India
  • search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರ ಮೇಲೆ ನುಗ್ಗಿದ ಬಿಜೆಡಿ ಶಾಸಕರ ವಾಹನ: ಮಹಿಳೆ ಸಾವು, ಹಲವರಿಗೆ ಗಾಯ

|
Google Oneindia Kannada News

ಭುವನೇಶ್ವರ, ಮಾರ್ಚ್ 12: ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ಶನಿವಾರ ಖೋರ್ಧಾ ಜಿಲ್ಲೆಯ ಬಾನ್ಪುರ್ ಬ್ಲಾಕ್ ಬಳಿ ಜನರ ಮೇಲೆ ವಾಹನವನ್ನು ನುಗ್ಗಿಸಿದ್ದು ಇದರಿಂದಾಗಿ ಓರ್ವ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿಯು ತಿಳಿಸಿದೆ.

ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ಅವರ ವಾಹನ ಶನಿವಾರ ಖೋರ್ಧಾ ಜಿಲ್ಲೆಯ ಬಾನ್ಪುರ್ ಬ್ಲಾಕ್ ಬಳಿ ಜನರತ್ತ ನುಗ್ಗಿದ ಕಾರಣದಿಂದಾಗಿ ಆಕ್ರೋಶಗೊಂಡ ಸ್ಥಳೀಯರು ಶಾಕಸರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಶಾಸಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಫೈಲ್ ತರಲಿಲ್ಲವೆಂದು ಒಡಿಶಾದ ಅಧಿಕಾರಿಗಳಿಗೆ ಕುರ್ಚಿಯಿಂದ ಹಲ್ಲೆ; ಕೇಂದ್ರ ಸಚಿವರ ವಿರುದ್ಧ ದೂರು ದಾಖಲುಫೈಲ್ ತರಲಿಲ್ಲವೆಂದು ಒಡಿಶಾದ ಅಧಿಕಾರಿಗಳಿಗೆ ಕುರ್ಚಿಯಿಂದ ಹಲ್ಲೆ; ಕೇಂದ್ರ ಸಚಿವರ ವಿರುದ್ಧ ದೂರು ದಾಖಲು

ಬಿಜೆಪಿ ಶಾಸಕ ಜನಸಂದಣಿಯೆಡೆ ವಾಹನವನ್ನು ನುಗ್ಗಿಸಿದ್ದು, ಸಾವನ್ನಪ್ಪಿದ್ದ ಮಹಿಳೆಯು ಬಿಜೆಪಿ ಕಾರ್ಯಕರ್ತೆ ಎಂದು ಮಾಹಿತಿ ಸಿಕ್ಕಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಸದ್ಯ ಬ್ಲಾಕ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸ್ವತಃ ಚಾಲನೆ ಮಾಡುತ್ತಿದ್ದ ಒಡಿಶಾದ ಚಿಲಿಕಾ ಶಾಸಕ ಪ್ರಶಾಂತ್ ಜಗದೇವ್ ತನ್ನ ವಾಹನವನ್ನು ಪೂರ್ಣ ವೇಗದಲ್ಲಿ ಗುಂಪಿನತ್ತ ನುಗ್ಗಿಸಿದ್ದಾರೆ. ಈ ಕಾರಣದಿಂದಾಗಿ ಶಾಸಕರ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಶಾಸಕರನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಅಧ್ಯಕ್ಷರ ಚುನಾವಣೆಗಾಗಿ ಬಾನ್‌ಪುರ ಬ್ಲಾಕ್ ಕಚೇರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಆಕ್ರೋಶಗೊಂಡ ಜನರು ಜಗದೇವ್ ಅವರ ವಾಹನವನ್ನು ಧ್ವಂಸಗೊಳಿಸಿದರು. ಮಾಹಿತಿಗಳ ಪ್ರಕಾರ ಪ್ರಶಾಂತ್ ಜಗದೇವ್ ಬಾನ್‌ಪುರ ಬ್ಲಾಕ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆಂದು ಸಂಚಾರ ಮಾಡುತ್ತಿದ್ದರು. ಸದ್ಯ ಜನರಿಂದ ತೀವ್ರ ದಾಳಿಗೆ ಒಳಗಾದ ಕಾರಣ ಆಸ್ಪತ್ರೆಗೆ ದಾಖಲಾಗಿದೆ.

ಸ್ಥಳೀಯರಿಂದ ಆಕ್ರೋಶ ವ್ಯಕ್ತ

ಬೇಕಾಬಿಟ್ಟಿ ವಾಹನ ಚಲಾಯಿಸಿದ ಒಡಿಶಾದ ಚಿಲಿಕಾ ಕ್ಷೇತ್ರದ ಬಿಜೆಡಿ ಶಾಸಕ ಪ್ರಶಾಂತ್ ಜಗದೇವ್ ವಿರುದ್ಧ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯಕ್ಕೆ ಶಾಸಕರೇ ಕಾರಣ ಎಂದು ಕೂಡಾ ಆರೋಪ ಮಾಡಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಸುಮಾರು 500ರಿಂದ 600 ಜನರು ಸ್ಥಳದಲ್ಲಿ ಜಮೆ ಆಗಿದ್ದರು. ಆದರೆ ಶಾಸಕರ ವಾಹನವು ಜನರ ಮೇಲೆ ನುಗ್ಗಿದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಶಾಸಕರಿಂದ ಇಂತಹ ಅಜಾಗರೂಕ ವರ್ತನೆಯನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ," ಎಂದು ತಿಳಿಸಿದರು. (ಒನ್‌ಇಂಡಿಯಾ ಸುದ್ದಿ)

English summary
BJD MLA Prashant Jagdev's Vehicle Plows into crowd, one women BJP worker died, Several Injured. Legislator Assaulted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X