ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟ, 'ರೆಬೆಲ್' ಸಂಸದ ಶತ್ರುಘ್ನ ಸಿನ್ಹಾ

|
Google Oneindia Kannada News

ಭೋಪಾಲ್, ಮಾರ್ಚ್ 13: ಮಧ್ಯಪ್ರದೇಶದ ಪಾಟ್ನಾ ಸಾಹೀಬ್‌ ಕ್ಷೇತ್ರದ ಬಿಜೆಪಿ ಸಂಸದ ಶತ್ರುಜ್ಞ ಸಿನ್ಹಾ ಅವರು ಬಿಜೆಪಿಯಿಂದ ಒಂದು ಕಾಲ ಹೊರಗಿಟ್ಟಿದ್ದು, ಮಾರ್ಚ್ 22ಕ್ಕೆ ಸಂಪೂರ್ಣವಾಗಿ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಪಾಟ್ನಾ ಸಾಹೀಬ್​ ಕ್ಷೇತ್ರದಲ್ಲಿ ಮೇ 19ರಂದು ಲೋಕಸಭಾ ಚುನಾವಣೆ ನಡೆಯಲಿದೆ.

ಬಿಜೆಪಿ ಮೇಲೆ ಮುನಿಸಿಕೊಂಡ ಶತ್ರುಘ್ನ ಸಿನ್ಹಾಗೆ ಆರ್ಜೆಡಿಯಿಂದ ಆಫರ್! ಬಿಜೆಪಿ ಮೇಲೆ ಮುನಿಸಿಕೊಂಡ ಶತ್ರುಘ್ನ ಸಿನ್ಹಾಗೆ ಆರ್ಜೆಡಿಯಿಂದ ಆಫರ್!

2019ರ ಸಾರ್ವತ್ರಿಕ ಚುನಾವಣೆಗೆ ನಾನು ಪಾಟ್ನಾ ಶಾಹಿಬ್‌ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದೇನೆ. ನನ್ನ ಸೋದರರು ಮತ್ತು ಹಿತೈಷಿಗಳೊಂದಿಗೆ ಚರ್ಚಿಸಿ ಮುಂದುವರಿಯುತ್ತೇನೆ.ಎರಡು ಬಾರಿ ಆಯ್ಕೆಯಾಗಿದ್ದ ಕ್ಷೇತ್ರವು ನನ್ನ ಹೃದಯಕ್ಕೆ ಹತ್ತಿರವಾಗಿದೆ ಮತ್ತು ಅಲ್ಲಿನ ಜನರೊಂದಿಗೆ ಸುದೀರ್ಘ ಬಂಧವಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಹೈಕಮಾಂಡ್ ಸೂಚಿಸಿದರೆ ಪಕ್ಷ ಬಿಡಲು ಸಿದ್ಧ: ಶತ್ರುಘ್ನ ಸಿನ್ಹಾ ಹೈಕಮಾಂಡ್ ಸೂಚಿಸಿದರೆ ಪಕ್ಷ ಬಿಡಲು ಸಿದ್ಧ: ಶತ್ರುಘ್ನ ಸಿನ್ಹಾ

2009ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶೇಖರ್‌ ಸುಮನ್‌ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿ ಬಿಜೆಪಿ ಸಂಸದರಾದ ಶತ್ರುಘ್ನ ಸಿನ್ಹಾ ಅವರು, ಮೋದಿ ವಿರೋಧಿ, ಪಕ್ಷವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರೂ ಪಕ್ಷದಲ್ಲೇ ಅವರನ್ನು ಉಳಿಸಿಕೊಳ್ಳಲಾಗಿತ್ತು. ಈಗ ಪಕ್ಷದಿಂದ ಹೊರ ಹೋಗಲು ಮುಂದಾಗಿದ್ದಾರೆ.

‘Will announce on March 22 which party I am joining,’ says Shatrughan Sinha

2009ರಲ್ಲಿ 55,21,293 ಮತಗಳ ಪೈಕಿ ಶತ್ರುಘ್ನ ಸಿನ್ಹಾ 3,16, 472 ಮತ ಪಡೆದರೆ, ಸುಮನ್ 61, 308 ಮತಗಳನ್ನು ಮಾತ್ರ ಪಡೆದಿದ್ದರು. 2014ರಲ್ಲಿ ಜೆಡಿಯು ಅಭ್ಯರ್ಥಿ ಗೋಪಾಲ್ ಪ್ರಸಾದ್ ಸಿನ್ಹಾ ಅವರನ್ನು ಬಹುತೇಕ ನಾಲ್ಕು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಸಿನ್ಹಾ 4,85,905 ಮತಗಳನ್ನು ಪಡೆದಿದ್ದರು, ಗೋಪಾಲ್ ಪ್ರಸಾದ್ ಅವರು 91,024 ಮತಗಳನ್ನು ಮಾತ್ರ ಪಡೆದು ಸೋಲು ಕಂಡಿದ್ದರು.

English summary
Rebel BJP MP from Patna Shahib Shatrughan Sinha on Tuesday said he would reveal on March 22 which party he would contest from in the forthcoming Lok Sabha elections but insisted that he would fight only from the constituency that he had won twice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X