ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾದಲ್ಲಿ ಹೆಣ್ಣುಮಗುವಿಗೆ ಚಂಡಮಾರುತ 'ಫೋನಿ' ಹೆಸರಿಟ್ಟ ಪೋಷಕರು

|
Google Oneindia Kannada News

ಭುವನೇಶ್ವರ್ (ಒಡಿಶಾ), ಮೇ 3: ಫೋನಿ ಚಂಡಮಾರುತ ಶುಕ್ರವಾರ ಒಡಿಶಾದಲ್ಲಿ ಅಪ್ಪಳಿಸಿದೆ. ಇದೇ ದಿನ ಹುಟ್ಟಿದ ಹೆಣ್ಣುಮಗುವಿಗೆ 'ಫೋನಿ' ಎಂದು ಹೆಸರಿಡಲಾಗಿದೆ. ಮೂವತ್ತೆರಡು ವರ್ಷದ ಮಹಿಳೆಯೊಬ್ಬರು ರೈಲ್ವೆ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಮ್ಮ ಮಗುವಿಗೆ ಚಂಡಮಾರುತದ ಹೆಸರನ್ನೇ (ಫೋನಿ) ಇಡಲು ತೀರ್ಮಾನಿಸಿದ್ದಾರೆ.

ಮಹಿಳೆಯು ರೈಲ್ವೆ ಇಲಾಖೆ ಸಿಬ್ಬಂದಿ ಆಗಿದ್ದು, ಮಂಚೇಶ್ವರ್ ನಲ್ಲಿ ಇರುವ ಕೋಚ್ ದುರಸ್ತಿ ವರ್ಕ್ ಶಾಪ್ ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಫೋನಿ ಚಂಡಮಾರುತದ ಅಬ್ಬರಕ್ಕೆ ಮೂವರು ಮೃತಪಟ್ಟಿದ್ದಾರೆ. ಮರಗಳು, ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ರಾಜ್ಯದ ಹಲವು ಭಾಗದಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ.

ಫೋನಿ ಚಂಡಮಾರುತಕ್ಕೆ ಒಡಿಶಾ, ಆಂಧ್ರ, ಪ.ಬಂಗಾಲ ಅಲ್ಲೋಲ ಕಲ್ಲೋಲಫೋನಿ ಚಂಡಮಾರುತಕ್ಕೆ ಒಡಿಶಾ, ಆಂಧ್ರ, ಪ.ಬಂಗಾಲ ಅಲ್ಲೋಲ ಕಲ್ಲೋಲ

ದೇವಾಲಯ ನಗರಿ ಪುರಿಯಲ್ಲಿ ದೊಡ್ಡ ಪ್ರದೇಶವು ನೀರಿನಲ್ಲಿ ಮುಳುಗಿದೆ. ಕಳೆದ ಇಪ್ಪತ್ತು ವರ್ಷದಲ್ಲೇ ಭಾರತ ಕಂಡ ಪ್ರಬಲ ಚಂಡಮಾರುತ ಇದು. ಇದು ಕ್ರಮೇಣ ದುರ್ಬಲವಾಗುತ್ತಿದ್ದು, ಪಶ್ಚಿಮ ಬಂಗಾಲದ ಕಡೆಗೆ ಚಲಿಸುತ್ತಿದೆ. ಒಡಿಶಾ ರಾಜ್ಯ ಸರಕಾರವು ಆರುನೂರು ಗರ್ಭಿಣಿಯರೂ ಸೇರಿ ಹನ್ನೊಂದು ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಿದೆ.

Baby Fani: Odisha newborn named after cyclone

ಫೋನಿ ಚಂಡಮಾರುತದ ಅಬ್ಬರಕ್ಕೆ ಮೊದಲ ದಿನವೇ ಐವರು ಬಲಿ ಫೋನಿ ಚಂಡಮಾರುತದ ಅಬ್ಬರಕ್ಕೆ ಮೊದಲ ದಿನವೇ ಐವರು ಬಲಿ

ಫೋನಿ ಚಂಡಮಾರುತದಿಂದ ತೊಂದರೆಗೆ ಒಳಗಾದ ರಾಜ್ಯಗಳಿಗೆ ಕೇಂದ್ರ ಸರಕಾರವು ಒಂದು ಸಾವಿರ ಕೋಟಿ ರುಪಾಯಿ ಪರಿಹಾರ ಬಿಡುಗಡೆ ಮಾಡಿದೆ.

English summary
A baby who shared her birth in Bhubaneswar this morning with the landfall of Cyclone Fani off the coast of Odisha will share its name too. A 32-year-old woman gave birth to the baby girl at the Railway Hospital and decided to name the baby Fani after the cyclone, news agency ANI reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X