ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?

|
Google Oneindia Kannada News

ಭುವನೇಶ್ವರ, ಮೇ 10: ಫೋನಿ ಚಂಡಮಾರುತ ಒಡಿಶಾಕ್ಕೆ ಅಪ್ಪಳಿಸಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಒಂದು ವಾರ ಕಳೆದರೂ ಕೂಡ ಭುವನೇಶ್ವ ಹಾಗೂ ಪುರಿಯಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಸರಿಪಡಿಸಲು ಸಾಧ್ಯವಾಗಿಲ್ಲ.

ಟೆಲಿಕಾಂ ವ್ಯವಸ್ಥೆ, ಬ್ಯಾಂಕ್, ಎಟಿಎಂ ಸೇವೆಗಳು ಕೂಡ ಕಡಿತಗೊಂಡಿವೆ. ಎಲ್ಲವನ್ನೂ ಸರಿಪಡಿಸಲು ಇನ್ನೂ ಒಂದು ವಾರಕ್ಕಿಂತ ಹೆಚ್ಚು ಕಾಲಾವಕಾಶ ಬೇಕಾಗಿದೆ. ಭುವನೇಶ್ವರದ ಶೇ.70ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ, ಹಾಗೆಯೇ ನೀರಿನ ಸರಬರಾಜನ್ನೂ ಕೂಡ ಕಡಿತಗೊಳಿಸಲಾಗಿದೆ.

ಫನಿ ಚಂಡಮಾರುತ ಹಾನಿ: ಒಡಿಶಾಕ್ಕೆ ರಾಜ್ಯದಿಂದ 10 ಕೋಟಿ ರೂ. ನೆರವು ಫನಿ ಚಂಡಮಾರುತ ಹಾನಿ: ಒಡಿಶಾಕ್ಕೆ ರಾಜ್ಯದಿಂದ 10 ಕೋಟಿ ರೂ. ನೆರವು

ಖುರ್ದಾ ಜಿಲ್ಲೆಯಲ್ಲಿ ಇರುವ 1,164 ಎಟಿಎಂಗಳ ಪೈಕಿ ಕೇವಲ 197 ಎಟಿಎಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 707 ಬ್ಯಾಂಕ್‌ಗಳ ಪೈಕಿ ಕೇವಲ 372 ಬ್ಯಾಂಕ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

Bhubaneswar Puri still without electricity

ನಂಬಲಸಾಧ್ಯ! ಫೋನಿ ಹೊಡೆತಕ್ಕೆ ಹೇಗಾಗಿತ್ತು ನೋಡಿ ಒಡಿಶಾ: ನಾಸಾ ಚಿತ್ರನಂಬಲಸಾಧ್ಯ! ಫೋನಿ ಹೊಡೆತಕ್ಕೆ ಹೇಗಾಗಿತ್ತು ನೋಡಿ ಒಡಿಶಾ: ನಾಸಾ ಚಿತ್ರ

32 ಟೆಲಿಕಾಂ ನೆಟ್‌ವರ್ಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ನೆಟ್‌ವರ್ಕ್ ಪೂರ್ ಇದೆ ಎಂದು ತಿಳಿಸಿದ್ದಾರೆ. ಪುರಿ ಜಿಲ್ಲೆಯಲ್ಲಿ 239 ಎಟಿಎಂಗಳ ಪೈಕಿ ಕೇವಲ 60 ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

English summary
A week after cyclone Fani hit Odisha, state capital Bhubaneswar and the entire Puri district continue to reel under its impact as it would take a few more days to fully restore power supply, telecom connectivity and banking and ATM networks in these areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X