ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ವರ್ಷದ ಚಂದ್ರಾನಿ ಮುರ್ಮು ಅತ್ಯಂತ ಕಿರಿಯ ವಯಸ್ಸಿನ ಸಂಸದೆ

|
Google Oneindia Kannada News

ಭುವನೇಶ್ವರ್ (ಒಡಿಶಾ), ಮೇ 26: ಮೊದಲ ಪ್ರಯತ್ನದಲ್ಲೇ ಲೋಕಸಭೆ ಸಂಸದೆಯಾಗಿ ಆಯ್ಕೆಯಾಗಿರುವ ಒಡಿಶಾದ ಇಪ್ಪತ್ತೈದು ವರ್ಷದ ಎಂಜಿನಿಯರಿಂಗ್ ಪದವೀಧರೆ ಈ ಬಾರಿಯ ಅತ್ಯಂತ ಕಿರಿಯ ವಯಸ್ಸಿನ ಎಂ.ಪಿ. ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಆಕೆ ಹೆಸರು ಚಂದ್ರಾನಿ ಮುರ್ಮು. ಬುಡಕಟ್ಟು ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಿಯೊಂಜಾರ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಇಪ್ಪತ್ತಾರು ವರ್ಷಕ್ಕೆ ಅಯ್ಕೆಯಾಗಿ, ದುಷ್ಯಂತ್ ಚೌಟಾಲ ನಿರ್ಮಿಸಿದ್ದ ದಾಖಲೆಯನ್ನು ಕಿಯೊಂಜಾರ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಬಿಜೆಡಿಯ ಚಂದ್ರಾಣಿ ಅವರು ಅಳಿಸಿ ಹಾಕಿದ್ದಾರೆ. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಹಿಸ್ಸಾರ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ದುಷ್ಯಂತ್ ಅತ್ಯಂತ ಕಿರಿಯ ವಯಸ್ಸಿನ ಸಂಸದ ಎನಿಸಿಕೊಂಡಿದ್ದರು.

ಈಗ ಮುರ್ಮು ಅವರಿಗೆ ಇಪ್ಪತ್ತೈದು ವರ್ಷ ಹನ್ನೊಂದು ತಿಂಗಳು ಒಂಬತ್ತು ದಿನ ವಯಸ್ಸು. ಉದ್ಯೋಗ ಸೃಷ್ಟಿ ಮಾಡುವುದು ಅವರ ಆದ್ಯತೆ ಎಂದು ಹೇಳಿಕೊಂಡಿದ್ದಾರೆ. ಆ ಭಾಗದಲ್ಲಿ ಹೊಸ ಕಾರ್ಖಾನೆಗಳನ್ನು ಸ್ಥಾಪಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.

25 year old Chandrani Murmu youngest MP of 17th Lok Sabha

ಖನಿಜ ಸಂಪನ್ಮೂಲ ಯಥೇಚ್ಛವಾಗಿ ಇರುವ ಕಿಯೊಂಜಾರ್ ನಂಥ ಜಿಲ್ಲೆಯಲ್ಲಿ ಉದ್ಯೋಗ ಬಿಕ್ಕಟ್ಟು ಇರುವುದು ದುರದೃಷ್ಟಕರ. ನಮ್ಮ ರಾಜ್ಯದ ಯುವ ಜನರು ಹಾಗೂ ಮಹಿಳೆಯರನ್ನು ಕೇಂದ್ರದಲ್ಲಿ ಪ್ರತಿನಿಧಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಎರಡು ಬಾರಿ ಸಂಸದರಾಗಿದ್ದ ಬಿಜೆಪಿಯ ಅನಂತ ನಾಯಕ್ ಅವರನ್ನು ಮುರ್ಮು ಅರವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಪಡೆದ ನಂತರ ಉದ್ಯೋಗ್ಕಕ್ಕೆ ಪ್ರಯತ್ನಿಸುತ್ತಿದ್ದ ಮುರ್ಮು, ಲೋಕಸಭೆ ಚುನಾವಣೆ ಸ್ಪರ್ಧಿಯಾಗಿ ಕಣಕ್ಕಿಳಿದರು. ಅಂದ ಹಾಗೆ ಕಿಯೊಂಜಾರ್ ಕ್ಷೇತ್ರದಿಂದ ಕಾಂಗ್ರೆಸ್ಸೇತರ ಎಂ.ಪಿಯನ್ನು ಒಂಬತ್ತು ಬಾರಿ ಸಂಸತ್ ಗೆ ಆರಿಸಿ ಕಳಿಸಿದ್ದಾರೆ. ಈ ಕ್ಷೇತ್ರದಿಂದ ಕಳೆದ ಎರಡು ಬಾರಿಯಿಂದ ಬಿಜು ಜನತಾದಳ ಗೆಲ್ಲುತ್ತಿದೆ.

English summary
25 year old Chandrani Murmu, mechanical engineer, youngest MP of 17th Lok Sabha. She elected from Odisha state from Biju Janata Dal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X