• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಡಿಶಾದಲ್ಲಿ ಶಾಲಾ-ಕಾಲೇಜು ಸಿನಿಮಾ ಥಿಯೇಟರ್ ಬಂದ್ ಬಂದ್

|

ಭುವನೇಶ್ವರ್, ಮಾರ್ಚ್.13: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಭಾರತೀಯರಲ್ಲೂ ಭೀತಿ ಹುಟ್ಟಿಸಿದೆ. ಒಡಿಶಾದಲ್ಲಿ ಇನ್ನೊಂದು ತಿಂಗಳು ಎಲ್ಲವೂ ಸ್ತಬ್ಧಗೊಳ್ಳಲಿದೆ. ಮಾರ್ಚ್.31ರವರೆಗೂ ಶಾಲಾ-ಕಾಲೇಜು ಸಿನಿಮಾ ಥಿಯೇಟರ್ ಗಳನ್ನು ಬಂದ್ ಮಾಡುವಂತೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆದೇಶಿಸಿದ್ದಾರೆ.

ಒಡಿಶಾ ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮಾರ್ಚ್.31ರವರೆಗೂ ಬಂದ್ ಆಗಲಿವೆ ಎಂದು ಘೋಷಿಸಿದರು.

ಮಾರ್ಚ್ 14ರಿಂದ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಆದೇಶ

ಮಾರಕ ಕೊರೊನಾ ವೈರಸ್ ಭೀತಿ ಹಿನ್ನೆಲೆ ಶಾಲಾ-ಕಾಲೇಜುಗಳಷ್ಟೇ ಅಲ್ಲದೇ ರಾಜ್ಯದಲ್ಲಿರುವ ಸಿನಿಮಾ ಥಿಯೇಟರ್ ಗಳು ಹಾಗೂ ಮಾಲ್ ಗಳನ್ನು ಕೂಡಾ ಬಂದ್ ಮಾಡುವಂತೆ ಸಿಎಂ ನವೀನ್ ಪಟ್ನಾಯಕ್ ಸೂಚನೆಯನ್ನು ನೀಡಿದ್ದಾರೆ.

ದೆಹಲಿಯಲ್ಲೂ ಶಾಲಾ-ಕಾಲೇಜು, ಸಿನಿಮಾ ಥಿಯೇಟರ್ ಬಂದ್:

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರ್ಚ್.31ರವರೆಗೂ ಶಾಲಾ-ಕಾಲೇಜು ಮತ್ತು ಸಿನಿಮಾ ಮಂದಿರಗಳನ್ನು ಬಂದ್ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಬುಧವಾರವಷ್ಟೇ ಕೊರೊನಾ ವೈರಸ್ ಒಂದು ಪಿಡುಗು ಎಂದು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತ್ತು.

English summary
Coronavirus: Cinema Theater, School And Colleges Shut Till March.31 In Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X