ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್-19 ಚಿಕಿತ್ಸೆಗೆ ಪ್ಲಾಸ್ಮಾ ಬ್ಯಾಂಕ್ ತೆರೆದ ಮತ್ತೊಂದು ರಾಜ್ಯ

|
Google Oneindia Kannada News

ಭುವನೇಶ್ವರ್, ಜುಲೈ.16: ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಮೊದಲು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತಾ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ನವದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳ ಅನುಸರಿಸಿದ ಮಾರ್ಗವನ್ನೂ ಒಡಿಶಾ ಸರ್ಕಾರ ಕೂಡಾ ಪಾಲಿಸಲು ಮುಂದಾಗಿದೆ.

Recommended Video

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

ನವದೆಹಲಿ ಮತ್ತು ಮಹಾರಾಷ್ಟ್ರದ ಬಳಿಕ ಮೂರನೇ ರಾಜ್ಯದಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪಿಸಲಾಗಿದೆ. ಒಡಿಶಾದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವ ಉದ್ದೇಶಕ್ಕಾಗಿ ಪ್ಲಾಸ್ಮಾ ಸಂಗ್ರಹಕ್ಕೆ ಸರ್ಕಾರವು ಮುಂದಾಗಿದೆ.

ಕೊರೊನಾ ಸೋಂಕಿತರನ್ನು ಗುಣಪಡಿಸಲು ವೈದ್ಯರ ಹೊಸ ಅಸ್ತ್ರ!ಕೊರೊನಾ ಸೋಂಕಿತರನ್ನು ಗುಣಪಡಿಸಲು ವೈದ್ಯರ ಹೊಸ ಅಸ್ತ್ರ!

ದೇಶದಲ್ಲೇ ಮೊದಲ ಬಾರಿಗೆ ನವದೆಹಲಿ ಸರ್ಕಾರವು ಕೊರೊನಾ ವೈರಸ್ ಸೋಂಕಿತರಿಗೆ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನವನ್ನು ಬಳಸಿತ್ತು. ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರದ ನಂತರ ಮಹಾರಾಷ್ಟ್ರದಲ್ಲೂ ಸೋಂಕಿತರ ಚಿಕಿತ್ಸೆಗೆ ಇದೇ ವಿಧಾನವನ್ನು ಬಳಸಿಕೊಳ್ಳಲಾಗಿತ್ತು.

After Delhi And Maharashtra, Odisha Starts Plasma Bank Facility For Covid-19 Patients

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂದರೇನು?:

ಕೊರೊನಾ ವೈರಸ್ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಗಳ ರಕ್ತದಲ್ಲಿನ ಕನ್ವೆಲೆಸೆಂಟ್ ಪ್ಲಾಸ್ಮಾವನ್ನು ಸಂಗ್ರಹಿಸಲಾಗುತ್ತದೆ. ಈ ಕನ್ವೆಲೆಸೆಂಟ್ ಪ್ಲಾಸ್ಮಾವನ್ನು ಗಂಭೀರ ಸ್ಥಿತಿಯಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರಿಗೆ ಇಂಜೆಕ್ಟ್ ಮಾಡಲಾಗುತ್ತದೆ. ಈ ಚಿಕಿತ್ಸಾ ವಿಧಾನವನ್ನು ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುತ್ತದೆ. ಈ ಪ್ಲಾಸ್ಮಾದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಟಬಲ್ಲ ಆಂಡಿಬಾಡಿ ಗುಣವಿದ್ದು, ಸೋಂಕಿತರ ದೇಹದಲ್ಲಿರುವ ಕೊರೊನಾವೈರಸ್ ಗಳ ಮೇಲೆ ದಾಳಿ ನಡೆಸುವುದಕ್ಕೆ ಸಹಕಾರಿ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿನ್ನೆಲೆ ನವದೆಹಲಿ ಮತ್ತು ಮಹಾರಾಷ್ಟ್ರಗಳಲ್ಲಿ ಕೊರೊನಾವೈರಸ್ ನಿಂದ ಗುಣಮುಖರಾದ ವ್ಯಕ್ತಿಗಳಿಂದ ಪ್ಲಾಸ್ಮಾ ಸಂಗ್ರಹಿಸುವುದಕ್ಕಾಗಿ ಬ್ಯಾಂಕ್ ತೆರಯಲಾಗಿದೆ. ಇದೀಗ ಒಡಿಶಾ ಸರ್ಕಾರ ಕೂಡಾ ಪ್ಲಾಸ್ಮಾ ಥೆರಿಪಿಗೆ ಹೆಚ್ಚಿನ ಒತ್ತು ನೀಡಿದ್ದು, ಅದಕ್ಕಾಗಿ ಬ್ಯಾಂಕ್ ವೊಂದನ್ನು ತೆರೆದಿದೆ.

English summary
After Delhi And Maharashtra, Odisha Starts Plasma Bank Facility For Covid-19 Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X