ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಈಗಲೂ ಹೆಣ ಎಣಿಸುತ್ತಿದೆ: ಪ್ರಧಾನಿ ಮೋದಿ

|
Google Oneindia Kannada News

ಕೊರಾಪುತ್(ಒಡಿಶಾ), ಮಾರ್ಚ್ 29: "ಪಾಕಿಸ್ತಾನ ಈಗಲೂ ಉಗ್ರರ ಶವವನ್ನು ಲೆಕ್ಕ ಹಾಕುತ್ತಿದೆ, ಆದರೂ ಭಾರತದ ಬಳಿ ಸಾಕ್ಷ್ಯ ಕೇಳುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಡಿಶಾದ ಕೊರಾಪುತ್ ನಲ್ಲಿ ಸಮಾವೇಶವೊಂದನ್ನುದ್ದೇಶಿ ಮೋದಿ ಮಾತನಾಡುತ್ತಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏರ್ ಸ್ಟ್ರೈಕ್ ಆಗಿ ತಿಂಗಳಾಯಿತು. ಆದರೆ ಈಗಲೂ ಪಾಕಿಸ್ತಾನ ಉಗ್ರರ ಹೆಣಗಳನ್ನು ಲೆಕ್ಕಹಾಕುತ್ತಿದೆ ಎಂದು ಮೊದಿ ಲೇವಡಿ ಮಾಡಿದರು. ಭಾರತ ಉಗ್ರರ ನೆಲೆಗೇ ಹೋಗಿ ಅವರ ಮೇಲೆ ದಾಳಿ ನಡೆಸಿ, ಅವರನ್ನು ಕೊಂದರೆ, ನಮ್ಮವರು ಸಾಕ್ಷಿ ಕೇಳುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ರಹಸ್ಯ ಟೇಪ್ : ಏರ್ ಸ್ಟ್ರೈಕ್ ನಂತರ ಉಗ್ರರ ದೇಹ ಸುಟ್ಟು ನದಿಯಲ್ಲಿ ಎಸೆಯಲಾಯಿತೆ?ರಹಸ್ಯ ಟೇಪ್ : ಏರ್ ಸ್ಟ್ರೈಕ್ ನಂತರ ಉಗ್ರರ ದೇಹ ಸುಟ್ಟು ನದಿಯಲ್ಲಿ ಎಸೆಯಲಾಯಿತೆ?

ಮಿಶನ್ ಶಕ್ತಿಯನ್ನೂ ಪ್ರಶ್ನಿಸುವ, ಟೀಕಿಸುವ ಮೂಲಕ ಕೆಲವರು ನಮ್ಮ ವಿಜ್ಞಾನಿಗಳ ಪರಿಶ್ರಮಕ್ಕೆ ಅಗೌರವ ಸೂಚಿಸಿದ್ದಾರೆ. ನಾವು ಬಾಹ್ಯಾಕಾಶ ಲೋಕದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದನ್ನು ಇಡೀ ವಿಶ್ವವೂ ಗುರುತಿಸಿದರೆ, ನಮ್ಮವರೇ ಟೀಕಿಸುತ್ತಿದ್ದಾರೆ ಎಂದರು.

ಹೆಣ ಲೆಕ್ಕ ಹಾಕುತ್ತಿರುವ ಪಾಕಿಸ್ತಾನ

ಹೆಣ ಲೆಕ್ಕ ಹಾಕುತ್ತಿರುವ ಪಾಕಿಸ್ತಾನ

ಏರ್ ಸ್ಟ್ರೈಕ್ ನಡೆದಿದ್ದೇ ಸುಳ್ಳು ಎಂದವರಿಗೆ ಗುದ್ದು ನೀಡಿದ ನರೇಂದ್ರ ಮೋದಿ, ಪಾಕಿಸ್ತಾನ ಈಗಲೂ ಉಗ್ರರ ಹೆಣ ಲೆಕ್ಕ ಹಾಕುತ್ತಿದೆ. ಹೀಗಿರುವಾಗ ಪಾಕಿಸ್ತಾನದಲ್ಲಿ ಮತ್ತು ಭಾರತದಲ್ಲೂ ಕೆಲವರು ಈ ದಾಳಿ ನಡೆದಿದ್ದೇ ಸುಳ್ಳು ಎಂದು ಸಾಕ್ಷಿ ಕೇಳುತ್ತಿದ್ದಾರೆ. ಸೈನಿಕರ ಸಾಧನೆಗೆ ಗೌರವ ನೀಡುವ ಸೌಜನ್ಯವಿಲ್ಲ ಎಂದರು. ಫೆಬ್ರವರಿ 14 ರಂದು ಜಮ್ಮು ಕಾಶ್ಮಿರದ ಪುಲ್ವಾಮಾದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ನಲವತ್ತಕ್ಕೂ ಹೆಚ್ಚು ಭಾರತೀಯ ಯೋಧರ ಹತ್ಯೆಗೈದಿದ್ದ. ಅದಕ್ಕೆ ಪ್ರತೀಕಾರ ಎಂಬಂತೆ ಫೆಬ್ರವರಿ 26 ರಂದು ಭಾರತ, ಪಾಕಿಸ್ತಾನದ ಉಗ್ರನೆಲೆಯ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು.

ವಿಜ್ಞಾನಿಗಳಿಗೂ ಅಗೌರವ

ವಿಜ್ಞಾನಿಗಳಿಗೂ ಅಗೌರವ

ಎರಡು ದಿನಗಳ ಹಿಂದೆ ನೀವೆಲ್ಲರೂ ಒಂದು ಮಹತ್ವದ ಸುದ್ದಿ ಕೇಳಿದ್ದೀರಿ, ಭಾರತ ಇದೀಗ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಇಡೀ ಜಗತ್ತೂ ನಮ್ಮನ್ನು ಗುರುತಿಸುತ್ತಿರುವಾಗ, ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡುತ್ತಿರುವಾಗ, ಕೆಲವರು ಕೇವಲ ಸರ್ಕಾರವನ್ನು ಶಪಿಸುತ್ತ, ಪ್ರಶ್ನಿಸುತ್ತ, ಟೀಕಿಸುತ್ತ, ಅಂಥ ಸಾಧನೆಯನ್ನೂ ಅವಮಾನಿಸಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಉಪಗ್ರಹ ಪ್ರತಿರೋಧಕ ಅಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷೆಗೊಳಿಸುವ ಮೂಲಕ ಭಾರತ ಈ ಸಾಧನೆನಾಲ್ಕನೇ ದೇಶವಾಗಿ ಸಾಧನೆ ಬರೆದಿತ್ತು.

ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?ಏನಿದು ಮಿಷನ್ ಶಕ್ತಿ- Anti- ಉಪಗ್ರಹ ಕ್ಷಿಪಣಿ ಅಸ್ತ್ರ?

ಒಡಿಶಾದಲ್ಲಿ ವಿಧಾನಸಭೆಗೂ ಚುನಾವಣೆ

ಒಡಿಶಾದಲ್ಲಿ ವಿಧಾನಸಭೆಗೂ ಚುನಾವಣೆ

ಲೋಕಸಭಾ ಚುನಾವಣೆ ಏಪ್ರಿಲ್ 11 ರಂದು ಆರಂಭವಾಗಲಿದ್ದು, ಮೇ 19 ರಂದು ಮುಕ್ತಾಯವಾಗಲಿದೆ. ಒಟ್ಟು ಏಳು ಹಂತಗಳಲ್ಲಿ ನಡೆಯುವ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳಲಿದೆ. ಓಡಿಶಾದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಎರಡೂ ಚುನಾವಣೆಗಳೂ ಏಪ್ರಿಲ್ 11 ರಂದೇ ನಡೆಯಲಿದೆ.

300+ ಕ್ಷೇತ್ರಗಳಲ್ಲಿ ಎನ್ ಡಿಎ ಗೆಲುವು: ಪ್ರಧಾನಿ ಮೋದಿ ವಿಶ್ವಾಸ300+ ಕ್ಷೇತ್ರಗಳಲ್ಲಿ ಎನ್ ಡಿಎ ಗೆಲುವು: ಪ್ರಧಾನಿ ಮೋದಿ ವಿಶ್ವಾಸ

ಬಿಜೆಪಿ ಗೆದ್ದಿದ್ದೆಷ್ಟು?

ಬಿಜೆಪಿ ಗೆದ್ದಿದ್ದೆಷ್ಟು?

ಒಡಿಶಾದಲ್ಲಿ ಒಟ್ಟು 21 ಲೋಕಸಭಾ ಕ್ಷೇತ್ರಗಳಿದ್ಚದು 2014 ರಲ್ಲಿ ಬಿಜೆಪಿ ಕೇವಲ 1 ಕ್ಷೇತ್ರದಲ್ಲಷ್ಟೇ ಗೆದ್ದಿತ್ತು. ಒಟ್ಟು 147 ವಿಧಾನಸಭಾ ಕ್ಷೇತ್ರಗಳನ್ನು ಒಡಿಶಾ ಹೊಂದಿದ್ದು, ಇದರಲ್ಲಿ ಕೇವಲ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

ಮತ್ತೆ ಬಿಜೆಪಿಯೇ ಅಧಿಕಾರಕ್ಕೆ, ಮೋದಿ ಬಾಯಿಂದ ಖಚಿತ ಭರವಸೆಮತ್ತೆ ಬಿಜೆಪಿಯೇ ಅಧಿಕಾರಕ್ಕೆ, ಮೋದಿ ಬಾಯಿಂದ ಖಚಿತ ಭರವಸೆ

English summary
Pakistan is still counting bodies of terrorists in Balakot, after India's airstrike. But asking India for proof, Prime minister Narendra Modi told in Odisha in a Rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X