ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ಸುದ್ದಿ: ಕೊರೊನಾ ವಿರುದ್ಧ ಹೋರಾಡಿ ಗೆದ್ದ 1 ತಿಂಗಳ ಮಗು

|
Google Oneindia Kannada News

ಭುವನೇಶ್ವರ, ಮೇ 15: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದೇ ರೀತಿ ಕೊರೊನಾ ಸೋಂಕಿಗೆ ಸಾವು-ನೋವುಗಳು ಹೆಚ್ಚಾಗಿವೆ.

ಪ್ರತಿದಿನ ಭಾರತದಲ್ಲಿ 3.50 ಲಕ್ಷ ಆಸುಪಾಸು ಹೊಸ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದರೆ, ಪ್ರತಿದಿನ 4000 ಸೋಂಕಿತರು ಕೋವಿಡ್ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ. ಇದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಆದರೆ, ಸಮಾಧಾನಕರ ಸುದ್ದಿ ಹಾಗೂ ಅಚ್ಚರಿ ಘಟನೆಯೊಂದು ಓಡಿಶಾದ ಭುವನೇಶ್ವರ ಆಸ್ಪತ್ರೆಯಲ್ಲಿ ನಡೆದಿದೆ. ಕೋವಿಡ್-19 ಸೋಂಕಿಗೆ ಒಳಗಾದ ಒಂದು ತಿಂಗಳ ವಯಸ್ಸಿನ ಗುಡಿಯಾ ಎಂಬ ಮಗು ಚೇತರಿಸಿಕೊಂಡಿದೆ.

 Bhubaneswar: 1 Month Baby Girl Fully Recovers From Covid-19 In Hospital

ಭುವನೇಶ್ವರ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ 10 ದಿನಗಳ ಕಾಲ ಕೋವಿಡ್ ಚಿಕಿತ್ಸೆಯಲ್ಲಿದ್ದ ಮಗು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಇದೂ ಪವಾಡಕ್ಕಿಂತ ಏನೂ ಕಡಿಮೆಯಿಲ್ಲ ಎಂದು ಅವಳಿಗೆ ಚಿಕಿತ್ಸೆ ನೀಡಿದ ಡಾ.ಅರ್ಜಿತ್ ಮೋಹಪಾತ್ರ ಹೇಳಿದ್ದಾರೆ.

ಭಾರತ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,26,098 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ವೇಳೆ 3,890 ಕೊವಿಡ್-19 ಸೋಂಕಿತರು ಮಹಾಮಾರಿಯಿಂದ ಸಾವನ್ನಪ್ಪಿದ್ದು, 3,53,299 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಶುಕ್ರವಾರದ ವೇಳೆಗೆ ಭಾರತದಲ್ಲಿ ಒಟ್ಟು 2,43,72,907 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,04,32,898 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಗೆ ಈವರೆಗೂ 2,66,207 ಜನರು ಬಲಿಯಾಗಿದ್ದಾರೆ.

English summary
One month old baby recovered from Covid-19 infection at Bhubaneswar hospital, Odisha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X