• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಲ್ಫಿ ತೆಗೆಯಲು ಹೋಗಿ ಕಣಿವೆಗೆ ಬಿದ್ದು ಮಹಿಳೆ ಸಾವು

|

ಇಂದೋರ್, ನವೆಂಬರ್ 06:ಪ್ರವಾಸ, ಪಿಕ್‌ನಿಕ್‌ಗಳಿಗೆ ತೆರಳಿದಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು, ಹೊಸ ಜಾಗ, ಅಲ್ಲಿಯ ಆಳ ಅಗಲವನ್ನು ಯಾರೂ ಕೂಡ ಅರಿಯರು.

ಪಿಕ್ ನಿಕ್ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳ ಲು ಹೋದ ಮಹಿಳೆ ಕಾಲು ಜಾರಿ ಕಣಿವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಗುರುವಾರ ಇಂದೋರ್ ನಲ್ಲಿ ನಡೆದಿದೆ.

ಮೈಸೂರು; ಪತ್ನಿ ವರ್ತನೆಗೆ ಮನನೊಂದು ವಿಡಿಯೋ ಮಾಡಿ ಆತ್ಮಹತ್ಯೆ

ನಾಲ್ಕು ಗಂಟೆಗಳ ತೀವ್ರ ಶೋಧದ ನಂತರ ಮಹಿಳೆ ಶವ ಪತ್ತೆಯಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ನೀತು ಮಹೇಶ್ವರಿ ಮೃತ ಮಹಿಳೆ, ಇಂದೋರ್ ನಿಂದ 55 ಕಿಮೀ ದೂರದಲ್ಲಿರುವ ಜಾಮ್ ಗೇಟ್ ಪ್ರದೇಶಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಪಿಕ್ ನಿಕ್ ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬೆಟ್ಟದ ಮೇಲೆ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಕಣಿವೆಗೆ ಬಿದ್ದಿದ್ದಾರೆ.

ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಕಾಲು ಜಾರಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಆಟೊಪ್ಸಿಗೆ ಕಳುಹಿಸಲಾಗಿದೆ, ಶೀಘ್ರ ವರದಿ ಕೈ ಸೇರಲಿದೆ. ಇದಾದ ಬಳಿಕ ಮುಂದಿನ ತನಿಖೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
A 30-year-old woman died on Thursday after falling into a valley while clicking a selfie at a picnic spot near Indore city, the police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X