ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯನ್ನು ಮಕಾಡೆ ಮಲಗಿಸಿದ ಫೋನಿ, ಕುಟುಂಬಕ್ಕೆ ಶೌಚಾಲಯವೇ ಸೂರು!

|
Google Oneindia Kannada News

ಕೇಂದ್ರಾಪಾರ(ಒಡಿಶಾ), ಮೇ 18: ಕಳೆದ ಕೆಲ ದಿನಗಳ ಹಿಂದೆ ಒಡಿಶಾ ರಾಜ್ಯವನ್ನು ಅಲ್ಲೋಕಲ್ಲೋಲ ಮಾಡಿದ ಫೋನಿ ಚಂಡಮಾರುತದಲ್ಲಿ ಜೀವ ಕಳೆದುಕೊಂಡವರು ಕೆಲವರಾದರೆ, ಮನೆ ಕಳೆದುಕೊಂಡವರು ಮತ್ತಷ್ಟು ಜನ. ಬದುಕಲ್ಲಿ ಭರವಸೆ ಕಳೆದುಕೊಂಡವರು ಮತ್ತೆಷ್ಟೋ ಜನ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಚಂಡಮಾರುತದಿಂದ ಮನೆಯನ್ನು ಕಳೆದುಕೊಂಡ ರಘುದೇಯ್ಪುರ ಎಂಬ ಹಳ್ಳಿಯ ಖಿರೋಡ್ ಜೆನಾ ಎಂಬ ವ್ಯಕ್ತಿಯೊಬ್ಬರು 7x6ಅಡಿಯ ಶೌಚಾಲಯದಲ್ಲಿ ಬದುಕು ನಡೆಸುತ್ತಿದ್ದಾರೆ, ಪತ್ನಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ!

ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?ಸೈಕ್ಲೋನ್ ಫೋನಿಯಿಂದ ಒಡಿಶಾಕ್ಕೆ ಆದ ನಷ್ಟವೆಷ್ಟು?

ಅಚ್ಚರಿ ಎಂದರೆ ಫೋನಿ ಚಂಡಮಾರುತ ಅಪ್ಪಳಿಸುವುದಕ್ಕೂ ಎರಡು ದಿನ ಮೊದಲು ಜೇನಾಗೆ ಸರ್ಕಾರದ ಕಡೆಯಿಂದ ಶೌಚಾಲಯ ಕಟ್ಟಿಸಿಕೊಡಲಾಗಿತ್ತು! ಆ ಶೌಚಾಲಯವೇ ಇಂದು ಆತನಿಗೆ ಆಸರೆಯಾಗಿದೆ.

Cyclone Fani effect: family lives in a toilet in Odisha

ಮೇ 3 ರಂದು ಒಡಿಶಾದ ಕೇಂದ್ರಪಾರಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತದಿಂದಾಗಿ ಜೇನಾನ ಮನೆ ನಾಶವಾಗಿತ್ತು. ಕಡುಬಡತನದಿಂದ ಬಳಲುತ್ತಿದ್ದ ಈ ಕುಟುಂಬಕ್ಕೆ ಆಸರೆಯೇ ಇಲ್ಲದಂತಾಗಿದ್ದಾಗ ಕಾಣಿಸಿದ್ದು ಒಂದು ಶೌಚಾಲಯ! ಮತ್ತೆ ಮನೆ ಕಟ್ಟುವುದಕ್ಕೂ ಹಣವಿಲ್ಲದ ಜೇನಾ ಸರ್ಕಾರದಿಂದ ತಮಗೆ ಏನಾದರೂ ಸಹಾಯ ಸಿಗುತ್ತದಾ ಎಂಬ ನಿರೀಕ್ಷೆಯಲ್ಲಿದ್ದಾರೆ.

ನಂಬಲಸಾಧ್ಯ! ಫೋನಿ ಹೊಡೆತಕ್ಕೆ ಹೇಗಾಗಿತ್ತು ನೋಡಿ ಒಡಿಶಾ: ನಾಸಾ ಚಿತ್ರ ನಂಬಲಸಾಧ್ಯ! ಫೋನಿ ಹೊಡೆತಕ್ಕೆ ಹೇಗಾಗಿತ್ತು ನೋಡಿ ಒಡಿಶಾ: ನಾಸಾ ಚಿತ್ರ

ಮೇ ಮೊದಲ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಬಾರ ಕುಸಿತದಿಂದ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಫೋನಿ ಚಂಡಮಾರುತ ಕಾಣಿಸಿಕೊಂಡಿತ್ತು. ಈ ಚಂಡಮಾರುತಕ್ಕೆ ಇದುವರೆಗೂ ಐವತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.

English summary
Here is a story of a man fromKendrapara in Odisha, who has been living in a toilet with his wife and daughters after Cyclone Fani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X