಚನ್‌ಗಳು ಹಾನಿಗೀಡಾಗಿವೆ. 21 ಸಾವಿರ ಬೀದಿದೀಪಗಳಿಗೆ ಹಾನಿ ಉಂಟಾಗಿದೆ. ಎಲ್ಲಾ ಸೇರಿ 525 ಕೋಟಿ ರೂ ನಷ್ಟು ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?

ಚಂಡಮಾರುತದಿಂದ ಮೃತಪಟ್ಟವರ ಸಂಖ್ಯೆ 64ಕ್ಕೇರಿದೆ ಅದರಲ್ಲಿ ಪುರಿ ಒಂದೇ ಕಡೆ 39 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1.65 ಕೋಟಿ ರೂ. ಜನಸಂಖ್ಯೆಯಲ್ಲಿ 34 ಲಕ್ಷ ಮಂದಿ ಫೋನಿ ಚಂಡಮಾರುತದಿಂದ ತೊಂದರೆ ಅನುಭವಿಸಿರುವುದಾಗಿ ಒಡಿಶಾ ಸರ್ಕಾರ ತಿಳಿಸಿದೆ.

English summary
The Housing and Urban Development department on Tuesday said that Cyclone Fani that hit the Odisha coast on May 3 damaged Rs 525 crore worth of assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X