ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು ಫೆಬ್ರವರಿ.03, ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ಬೆಂಗಳೂರು ಹೊರವಲಯದಲ್ಲಿರುವ ಯಲಹಂತ ವಾಯುನೆಲೆಯಲ್ಲಿ ಚಾಲನೆ ಸಿಕ್ಕಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತಿ ವಹಿಸಿದ್ದರು.

Recommended Video

#AeroIndia2021: 13ನೇ ಆವೃತ್ತಿಯ ಏರ್ ಶೋಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | Oneindia Kannada

ಬಾನಂಗಳದಲ್ಲಿ ರಾಷ್ಟ್ರ ಧ್ವಜ, ಭಾರತೀಯ ವಾಯುಪಡೆ ಧ್ವಜ ಹಾಗೂ ಏರೋ ಇಂಡಿಯಾ 2021ರ ಬಾವುಟವನ್ನು ಹೊತ್ತ ಎಂಐ-17 ಹೆಲಿಕಾಪ್ಟರ್ ಗಳು ಹಾರಾಡುವ ಮೂಲಕ ಐತಿಹಾಸಿಕ ವೈಮಾನಿಕ ಪ್ರದರ್ಶನಕ್ಕೆ ನಾಂದಿ ಹಾಡಿದವು.

ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮು ಏರೋ ಇಂಡಿಯಾ 2021: ಯಲಹಂಕ ವಾಯುನೆಲೆಯಲ್ಲಿ ಅಂತಿಮ ತಾಲೀಮು

ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದಲ್ಲಿ ಏರೋ ಇಂಡಿಯಾ 2021ರ ಪ್ರದರ್ಶನವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಈ ಬಾರಿ ಏರೋ ಇಂಡಿಯಾ ಪ್ರದರ್ಶನವು ಭಾರತ ಮತ್ತು ಅಮೆರಿಕಾದ ನಡುವಿನ ಕಾರ್ಯತಂತ್ರ ಹಾಗೂ ಎರಡು ರಾಷ್ಟ್ರಗಳ ನಡುವಿನ ಸಹಭಾಗಿತ್ವದ ಸಂಕೇತ ಎನ್ನಲಾಗಿದೆ.

Defence Minister Rajnath Singh inaugurates the 13th edition of Aero India show at Yelahanka


ಏರೋ ಇಂಡಿಯಾ ಪ್ರದರ್ಶನ ಆಕರ್ಷಣೆ:

ಏರೋ ಇಂಡಿಯಾ 13ನೇ ಆವೃತ್ತಿಯ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ ಹಾಗೂ ಸಾರಂಗ್ ತಂಡಗಳ ಜಂಟಿ ಪ್ರದರ್ಶನ ನೀಡಲಿವೆ. ಇದರ ಜೊತೆಗೆ ಅಮೆರಿಕಾದ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ನೀಡಲಿರುವ 'ಫ್ಲೈ ಬೈ' ಪ್ರದರ್ಶನವು ಪ್ರಮುಖ ಆಕರ್ಷಣೆ ಆಗಿದೆ.

Defence Minister Rajnath Singh inaugurates the 13th edition of Aero India show at Yelahanka

ಕೊರೊನಾವೈರಸ್ ಮಾರ್ಗಸೂಚಿ ಪಾಲನೆ ಕಡ್ಡಾಯ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿಯ ನಡುವೆ ಏರೋ ಇಂಡಿಯಾ 2021ರ ಕಾರ್ಯಕ್ರಮವನ್ನು ಫೆಬ್ರವರಿ. 3 ರಿಂದ 5 ರವರೆಗೆ ನಿಗದಿಗೊಳಿಸಲಾಗಿದೆ. ಪ್ರತಿವರ್ಷ ಐದು ದಿನಗಳ ಕಾಲ ನಡೆಯುತ್ತಿದ್ದ ಏರ್ ಇಂಡಿಯಾ ಶೋವನ್ನು ಈ ಬಾರಿ ಕೇವಲ ಮೂರು ದಿನಕ್ಕೆ ಇಳಿಕೆ ಮಾಡಲಾಗಿದೆ. ಆಮೆರಿಕ ಸರ್ಕಾರದ ನಿಯೋಗವು ಭಾರತ ಸರ್ಕಾರ ಹಾಗೂ ಅಮೆರಿಕ ರಕ್ಷಣಾ ಇಲಾಖೆಯ ಶಿಷ್ಟಾಚಾರಗಳನ್ನು ಹಾಗೂ ಕೋವಿಡ್ 19 ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಮಾಸ್ಕ್ ಧರಿಸುವುದು, ಪ್ರಯಾಣಕ್ಕೂ 72 ಘಂಟೆಗಳ ಮುನ್ನ ಕೊವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಳ್ಳುವುದು, ರಸ್ ಹರಡದಂತೆ ಕಡ್ಡಾಯವಾಗಿ ಮಿಲಿಟರಿ ವಿಮಾನದಲ್ಲೇ ಪ್ರಯಾಣಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ಸೇರಿಸಲಾಗಿದೆ.

English summary
Aero India 2021: Defence Minister Rajnath Singh inaugurates the 13th edition of Aero India show at Yelahanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X