ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕಾಪಡೆ ಹಡಗುಗಳ ಶತ್ರು ಕ್ಷಿಪಣಿಯಿಂದ ಕಾಪಾಡಬಲ್ಲ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ

|
Google Oneindia Kannada News

ಭುವನೇಶ್ವರ, ಏಪ್ರಿಲ್ 5: ಭಾರತೀಯ ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿಯಿಂದ ಕಾಪಾಡಬಲ್ಲ ಸುಧಾರಿತ ತಂತ್ರಜ್ಞಾನವನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ. ಭಾರತೀಯ ನೌಕಾಪಡೆ ಇತ್ತೀಚೆಗೆ ಅರೇಬಿಯನ್ ಸಮುದ್ರದಲ್ಲಿ ಎಲ್ಲಾ ಮೂರು ರಾಕೆಟ್ ಗಳ ಪ್ರಾಯೋಗಿಕ ಪರೀಕ್ಷೆ ನಡೆಸಿತು ಮತ್ತು ಅವುಗಳ ಕಾರ್ಯಕ್ಷಮತೆ ತೃಪ್ತಿಕರವಾಗಿದೆ.

ನೌಕಾ ಹಡಗುಗಳನ್ನು ಶತ್ರುಗಳ ರೇಡಾರ್ ಮತ್ತು ರೇಡಿಯೊ ಫ್ರೀಕ್ವೆನ್ಸಿ ಕ್ಷಿಪಣಿ ಅನ್ವೇಷಕರಿಂದ ರಕ್ಷಿಸಲು ಚಾಫ್ ವಿಶ್ವಾದ್ಯಂತ ಬಳಸಲಾಗುವ ನಿಷ್ಕ್ರಿಯ ಮಾಡಬಹುದಾದ ಎಲೆಕ್ಟ್ರಾನಿಕ್ ಕೌಂಟರ್‌ಮೆಶರ್ ತಂತ್ರಜ್ಞಾನವಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜಸ್ಥಾನದಲ್ಲಿ ಆಕಾಶ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತೀಯ ಸೇನೆರಾಜಸ್ಥಾನದಲ್ಲಿ ಆಕಾಶ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಭಾರತೀಯ ಸೇನೆ

ಡಿಆರ್‌ಡಿಒ ಘಟಕದ ಜೋಧ್‌ಪುರ ಡಿಫೆನ್ಸ್ ಲ್ಯಾಬೊರೇಟರಿ(ಡಿಎಲ್‌ಜೆ) ಈ ನಿರ್ಣಾಯಕ ತಂತ್ರಜ್ಞಾನದ ಮೂರು ರೂಪಾಂತರಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ - ಲಾಂಗ್ ರೇಂಜ್ ಚಾಫ್ ರಾಕೆಟ್(ಎಲ್‌ಆರ್‌ಸಿಆರ್), ಮಧ್ಯಮ ಶ್ರೇಣಿ ಚಾಫ್ ರಾಕೆಟ್(ಎಂಆರ್‌ಸಿಆರ್) ಮತ್ತು ಶಾರ್ಟ್ ರೇಂಜ್ ಚಾಫ್ ರಾಕೆಟ್ (ಎಸ್‌ಆರ್‌ಸಿಆರ್)ಗಳು ಭಾರತೀಯ ನೌಕಾಪಡೆಯ ಅಗತ್ಯಗಳನ್ನು ಪೂರೈಸಲಿವೆ.

DRDO Develops Advanced Chaff Technology To Safeguard Naval Ships Against Enemy Missile Attacks

ಭಾರತೀಯ ಸೇನೆ ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಆಕಾಶ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖ್ರಾನ್ ಪ್ರದೇಶದಲ್ಲಿ ಮಂಗಳವಾರ ದೇಶೀ ನಿರ್ಮಿತ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, ಈ ಕ್ಷಿಪಣಿಯನ್ನು ಭಾರತೀಯ ವಾಯುಪಡೆ (ಐಎಎಫ್) ಬಳಸಲಿದೆ.

40 ಕಿ.ಮೀ ದೂರದಲ್ಲೇ ದೊಡ್ಡ ವೈಮಾನಿಕ ದಾಳಿಯನ್ನು ತಡೆಯುವ ಸಾಮರ್ಥ್ಯದೊಂದಿಗೆ ಇದನ್ನು ನಿರ್ಮಿಸಲಾಗಿದೆ. ಶತ್ರು ಸೈನ್ಯದ ಅತಿ ವೇಗದ ವೈಮಾನಿಕ ದಾಳಿಯ ಗುರಿಯನ್ನು ಆಕಾಶ್ ಕ್ಷಿಪಣಿ ನಾಶಪಡಿಸುತ್ತದೆ.

English summary
The Defence Research and Development Organization (DRDO) has developed advanced chaff technology to safeguard India’s naval ships against missile attacks from enemies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X