ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರ್‌ ಕೈಲಿ ಬಸ್ಕಿ ಹೊಡೆಸಿದ್ದ ಶಾಸಕನ ಬಂಧನ

|
Google Oneindia Kannada News

ಭುವನೇಶ್ವರ್, ಜೂನ್ 24: ನಿರ್ಮಿಸಿದ ರಸ್ತೆ ಗುಣಮಟ್ಟದ್ದಾಗಿಲ್ಲವೆಂದು ಆರೋಪಿಸಿ ರಸ್ತೆ ನಿರ್ಮಿಸಿದ ಎಂಜಿನಿಯರ್ ಅನ್ನು ಸಾರ್ವಜನಿಕವಾಗಿ ನಿಂದಿನ ಜನರ ಎದುರು ಬಸ್ಕಿ ಹೊಡೆಯುವಂತೆ ಮಾಡಿದ ಒಡಿಸ್ಸಾದ ಆಡಳಿತ ಪಕ್ಷದ ಶಾಸಕನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜು ಜನತಾ ದಳ (ಬಿಜೆಡಿ) ಪಕ್ಷದ ಪಾಟ್ನಾಗರ್‌ ಕ್ಷೇತ್ರದ ಶಾಸಕ ಸರೋಜ್ ಮೆಹರ್ ಅವರು ಮೂರು ವಾರದ ಹಿಂದೆ ಎಂಜಿನಿಯರ್ ಜಯಂತ್ ಸಬಾರ್ ಅವರನ್ನು ಸಾರ್ವಜನಿಕವಾಗಿ ಬಸ್ಕಿ ಹೊಡೆಯುವಂತೆ ಮಾಡಿದ್ದರು. ಹಾಗಾಗಿ ಇಂದು ಬೆಳಿಗ್ಗೆ ಅವರನ್ನು ಬಂಧಿಸಲಾಗಿದೆ.

ಪಾಳು ಗುಡಿಸಲಿನ ಒಡೆಯ ಈಗ ಮೋದಿ ಸರ್ಕಾರದ ಸಚಿವ!ಪಾಳು ಗುಡಿಸಲಿನ ಒಡೆಯ ಈಗ ಮೋದಿ ಸರ್ಕಾರದ ಸಚಿವ!

ಎಂಜಿನಿಯರ್ ಜಯಂತ್ ಸಬಾರ್ ಅವರು ಉಸ್ತುವಾರಿ ವಹಿಸಿಕೊಂಡು ನಿರ್ಮಿಸಿದ್ದ ರಸ್ತೆ ಗುಣಮಟ್ಟದಿಂದ ಕೂಡಿಲ್ಲವೆಂದು ಜನರು ಆರೋಪಿಸಿದ್ದಾರೆ, ಹಾಗಾಗಿ ಅವರ ಮುಂದೆ ಬಸ್ಕಿ ಹೊಡೆಯಬೇಕೆಂದು ಒತ್ತಾಯ ಮಾಡಿ ಸರೋಜ್ ಅವರಿಂದ ಸಾರ್ವಜನಿಕವಾಗಿ ಶಾಸಕ ಸರೋಜ್ ಮೆಹರ್ ಅವರು ಎಂಜಿನಿಯರ್ ಅವರಿಂದ ಬಸ್ಕಿ ಹೊಡೆಸಿದ್ದರು.

BJD MLA arrested for making engineer do sit ups for poor quality roads

ಶಾಸಕ ಸರೋಜ್ ಅವರು ಬಸ್ಕಿ ಹೊಡೆಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಬಲವಂತವಾಗಿ ಎಂಜಿನಿಯರ್‌ ಅನ್ನು ಬಸ್ಕಿ ಹೊಡೆಸಿದ್ದು ಕಾಣುತ್ತದೆ, ಅಷ್ಟೆ ಅಲ್ಲದೆ, ನಾನು ನಿನ್ನ ಶಾಸಕ ನಾನು ಆದೇಶ ನೀಡುತ್ತಿದ್ದೇನೆ ಬಸ್ಕಿ ಹೊಡಿ ಇಲ್ಲವಾದರೆ ಜನರಿಂದ ಹೊಡೆಸುತ್ತೇನೆ ಎಂದು ಶಾಸಕ ಸರೋಜ್ ಬೆದರಿಕೆ ಹಾಕುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.

5ನೇ ಬಾರಿ ಒಡಿಶಾ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ನವೀನ್ ಪಟ್ನಾಯಕ್5ನೇ ಬಾರಿ ಒಡಿಶಾ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ನವೀನ್ ಪಟ್ನಾಯಕ್

ಘಟನೆ ನಡೆದಾಗ ಸ್ಥಳದಲ್ಲಿ ಪೊಲೀಸರು ಇದ್ದರು, ಅವರೇ ಎಂಜಿನಿಯರ್ ಅವರನ್ನು ರಕ್ಷಿಸಿದ್ದರು. ಆ ನಂತರ ಘಟನೆಯ ವಿಡಿಯೋ ವೈರಲ್ ಆಗಿ, ಶಾಸಕರ ದರ್ಪದ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

5ನೇ ಬಾರಿಗೆ ಸಿಎಂಯಾಗಿ ಗದ್ದುಗೆ ಏರಲು ಪಟ್ನಾಯಕ್ ಸಜ್ಜು5ನೇ ಬಾರಿಗೆ ಸಿಎಂಯಾಗಿ ಗದ್ದುಗೆ ಏರಲು ಪಟ್ನಾಯಕ್ ಸಜ್ಜು

ಎಂಜಿನಿಯರ್ ಜಯಂತ್ ಅವರ ಪತ್ನಿ ಅವರು ಶಾಸಕ ಸರೋಜ್ ಮೆಹರ್ ಅವರ ವಿರುದ್ಧ ಠಾಣೆಗೆ ದೂರು ನೀಡಿದ್ದು, ಇಂದು ಬೆಳಿಗ್ಗೆ ಶಾಸಕನನ್ನು ಬಂಧಿಸಲಾಗಿದೆ. ಪರಿಶಿಷ್ಟಜಾತಿ/ ವರ್ಗ ದೌರ್ಜನ್ಯ ತಡೆ ಕಾಯ್ದೆಯ ಅಡಿ ದೂರು ದಾಖಲಿಸಲಾಗಿದೆ.

English summary
A legislator of the ruling Biju Janata Dal in Odisha was arrested after he allegedly made an official do sit-ups over public complaints of poor roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X