ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಫಾನ್ ಆರ್ಭಟ: ಒಡಿಶಾಗೆ 500 ಕೋಟಿ ರುಪಾಯಿಯ ನೆರವು

|
Google Oneindia Kannada News

ಭುವನೇಶ್ವರ, ಮೇ 22: ಅಂಫಾನ್ ಚಂಡಮಾರುತ ಪೀಡಿತ ಒಡಿಶಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ 500 ಕೋಟಿ ರುಪಾಯಿಯ ಮುಂಗಡ ಹಣಕಾಸು ನೆರವು ಘೋಷಿಸಿದ್ದಾರೆ.

ಅವರು ಶುಕ್ರವಾರ ಒಡಿಶಾದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಒಡಿಶಾ ರಾಜ್ಯಪಾಲ ಗಣೇಶಿ ಲಾಲ್ ಮತ್ತು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಹಣಕಾಸಿನ ನೆರವು ಘೋಷಣೆ ಮಾಡಿದರು. ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮಮೇಂದ್ರ ಪ್ರಧಾನ್ ಮತ್ತು ಪ್ರತಾಪ್ ಸಾರಂಗಿ ಉಪಸ್ಥಿತರಿದ್ದರು.

ಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾಅಂಫಾನ್: 1000 ಕೋಟಿ ರು ಕೊಟ್ಟಿದ್ದಕ್ಕೆ ಮುನಿಸಿಕೊಂಡ ಮಮತಾ

ಒಡಿಶಾ ರಾಜ್ಯ ಸರ್ಕಾರದಿಂದ ವಿವರವಾದ ವರದಿಯನ್ನು ಪಡೆದ ನಂತರ ದೀರ್ಘಾವಧಿಯ ಪುನರ್ವಸತಿ ಕ್ರಮಗಳಿಗೆ ಹೆಚ್ಚಿನ ನೆರವು ನೀಡಲಾಗುವುದು ಎಂದು ಪ್ರಧಾನಿ ಹೇಳಿದರು.

Amphan Cyclone In Odisha: 500 Crore Rupees Advance Relief Fund From Central Government

ಮೋದಿ ಅವರು ಭದ್ರಾಕ್, ಬಾಲಸೋರ್, ಜಾಜ್‌ಪುರ ಮತ್ತು ಮಯೂರ್ಭಂಜ್ ಮುಂತಾದ ಜಿಲ್ಲೆಗಳಲ್ಲಿ ಸುಮಾರು 90 ನಿಮಿಷಗಳ ಕಾಲ ವೈಮಾನಿನ ಸಮೀಕ್ಷೆ ಮಾಡಿದರು.

English summary
Amphan Cyclone In Odisha: 500 Crore Rupees Advance Relief Fund From Central Government. PM Narendra Modi Today Visited To Odisha's Cyclone effected areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X