• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಷ್ಟು ಗುಣಮಟ್ಟದ ಡ್ರಗ್ಸ್ ನಿಮಗೆಲ್ಲಿ ಸಿಗುತ್ತದೆ?: ರಾಹುಲ್ ಗಾಂಧಿಗೆ ಸಚಿವನ ಪ್ರಶ್ನೆ

|

ಭೋಪಾಲ್, ಅಕ್ಟೋಬರ್ 8: ಅಧಿಕಾರದಲ್ಲಿ ಇದ್ದಿದ್ದರೆ ತಮ್ಮ ಕಾಂಗ್ರೆಸ್ ಪಕ್ಷ 15 ನಿಮಿಷಗಳ ಒಳಗೆ ಚೀನಾ ಸೇನೆಯನ್ನು ಹೊರಹಾಕುತ್ತಿತ್ತು ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರತ್ತ ವಾಗ್ದಾಳಿ ನಡೆಸಿರುವ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಅಷ್ಟು ಒಳ್ಳೆಯ ಗುಣಮಟ್ಟದ ಡ್ರಗ್ಸ್ ಅವರಿಗೆ ಎಲ್ಲಿ ಸಿಗುತ್ತಿದೆ?' ಎಂದು ಲೇವಡಿ ಮಾಡಿದ್ದಾರೆ.

'10 ದಿನಗಳಲ್ಲಿ ಸಾಲ ಮನ್ನಾ, 15 ನಿಮಿಷದಲ್ಲಿ ಚೀನಾವನ್ನು ಹೊರಗೆಸೆಯುವುದು... ಅವರಿಗೆ ಶಿಕ್ಷಣ ನೀಡಿದ ಶಿಕ್ಷಕರಿಗೆ ನಾನು ಗೌರವ ಸಲ್ಲಿಸಲು ಬಯಸುತ್ತೇನೆ. ನಿಮಗೆ ಇಷ್ಟು ಗುಣಮಟ್ಟದ ಡ್ರಗ್ಸ್ ಎಲ್ಲಿಂದ ಸಿಗುತ್ತದೆ?' ಎಂದು ಅವರು ವ್ಯಂಗ್ಯವಾಡಿದರು.

ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದಲ್ಲಿ ಚೀನಾವನ್ನು ಹೊರ ಹಾಕುತ್ತಿದ್ದೆವು: ರಾಹುಲ್ ಗಾಂಧಿ

ಹರಿಯಾಣದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಂಗಳವಾರ ಮಾತನಾಡಿದ್ದ ರಾಹುಲ್ ಗಾಂಧಿ, ಯುಪಿಎ ಅಧಿಕಾರದಲ್ಲಿ ಇದ್ದಿದ್ದರೆ ಚೀನಾವನ್ನು ಭಾರತದ ಗಡಿಯಿಂದ 100 ಕಿ.ಮೀ. ದೂರ ಎಸೆದುಬಿಡುತ್ತಿದ್ದೆವು. ಅದಕ್ಕೆ 15 ನಿಮಿಷ ಕೂಡ ಬೇಕಾಗುತ್ತಿರಲಿಲ್ಲ. ನಮ್ಮ ದೇಶವನ್ನು ಪ್ರಧಾನಿ ಮೋದಿ ದುರ್ಬಲಗೊಳಿಸಿದ್ದಾರೆ. ಹೀಗಾಗಿ ಚೀನಾ ಒಳಗೆ ನುಗ್ಗಿ ನಮ್ಮ ಸೈನಿಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದ್ದರು.

ರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿ

ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಷ್ಟೂ ಸಮಯ ಚೀನಾವು ಗಡಿಯಲ್ಲಿನ ವಿಚಾರಕ್ಕೆ ತಂಟೆ ಮಾಡುವ ಧೈರ್ಯ ಮಾಡಿರಲಿಲ್ಲ. ಈಗಲೂ ನಾವು ಅಧಿಕಾರಕ್ಕೆ ಬಂದರೆ ಕೆಲವೇ ಸಮಯದಲ್ಲಿ ನಮ್ಮ ಸೈನಿಕರು ಚೀನಾ ಪಡೆಗಳನ್ನು ಹೊರಹಾಕಿಬಿಡುತ್ತಾರೆ. ಚೀನಾವು ನಮ್ಮ ಗಡಿಯೊಳಗೆ ಬಂದು ನಾಲ್ಕು ತಿಂಗಳಾಗಿದೆ. ಅವರನ್ನು ಹೊರಹಾಕಲು ಎಷ್ಟು ಸಮಯ ಬೇಕು? ಯುಪಿಎ ಸರ್ಕಾರ ರಚನೆಯಾಗುವವರೆಗೂ ಚೀನಾವು ನಮ್ಮ ಪ್ರದೇಶವನ್ನು ಆಕ್ರಮಿಸುವ ಕೆಲಸ ಮುಂದುವರಿಸುತ್ತದೆ ಎಂದು ಹೇಳಿದ್ದರು.

English summary
Madhya Pradesh Home Minister Narottam Mishra jibes at Rahul Gandhi, Where do you get such good quality of drugs?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X