• search
 • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಫೋನಿ' ರುದ್ರನರ್ತನ: ಭಯಾನಕ ಚಂಡಮಾರುತದ ವಿಡಿಯೋ

|
   ಮಳೆ ಉಪಕಾರಿಯೂ ಹೌದು, ಮಾರಿಯೂ ಹೌದು

   ಚದುರಿ ಹೋಗುವಂತೆ ಅಲ್ಲಾಡುವ ಮರಗಿಡಗಳು, ನೋಡು ನೋಡುತ್ತಿದ್ದಂತೆಯೇ ಸಮುದ್ರದಂತಾಗುತ್ತಿರುವ ರಸ್ತೆ, ಮನೆಯ ಮೇಲ್ಛಾವಣಿಯೇ ಹಾರಿಹೋಗುತ್ತಿರುವ ದೃಶ್ಯ, ಧೋ ಎಂದು ಸುರಿಯುತ್ತಿರುವ ಮಳೆ... ಇದು 'ಫೋನಿ'ಯ ರುದ್ರ ನರ್ತನದ ಚಿತ್ರಣ.

   ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಎದ್ದಿರುವ 'ಫೋನಿ' ಚಂಡಮಾರುತ ಶುಕ್ರವಾರ ಒಡಿಶಾಕ್ಕೆ ಪದಾರ್ಪಣೆ ಮಾಡಿದ್ದು, ಸುಮಾರು 11 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ್ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಸೂಚನೆ ನೀಡಲಾಗಿದೆ.

   ಒಡಿಶಾದಿಂದ ಕೇವಲ 80 ಕಿ.ಮೀ ದೂರದಲ್ಲಿ 'ಫ್ಯಾನಿ' ಚಂಡಮಾರುತ

   ಈಗಾಗಲೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನೂ ತೆರವುಗೊಳಿಸಲಾಗಿದ್ದು,ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ರಾಷ್ಟ್ರೀಯ ವಿಪತ್ತು ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

   ಫ್ಯಾನಿ ಅಬ್ಬರದಿಂದಾಗಿ ಆಂಧ್ರಪ್ರದೇಶ, ತಮಿಳುನಾಡುಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಒಡಿಶಾದಲ್ಲಿ 'ಫೋನಿ' ಚಂಡಮಾರುತದಿಂದಾಗಿ ಮಳೆ ಆರಂಭವಾಗಿದ್ದು, ಚಂಡಮಾರುತ ಭಯಾನಕ ವಿಡಿಯೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ಇಲ್ಲಿವೆ.

   ಎಲ್ಲರೂ ಸುರಕ್ಷಿತವಾಗಿರಿ

   ಒಡಿಶಾದಲ್ಲಿ ಸೈಕ್ಲೋನ್ 'ಫೋನಿ' ಪದಾರ್ಪಣೆ ಮಾಡಿದೆ. ಒಡಿಶಾಕ್ಕಾಗಿ ನಮ್ಮ ಪ್ರಾರ್ಥನೆ. ಎಲ್ಲರೂ ಸುರಕ್ಷಿತವಾಗಿರಿ- ರೋಹಿತ್ ಚೌಧರಿ

   ಪುರಿ ಈಗ ಹೇಗಿದೆ ನೋಡಿ!

   ಒಡಿಶಾದ ಪ್ರಸಿದ್ಧ ಪುರಿಯೂ 'ಫೋನಿ' ಅಬ್ಬರಕ್ಕೆ ತತ್ತರಿಸಿದೆ. ಧಾರಾಕಾರ ಮಳೆ ಮತ್ತು ಭಾರೀ ಗಾಳಿಯೊಂದಿಗೆ ಫ್ಯಾನಿ ಅಪ್ಪಳಿಸಿದೆ- ರುಬೇನ್ ಬ್ಯಾನರ್ಜಿ

   ಇದೇ ಮೊದಲಲ್ಲ ಫೋನಿ ಸೈಕ್ಲೋನ್ ಹಿಂದೆಯೂ ಒಡಿಶಾಕ್ಕೆ ಅಪ್ಪಳಿಸಿತ್ತು

   ಕಣ್ಣೆದುರಲ್ಲೇ ಕಿತ್ತುಬರುವ ರಸ್ತೆಗಳು!

   ದ್ವಿಚಕ್ರ ವಾಹನದಲ್ಲಿ ರಸ್ತೆಯಲ್ಲಿ ಹೋಗುತ್ತಿರುವಾಗಲೇ, ಕಣ್ಣೆದುರಲ್ಲೇ ರಸ್ತೆ ಕಿತ್ತುಬರುತ್ತಿರುವ ವಿಡಿಯೋ 'ಫೋನಿ'ಯ ರುದ್ರನರ್ತನಕ್ಕೆ ಸಾಕ್ಷಿಯಾಗಿದೆ.

   ಭಯಾನಕ ಅಲೆಗಳು

   ಒಡಿಶಾದ ಪರದಿಪ್ ಸಾಗರ ತೀರದಲ್ಲಿ ಭಾರೀ ಮಳೆ ಮತ್ತು ಗಾಳಿಯೊಂದಿಗೆ ಭಯಾನಕ ಅಲೆಗಳು ಎದ್ದ ದೃಶ್ಯ.

   ಯಾವುದೇ ಹಾನಿಹಾಗದಿರಲಿ

   ಈಗಾಗಲೇ ಒಡಿಶಾದಲ್ಲಿ ಮಳೆ ಆರಂಭವಾಗಿದೆ. ಈ ದೃಶ್ಯಗಳು ಸಾಕಷ್ಟು ಭಯಾನಕವಾಗಿದೆ. ಒಡಿಶಾದ ಸುರಕ್ಷತೆಗಾಗಿ ಪ್ರಾರ್ಥಿಸೋಣ- ಅನುಪಮಾ

   English summary
   Cyclone Fani which hits Odisha will expected to create havoc in the state. Government has taken precautionary measure to prevent casualties. Here are some videos of Cyclone Fani
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X