ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫನಿ' ಚಂಡಮಾರುತದ ಪರಿಣಾಮ: ಚುನಾವಣಾ ನೀತಿ ಸಂಹಿತೆ ವಾಪಸ್

|
Google Oneindia Kannada News

ನವದೆಹಲಿ, ಮೇ 1: 'ಫನಿ' ಚಂಡಮಾರುತ ಒಡಿಶಾದ ಕರಾವಳಿಗೆ ಸಮೀಪ ಬಂದಿದ್ದು, ಮತ್ತಷ್ಟು ಪ್ರಬಲಗೊಂಡಿದೆ. ರಾಜ್ಯದಾದ್ಯಂತ 'ಎಲ್ಲೋ ಅಲರ್ಟ್' ಘೋಷಿಸಲಾಗಿದೆ. ಅಲ್ಲಿನ ಶಾಲಾ ಕಾಲೇಜುಗಳಿಗೆ ಗುರುವಾರದಿಂದ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ನಡುವೆ ಭಾರಿ ಮಳೆ, ಬಿರುಗಾಳಿಯ ಭೀತಿಗೆ ಒಳಗಾಗಿರುವ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

ಕರಾವಳಿಯಲ್ಲಿ ಹೈ ಅಲರ್ಟ್: ಮಳೆ ಅಬ್ಬರ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆಕರಾವಳಿಯಲ್ಲಿ ಹೈ ಅಲರ್ಟ್: ಮಳೆ ಅಬ್ಬರ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ

ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ನೀತಿ ಸಂಹಿತೆಯನ್ನು ತೆಗೆದುಹಾಕಲಾಗಿದೆ.

Fani cyclone effect rain election commission lifts code of conduct in coastal district of Odisha

ಪುರಿ, ಜಗತ್‌ ಸಿಂಗಪುರ್, ಕೇಂದ್ರಪರ, ಭದ್ರಾಕ್, ಬಾಲಸೋರ್, ಮಯೂರ್ ಭಂಜ್, ಗಜಪತಿ, ಗಂಜಂ, ಖುರ್ದಾ, ಕಟಕ್ ಮತ್ತು ಜಾಜ್ಪುರಗಳಲ್ಲಿ ಪರಿಹಾರ, ರಕ್ಷಣೆ ಕಾರ್ಯಗಳನ್ನು ನಡೆಸಲು ಚುನಾವಣಾ ನೀತಿ ಸಂಹಿತೆ ಹಿಂಪಡೆಯಲಾಗಿದೆ.

ಬೆಂಗಳೂರಿನಲ್ಲಿ ಮಳೆ, ಇನ್ನೂ ಎರಡು ದಿನ ಅಬ್ಬರ ಸಾಧ್ಯತೆ ಬೆಂಗಳೂರಿನಲ್ಲಿ ಮಳೆ, ಇನ್ನೂ ಎರಡು ದಿನ ಅಬ್ಬರ ಸಾಧ್ಯತೆ

ಗುರುವಾರ ಸಂಜೆಯ ಒಳಗೆ ಪುರಿ ಪಟ್ಟಣದಿಂದ ಹೊರಹೋಗುವಂತೆ ಒಡಿಶಾ ಅಧಿಕಾರಿಗಳು ಪ್ರವಾಸಿಗರಿಗೆ ಸೂಚಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರಿ ಮಳೆ ಸಂಭವ ಇರುವುದರಿಂದ ಅನಗತ್ಯವಾಗಿ ಅಲ್ಲಿಗೆ ಪ್ರಯಾಣ ಬೆಳೆಸದಂತೆ ಎಚ್ಚರಿಸಿದ್ದಾರೆ.

ಚಂಡಮಾರುತ ಬರುವ ಮುನ್ನ, ಬಂದ ಮೇಲೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನು? ಚಂಡಮಾರುತ ಬರುವ ಮುನ್ನ, ಬಂದ ಮೇಲೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಏನು?

ಗಂಜಾಂ, ಗಜಪತಿ, ಪುರಿ, ಜಗತ್‌ ಸಿಂಗಪುರ್, ಖುರ್ದಾ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸುವ ನಿರೀಕ್ಷೆಯಿದೆ. ಅಲ್ಲದೆ, ಕೇಂದ್ರಪರ, ಭದ್ರಾಕ್, ಜಾಜ್ಪುರ ಮತ್ತು ಬಾಲಸೋರ್‌ಗಳಲ್ಲಿ ಚಂಡಮಾರುತ ತೀವ್ರ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
Election Commission has lifted Code of Conduct in coastal district of Odisha to ensure that the state government's preparations to do rescue and relief efforts effect of Fani cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X