ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಡಿ ಜೊತೆ ಮೈತ್ರಿ ಸೂಚನೆ ನೀಡಿದ ಮೋದಿ ಮಾತು: ಕಾಂಗ್ರೆಸ್ ಆರೋಪ

|
Google Oneindia Kannada News

ಭುವನೇಶ್ವರ, ಡಿಸೆಂಬರ್ 26: "ಪ್ರಧಾನಿ ನರೇಂದ್ರ ಓದಿಯವರು ಒಡಿಶಾದಲ್ಲಿ ಮಾಡಿದ ಭಾಷಣ ಬಿಜು ಜನತಾ ದಳ(ಬಿಜೆಡಿ) ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆಗೆ ಸೂಚನೆ" ಎಂದು ಕಾಂಗ್ರೆಸ್ ಆರೋಪಿಸಿದೆ.

ಸೋಮವಾರ ಒಡಿಶಾದದಲ್ಲಿ ಭಾಷಣ ಮಾಡುತ್ತಿದ್ದ ಮೋದಿ, ಒಡಿಶಾ ಸರ್ಕಾರವನ್ನು ಟೀಕಿಸಿದರಾದರೂ ಎಲ್ಲೂ ಬಿಜೆಡಿ ಬಗ್ಗೆಯಾಗಲೀ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಗ್ಗೆಯಾಗಲೀ ಸೊಲ್ಲೆತ್ತಲಿಲ್ಲ. ಪಕ್ಷದ ಹೆಸರನ್ನಾಗಲೀ, ಮುಖ್ಯಮಂತ್ರಿಯ ಹೆಸರನ್ನಾಗಲೀ ಉಲ್ಲೇಖಿಸದೆ ಪರೋಕ್ಷವಾಗಿ ಮಾತಿನ ಪ್ರಹಾರ ನಡೆಸಿ ಜಾಣ ನಡೆ ಇಟ್ಟರು. ಮೋದಿಯವರ ಈ ನಡೆ ಬಿಜೆಪಿ ಮತ್ತು ಬಿಜೆಡಿ ನಡುವೆ ಏರ್ಪಡಬಹುದಾದ ಸಂಭಾವ್ಯ ಮೈತ್ರಿಯ ಸೂಚನೆ ನೀಡಿತ್ತು.

2018ರಲ್ಲಿ ವಿರೋಧ ಪಕ್ಷಗಳನ್ನು ಬೆಂಡೆತ್ತಿದ ಪ್ರಧಾನಿ ನರೇಂದ್ರ ಮೋದಿ ಭಾಷಣಗಳು2018ರಲ್ಲಿ ವಿರೋಧ ಪಕ್ಷಗಳನ್ನು ಬೆಂಡೆತ್ತಿದ ಪ್ರಧಾನಿ ನರೇಂದ್ರ ಮೋದಿ ಭಾಷಣಗಳು

ಈ ಕುರಿತು ಪ್ರತಿಕ್ರಿಯೆ ನೀಡಿದ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಿರಂಜನ್ ಪಟ್ನಾಯಕ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಬ್ಬರೂ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸುಳ್ಳು ಆಶ್ವಾಸನೆ ನೀಡುತ್ತಿರುವುದು ಸರಿಯಲ್ಲ ಎಂದರು.

Congress says, Modis speech exposes secret ties between BJP and BJD

ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!

ಆದರೆ ಬಿಜೆಪಿ-ಬಿಜೆಡಿ ಮೈತ್ರಿ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಗೆ ಪ್ರತ್ಯುತ್ತರ ನೀಡಿದ ಬಿಜೆಡಿ, ನಾವು ಕಾಮಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ಸಂಯುಕ್ತ ಕೂಟ ನಿರ್ಮಿಸುವ ಉದ್ದೇಶ ಹೊಂದಿದ್ದೇವೆ. ಆದ್ದರಿಂದ ಕಾಂಗ್ರೆಸ್ ನ ಆರೋಪ ಆಧಾರ ರಹಿತ ಮತ್ತು ಹುರುಳಿಲ್ಲದ್ದು ಎಂದಿದೆ.

English summary
With Chief Minister Naveen Patnaik and his party not figuring in Prime Minister Narendra Modi’s scathing speech against the Odisha government, the Congress Tuesday said the “secret ties” between the BJP and the BJD had been exposed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X