ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಕ್ಲೋನ್ ಕಾರ್ಯಾಚರಣೆಯಲ್ಲಿದ್ದ 49 NDRF ಸಿಬ್ಬಂದಿಗೆ ಕೊರೊನಾ

|
Google Oneindia Kannada News

ಭುವನೇಶ್ವರ, ಜೂನ್ 9: ಅಂಫಾನ್ ಚಂಡಮಾರುತದ ವಿರುದ್ಧ ಹೋರಾಡಿದ 49 ಜನ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಎದುರಾಗಿದ್ದ ಅಂಫಾನ್ ಸೈಕ್ಲೋನ್ ವೇಳೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ 49 ಜನ ಸಿಬ್ಬಂದಿಗೆ ಒಡಿಶಾಗೆ ಹಿಂತಿರುಗಿದ ನಂತರ ಸೋಂಕು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊವಿಡ್ 19: 'ಈ' ರಾಜ್ಯ ಪ್ರತಿ ಶನಿವಾರ, ಭಾನುವಾರ ಸಂಪೂರ್ಣ ಬಂದ್ಕೊವಿಡ್ 19: 'ಈ' ರಾಜ್ಯ ಪ್ರತಿ ಶನಿವಾರ, ಭಾನುವಾರ ಸಂಪೂರ್ಣ ಬಂದ್

ಒಡಿಶಾದ ಕಟಕ್‌ನ ಮುಂಡಾಲಿ ಪ್ರದೇಶದ ಎನ್‌ಡಿಆರ್‌ಎಫ್‌ನ 3ನೇ ಬೆಟಾಲಿಯನ್‌ಪಡೆಯ 173 ಜನರ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಗಾಗಿ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿತ್ತು. ಅಂಫಾನ್ ಚಂಡಮಾರುತಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಿ ಜೂನ್ 3 ರಂದು ಒಡಿಶಾಗೆ ಹಿಂತಿರುಗಿದ್ದರು. ಈ ವೇಳೆ 49 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

 49 NDRF personnel have tested positive for Covid19 in Odisha

ಜೂನ್ 3ರಂದು ಒಬ್ಬ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಕೊರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡಿತ್ತು. ಬಳಿಕ, ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಇಡೀ ಬೆಟಾಲಿಯನ್ ಪರೀಕ್ಷೆಗೆ ಒಳಪಡಿಸಲಾಯಿತು. ವರದಿ ಬಂದ 49 ಜನರಿಗೆ ಕೊರೊನಾ ಅಂಟಿಕೊಂಡಿರುವುದು ತಿಳಿಯಿತು. ನಂತರ ಸೋಂಕಿತರೆಲ್ಲರನ್ನೂ ಕ್ವಾರಂಟೈನ್ ಮಾಡಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಒಡಿಶಾ ಅಗ್ನಿಶಾಮಕ ದಳದ 376 ಸಿಬ್ಬಂದಿ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆಯ 271 ಸಿಬ್ಬಂದಿಯನ್ನು ಪಶ್ಚಿಮ ಬಂಗಾಳಕ್ಕೆ ಪರಿಹಾರ ಮತ್ತು ಪುನಃಸ್ಥಾಪನೆ ಕಾರ್ಯಗಳಿಗಾಗಿ ಕಳುಹಿಸಲಾಗಿದೆ. ಅವರ ಸ್ವ್ಯಾಬ್ ಮಾದರಿಗಳ ಫಲಿತಾಂಶಗಳನ್ನು ಇನ್ನೂ ಪಡೆದಿಲ್ಲ.

ಆಂಫಾನ್‌ಗೆ ನಿಯೋಜಿಸಲಾಗಿದ್ದ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಒಡಿಶಾ ಸರ್ಕಾರ ಉಚಿತ ಕೋವಿಡ್ -19 ಪರೀಕ್ಷೆಯನ್ನು ಒದಗಿಸಿದೆ. ಸರ್ಕಾರವು ಎನ್‌ಡಿಆರ್‌ಎಫ್‌ಗೆ 60,000 ಸಾಮಾನ್ಯ ಪಿಪಿಇ ಮತ್ತು ಪ್ರತಿ ವ್ಯಕ್ತಿಗೆ ಎರಡು ಸೆಟ್‌ಗಳ ಕಸ್ಟಮೈಸ್ ಮಾಡಿದ ಪಿಪಿಇ ಪೂರೈಸಿದೆ.

ಇನ್ನುಳಿದಂತೆ ಒಡಿಶಾದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಇಂದು 2,994 ಕ್ಕೆ ಏರಿದೆ. 11 ಜನರು ಪ್ರಾಣ ಕಳೆದುಕೊಂಡಿದ್ದಾರೆ.

English summary
49 NDRF personnel have tested positive for Covid19 in Odisha after returning from Cyclone Amphan duties in West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X