ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬಲಸಾಧ್ಯ! ಫೋನಿ ಹೊಡೆತಕ್ಕೆ ಹೇಗಾಗಿತ್ತು ನೋಡಿ ಒಡಿಶಾ: ನಾಸಾ ಚಿತ್ರ

|
Google Oneindia Kannada News

ಭುವನೇಶ್ವರ, ಮೇ 09: 'ಫೋನಿ' ಚಂಡಮಾರುತಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಶ್ನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಸಂಸ್ಥೆ(ನಾಸಾ) ಬಿಡುಗಡೆ ಮಾಡಿದ ಚಿತ್ರಗಳು ಸೈಕ್ಲೋನ್ ನ ಭೀಕರತೆಗೆ ಸಾಕ್ಷಿಯಾಗಿದೆ. ಕೆಲ ಹೊತ್ತು ಒಡಿಶಾದ ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಅನ್ನು ಕಗ್ಗತ್ತಲಲ್ಲಿ ಮುಳುಗಿಸಿದ್ದ ಫೋನಿ ಅವಾಂತರವನ್ನು ಈ ಚಿತ್ರಗಳು ಸೆರೆಹಿಡಿದಿವೆ.

ಫೋನಿ ಚಂಡಮಾರುತದಿಂದಾಗಿ ಒಡಿಶಾದಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಬಿದ್ದು, ವಿದ್ಯುತ್ ಸರಬರಾಜು ಹಲವೆಡೆ ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ತೆಗೆಯಲಾದ ಚಿತ್ರ ಫೋನಿಗೂ ಮೊದಲು ಭುವನೇಶ್ವರ ಮತ್ತು ಕಟಕ್ ಹೇಗಿದ್ದವು, ಫೋನಿ ನಂತರ ಹೇಗಾದವು ಎಂಬುದನ್ನು ತೋರಿಸಿಕೊಟ್ಟಿವೆ.

Cyclone Fani: NASA releases images of Odisha before and after

ಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋಫೋನಿ ನಂತರ ಒಡಿಶಾ ಹೇಗಾಗಿದೆ ನೋಡಿ: ವೈಮಾನಿಕ ವಿಡಿಯೋ

ಏಪ್ರಿಲ್ 30 ರಂದು ಬಿಜು ಏರ್ಪೋರ್ಟ್ ಮತ್ತು ಪಟಿಯಾ ಹೇಗಿತ್ತು ಮತ್ತು ಮೇ 05 ರಂದು ಹೇಗಾಗಿತ್ತು ಎಂಬ ಚಿತ್ರವನ್ನು ನಾಸಾ ಟ್ವೀಟ್ ಮಾಡಿದೆ. ಜೊತೆಗೆ ಏಪ್ರಿಲ್ 30 ರಂದು ಇಲ್ಲಿನ ಪ್ರೊಫೆಸರ್ ಕಾಲೋನಿ ಹೇಗಿತ್ತು, ಮೇ 4 ರಂದು ಹೇಗಾಗಿತ್ತು ಎಂಬ ಚಿತ್ರವನ್ನೂ ನಾಸಾ ನೀಡಿದೆ.

'ಫೋನಿ' ಸಮೀಕ್ಷೆಗೆ ಬಂದು ಪಟ್ನಾಯಕ್ ಗೆ ಸಲಾಂ ಎಂದ ಮೋದಿ'ಫೋನಿ' ಸಮೀಕ್ಷೆಗೆ ಬಂದು ಪಟ್ನಾಯಕ್ ಗೆ ಸಲಾಂ ಎಂದ ಮೋದಿ

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಫೋನಿ ಚಂಡಮಾರುತ ಎದ್ದಿತ್ತು. ಈ ಚಂಡಮಾರುತದ ಅಬ್ಬರಕ್ಕೆ ಒಟ್ಟು 40 ಜನ ಮೃತರಾಗಿದ್ದರು.

English summary
NASA(National Aeronautics and Space Administration) releases several pictures of city lightings before and after Fani cyclone in Bhubaneswar and Cuttack, Odisha, twin cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X