ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆಯೇ ಇಲ್ಲ: ಒಡಿಶಾದಲ್ಲಿ 600 ಕೊರೊನಾ ಲಸಿಕಾ ಕೇಂದ್ರಗಳು ಬಂದ್!

|
Google Oneindia Kannada News

ಭುವನೇಶ್ವರ್, ಏಪ್ರಿಲ್ 07: ಒಡಿಶಾದಲ್ಲಿ ಕೊರೊನಾವೈರಸ್ ಲಸಿಕೆಯ ಕೊರತೆ ಎದುರಾದ ಹಿನ್ನೆಲೆ ರಾಜ್ಯದ 600 ಕೊವಿಡ್-19 ಲಸಿಕಾ ಕೇಂದ್ರಗಳನ್ನು ಬಂದ್ ಮಾಡುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.

ಒಡಿಶಾದಲ್ಲಿ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆಗಾಗಿ 1472 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಮಂಗಳವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಲಸಿಕಾ ಕೇಂದ್ರಗಳ ಸಂಖ್ಯೆ 1103ಕ್ಕೆ ಇಳಿಕೆಯಾಗಿತ್ತು. ಈ ಸಂಖ್ಯೆ ಬುಧವಾರದ ವೇಳೆದೆ 800ಕ್ಕೆ ಇಳಿದಿದೆ.

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಬಂಗಾರದ ಮೂಗುತಿ ಉಚಿತ!ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಬಂಗಾರದ ಮೂಗುತಿ ಉಚಿತ!

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 15 ಲಕ್ಷ ಡೋಸ್ ಲಸಿಕೆ ನೀಡುವಂತೆ ಕೋರಿದ ಬೆನ್ನಲ್ಲೇ ಮಂಗಳವಾರ 3.5 ಲಕ್ಷ ಡೋಸ್ ಕೊವಿಡ್-19 ಲಸಿಕೆ ವಿತರಣೆ ಮಾಡಲಾಗಿತ್ತು. ರಾಜ್ಯದ ಜಿಲ್ಲೆಗಳಲ್ಲಿರುವ ಕೆಲವು ಕೊರೊನಾ ಲಸಿಕೆ ಕೇಂದ್ರಗಳನ್ನು ಮುಚ್ಚುವುದರ ಹೊರತಾಗಿ ನಮ್ಮ ಎದುರಿಗೆ ಬೇರೆ ಮಾರ್ಗಗಳೇ ಕಾಣುತ್ತಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ವಿಜಯ್ ಪಾಣಿಗ್ರಹಿ ತಿಳಿಸಿದ್ದಾರೆ.

600 Coronavirus Vaccination Centres Closed Due To Shortage In Odisha

ರಾಜ್ಯದಲ್ಲಿ ಕೊವಿಶೀಲ್ಡ್ ಲಸಿಕೆಯ ಕೊರತೆ:

ಒಡಿಶಾದಲ್ಲಿ 1.26 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಸಂಗ್ರಹವಿದ್ದು, ಕೊವಿಶೀಲ್ಡ್ ಲಸಿಕೆಯ ಕೊರತೆ ಎದುರಾಗಿದೆ. ಜಿಲ್ಲಾಕೇಂದ್ರ ಮತ್ತು ಪ್ರಾದೇಶಿಕ ಪ್ರದೇಶಗಳಲ್ಲಿ ಇರುವ ಕೊರೊನಾವೈರಸ್ ಲಸಿಕೆ ಕೇಂದ್ರಗಳಲ್ಲಿ ಲಸಿಕೆಯ ಅಭಾವ ಕಂಡು ಬಂದಿದೆ. ರಾಜ್ಯದಲ್ಲಿ ಈವರೆಗೂ 37.41 ಲಕ್ಷ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಪ್ರತಿನಿತ್ಯ ರಾಜ್ಯದಲ್ಲಿ 2.31 ಲಕ್ಷ ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 5.33 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಹಾಗೂ 1.26 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

English summary
600 Coronavirus Vaccination Centres Closed Due To Shortage In Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X