ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ 42,500 ರೂಪಾಯಿ ದಂಡ

|
Google Oneindia Kannada News

ಭುವನೇಶ್ವರ್, ಫೆಬ್ರವರಿ.09: ಬೈಕ್ ಚಾಲನೆ ಪರವಾನಗಿ ಇಲ್ಲದೇ, ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ಅಪ್ರಾಪ್ತ ಹುಡುಗನನ್ನು ಹಿಡಿದ ಪೊಲೀಸರು ಬರೋಬ್ಬರಿ 42,500 ರೂಪಾಯಿ ದಂಡ ವಿಧಿಸಿದ್ದು, ಸಾಕಷ್ಟು ಸುದ್ದಿಯಾಗಿದೆ.

ಒಡಿಶಾದ ಭದ್ರಕ್ ಜಿಲ್ಲೆಯಲ್ಲಿ ಇಂಥದೊಂದು ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತನ ಕೈಗೆ ಬೈಕ್ ನೀಡಿದ್ದು, ಕೇಂದ್ರ ಸರ್ಕಾರದ ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದ ಆರೋಪಕ್ಕೆ ಬರೋಬ್ಬರಿ ದಂಡ ವಿಧಿಸಲಾಗಿದೆ.

CoronaVirus Effect: ಬೆಂಗಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಸ್ಥಗಿತ!CoronaVirus Effect: ಬೆಂಗಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಸ್ಥಗಿತ!

ಇನ್ನು, ಅಪ್ರಾಪ್ತ ಯುವಕ ತನ್ನ ಇಬ್ಬರು ಸ್ನೇಹಿತರನ್ನು ಕೂರಿಸಿಕೊಂಡು ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದನು. ಆದರೆ, ಅಪ್ರಾಪ್ತನಿಗೆ ತನ್ನ ಬೈಕ್ ನೀಡಿದ ಮಾಲೀಕನ ಹೆಸರಿನಲ್ಲಿಯೇ ದಂಡದ ರೆಸಿಪ್ಟ್ ನೀಡಲಾಗಿದೆ ಎಂದು ಸಂಚಾರಿ ಪೊಲೀಸ್ ಧನೇಶ್ವರ್ ನಾಯಕ್ ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕನ ರಾಂಗ್ ರೂಟ್ ಜರ್ನಿ

ಅಪ್ರಾಪ್ತ ಬಾಲಕನ ರಾಂಗ್ ರೂಟ್ ಜರ್ನಿ

ಕಳೆದ ಗುರುವಾರ ಬೈಕ್ ನಲ್ಲಿ ಸಂಚರಿಸುತ್ತಿದ್ದ ಅಪ್ರಾಪ್ತ ಯುವಕನು ಸಂಚಾರಿ ನಿಯಮಗಳ ಅರಿವಿಲ್ಲದೇ ರಾಂಗ್ ರೂಟ್ ನಲ್ಲಿ ಆಗಮಿಸುತ್ತಿದ್ದನು. ಈ ವೇಳೆ ಆತನನ್ನು ತಡೆದು ಪರಿಶೀಲನೆ ನಡೆಸಿದಾಗ ಆತನಲ್ಲಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಅಲ್ಲದೇ ಆತ ಅಪ್ರಾಪ್ತನು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್ ಮಾಲೀಕನಿಗೆ ದಂಡದ ಚಲನ್ ನೀಡಿದ ಪೊಲೀಸ್

ಬೈಕ್ ಮಾಲೀಕನಿಗೆ ದಂಡದ ಚಲನ್ ನೀಡಿದ ಪೊಲೀಸ್

ಅಪ್ರಾಪ್ತ ಬಾಲಕನಿಗೆ ತನ್ನ ಬೈಕ್ ನ್ನು ನೀಡಿದ ಮಾಲೀಕನ ಹೆಸರಿಗೆ ಪೊಲೀಸರು ದಂಡದ ಚಲನ್ ನ್ು ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ನೂತನ ಮೋಟಾರ್ ವಾಹನ ಕಾಯ್ದೆ ಅಡಿ ಬೈಕ್ ಮಾಲೀಕನೇ ಈ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?ಭಾರೀ ದಂಡದ ಭಯ: ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಇಳಿಕೆ ಆಯ್ತಾ?

42,500 ರೂಪಾಯಿ ದಂಡ ವಿಧಿಸಿದ ಪೊಲೀಸರು

42,500 ರೂಪಾಯಿ ದಂಡ ವಿಧಿಸಿದ ಪೊಲೀಸರು

ಅಪ್ರಾಪ್ತನಿಗೆ ಒಟ್ಟು 42,5000 ರೂಪಾಯಿ ದಂಡದ ಚಲನ್ ನ್ನು ಪೊಲೀಸರು ನೀಡಿದ್ದಾರೆ. ಇದರಲ್ಲಿ ವಿವಿಧ ಅಪರಾಧಗಳಿಗೆ ಇಂತಿಷ್ಟು ದಂಡ ಎಂದು ನಿಗದಿಗೊಳಿಸಲಾಗಿದೆ. ಸಾಮಾನ್ಯ ಅಪರಾಧಕ್ಕೆ 500 ರೂಪಾಯಿ, ಯಾವುದೇ ದಾಖಲೆ ಪತ್ರಗಳಿಲ್ಲದೇ ವಾಹನ ಚಲಾವಣೆಗೆ ಅವಕಾಶ ನೀಡಿದ್ದಕ್ಕೆ 5 ಸಾವಿರ ರೂಪಾಯಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಬೈಕ್ ಚಲಾವಣೆಗೆ 5 ಸಾವಿರ ರೂಪಾಯಿ, ರಸ್ತೆ ಸಂಚಾರಿ ನಿಯಮ ಉಲ್ಲಂಘನೆಗೆ 5 ಸಾವಿರ ರೂಪಾಯಿ, ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸಂಚರಿಸಿದ್ದಕ್ಕೆ 1 ಸಾವಿರ, ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆಗೆ 1 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಬೈಕ್ ನಲ್ಲಿದ್ದ ಉಳಿದಿಬ್ಬರಿಗೂ 26 ಸಾವಿರ ರೂಪಾಯಿ ದಂಡ

ಬೈಕ್ ನಲ್ಲಿದ್ದ ಉಳಿದಿಬ್ಬರಿಗೂ 26 ಸಾವಿರ ರೂಪಾಯಿ ದಂಡ

ಇದರ ಜೊತೆಗೆ ಅಪ್ರಾಪ್ತನಿಗೆ ಬೈಕ್ ನೀಡಿದ ಅಪರಾಧಕ್ಕಾಗಿ ಬರೋಬ್ಬರಿ 25 ಸಾವಿರ ರೂಪಾಯಿ ದಂಡವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಹಾಕಲಾಗಿದೆ. ಉಳಿದಂತೆ ಬೈಕ್ ನಲ್ಲಿ ಕುಳಿತಿದ್ದ ಮತ್ತಿಬ್ಬರು ಅಪ್ರಾಪ್ತ ಬಾಲಕರಿಗೆ 26 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಸಂಚಾರಿ ಪೊಲೀಸ್ ಧನೇಶ್ವರ್ ನಾಯಕ್ ತಿಳಿಸಿದ್ದಾರೆ.

English summary
Police Issues 42,500 Rupees Fine Challan For Who Allow His Bike To Ride Juveniles In Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X