• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕ್‌ ಜೈಲಿಂದ ಬಿಡುಗಡೆಗೊಂಡು ಬರೋಬ್ಬರಿ 20 ವರ್ಷಗಳ ಬಳಿಕ ಗ್ರಾಮ ಸೇರಿದ ಒಡಿಶಾ ವ್ಯಕ್ತಿ

|

ರೂರ್ಕೆಲಾ, ನವೆಂಬರ್ 14: ಬರೋಬ್ಬರಿ 20 ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿದ್ದು, ಈಗ ವ್ಯಕ್ತಿಯೊಬ್ಬ ಗ್ರಾಮಕ್ಕೆ ವಾಪಸಾಗಿದ್ದಾರೆ.

ಸಾಂಪ್ರದಾಯಿಕ ಬುಡಕಟ್ಟು ನೃತ್ಯ, ಸಂಗೀತ ಮತ್ತು ಡ್ರಮ್ಸ್ ಮತ್ತು ಇತರ ವಾದ್ಯಗಳೊಂದಿಗೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಕುಲುವನ್ನು ಸ್ವಾಗತಿಸಿದರು.

ಕುಲು ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಹತ್ತಿರದ ಪ್ರದೇಶಗಳ ಜನರು ಹಳ್ಳಿಯ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.ಐವತ್ತು ವರ್ಷದ ಬುಡಕಟ್ಟು ವ್ಯಕ್ತಿ ಬಿರ್ಜು ಕುಲು ಒಡಿಶಾದಲ್ಲಿನ ತನ್ನ ಸ್ವಗ್ರಾಮಕ್ಕೆ ಮರಳಿದ್ದು ಅವರ ಸಂತೋಷಕ್ಕೆ ಪಾರವೇ ಇಲ್ಲ.

25ನೇ ವಯಸ್ಸಿನಲ್ಲಿ ಮನೆ ಬಿಟ್ಟು ಬಂದಿದ್ದ ಕುಲು ಪಂಜಾಬ್‌ಗೆ ತೆರಳುವಾಗ ಪಾಕಿಸ್ತಾನದ ಭೂಪ್ರದೇಶವನ್ನು ತಪ್ಪಾಗಿ ದಾಟಿದ್ದರಿಂದ ಪಾಕಿಸ್ತಾನದಲ್ಲಿ ಜೈಲು ಪಾಲಾಗಿದ್ದ.

ಲಾಹೋರ್ ಜೈಲಿನಿಂದ ಬಿಡುಗಡೆಯಾದ ನಂತರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಬುಡಕಟ್ಟು ಪ್ರಾಬಲ್ಯದ ಸುಂದರ್‌ಗ ಜಿಲ್ಲೆಯ ಕುತ್ರಾ ಬ್ಲಾಕ್‌ನ ಕಟಂಗಾ ಗ್ರಾಮವನ್ನು ತಲುಪುತ್ತಿದ್ದಾಗ ಕುಲು ಅವರಿಗೆ ಸ್ಥಳೀಯ ನಿವಾಸಿಗಳು ಸ್ವಾಗತ ಕೋರಿದರು.

ಲಾಕ್ಡೌನ್ ಉಲ್ಲಂಘನೆ: ಪೊಲೀಸ್ ಕಸ್ಟಡಿಯಲ್ಲೇ ಪ್ರಾಣಬಿಟ್ಟ ತಂದೆ, ಮಗ

ಕುಲು ಹೆತ್ತವರು ಮೃತಪಟ್ಟಿದ್ದಾರೆ. ಆದರೆ ಅವರ ಬಿಡುಗಡೆಯ ಬಗ್ಗೆ ಮಾಹಿತಿ ಬಂದಾಗಿನಿಂದ ಅವರ ತಂದೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ, ಸಹೋದರಿ ಮತ್ತು ಅವರ ಕುಟುಂಬದವರು ಅವರಿಗಾಗಿ ಕಾತುರದಿಂದ ಬರನೋಡುತ್ತಿದ್ದರು.

English summary
After spending 20 years in a jail in Pakistan, a tribal man finally returned to his remote village in Odisha on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X