ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

|
Google Oneindia Kannada News

ಬಾಲಸೋರ್, ಡಿಸೆಂಬರ್ 17: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸ್ವದೇಶಿ ನಿರ್ಮಿತ ನೆಲದಿಂದ ನೆಲಕ್ಕೆ ಚಿಮ್ಮುವ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒಡಿಶಾ ತೀರದಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

ಭಾರತೀಯ ಸೇನೆಯ ಸ್ಟ್ರ್ಯಾಟಿಜಿಕ್‌ ಫೋರ್ಸ್‌ ಕಮಾಂಡ್‌ ಆಗಾಗ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿರುತ್ತದೆ.

ಯುದ್ಧ ನೌಕೆಗಳನ್ನು ಧ್ವಂಸಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿಯುದ್ಧ ನೌಕೆಗಳನ್ನು ಧ್ವಂಸಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಗರಿಷ್ಠ 300 ಕಿ.ಮೀ. ಕ್ರಮಿಸಬಲ್ಲ ಹಾಗೂ 1 ಸಾವಿರ ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಪೃಥ್ವಿ-2 ಮಿಸೈಲ್‌ನ ಪರೀಕ್ಷಾರ್ಥ ಪ್ರಯೋಗವನ್ನು ಕೊನೆಯ ಬಾರಿಗೆ ಕಳೆದ ವರ್ಷದ ನವೆಂಬರ್‌ 20ರಂದು ನಡೆಸಲಾಗಿತ್ತು.

2 DRDO Developed Prithvi-2 Missiles Testfired Off Odisha’s Balasore Coast

2003ರಲ್ಲಿಯೇ ಡಿಆರ್‌ಡಿಒ ನಿರ್ಮಿತ ಈ ಕ್ಷಿಪಣಿಯನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಬಾಲಸೋರ್‌ನ ಚಾಂಡಿಪುರ ಸಮೀಪದ 'ಇಂಟಿಗ್ರೇಟೆಡ್‌ ಟೆಸ್ಟ್‌ ರೇಂಜ್‌'ನ ಲಾಂಚ್‌ ಪ್ಯಾಡ್‌ 3ರ ಮೂಲಕ ಬುಧವಾರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ಅದು ನಿಗದಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಗರಿಷ್ಠ 500 ಕಿ.ಮೀ ದೂರ ಕ್ರಮಿಸಬಲ್ಲಸಾಮರ್ಥ್ಯ‌ ಹೊಂದಿರುವ ಕ್ಷಿಪಣಿಯ ದಾಳಿ ಸಾಮರ್ಥ್ಯ‌ವನ್ನು ರಾಡಾರ್‌, ಎಲೆಕ್ಟ್ರೋ ಆಪ್ಟಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಮೂಲಕ ವಿಶ್ಲೇಷಿಸಲಾಗಿದ್ದು, ಕರಾರುವಕ್ಕಾದ ಫಲಿತಾಂಶ ಕೊಟ್ಟಿದೆ. ಪರೀಕ್ಷಾರ್ಥ ಪ್ರಯೋಗದಲ್ಲಿ ಕ್ಷಿಪಣಿಯ ಮಿತಿಯನ್ನು 350 ಕಿ.ಮೀಗೆ ನಿಗದಿಪಡಿಸಲಾಗಿತ್ತು ಎಂದು ಡಿಆರ್‌ಡಿಒ ಹೇಳಿದೆ.

English summary
India on Wednesday successfully testfired two Prithvi-2 ballistic missiles off the eastern coast of Odisha in Balasore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X