ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: 'ಬಂತು ಬಂತು ಟ್ರೈನ್ ಬಂತು' ಖುಷಿಯಲ್ಲಿ ನೃತ್ಯ ಮಾಡಿದ ಪ್ರಯಾಣಿಕರು

|
Google Oneindia Kannada News

ಭೋಪಾಲ್ ಮೇ 26: ಬುಧವಾರ ತಡರಾತ್ರಿ ಮಧ್ಯಪ್ರದೇಶದ ರತ್ಲಾಮ್ ರೈಲು ನಿಲ್ದಾಣದಲ್ಲಿ ಕುತೂಹಲಕಾರಿ ದೃಶ್ಯ ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ರೈಲ್ವೇ ನಿಲ್ದಾಣದಲ್ಲಿ ಹಲವಾರು ಪ್ರಯಾಣಿಕರು ಗರ್ಭಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ರಾತ್ರಿ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರಂ ನಂ.5ರಲ್ಲಿ ಹತ್ತಾರು ಜನರ ಈ ಸ್ವಯಂಪ್ರೇರಿತ ಪ್ರದರ್ಶನಕ್ಕೆ ಕಾರಣವೇನೆಂದರೆ ರೈಲು ಸಮಯಕ್ಕಿಂತ 20 ನಿಮಿಷ ಮುಂಚಿತವಾಗಿ ಬಂದಿರುವುದು. ಹೌದು.. ಬಾಂದ್ರಾ-ಹರಿದ್ವಾರ ರೈಲು ಬುಧವಾರ ರಾತ್ರಿ 10.15 ಕ್ಕೆ 20 ನಿಮಿಷಗಳ ಮುಂಚಿತವಾಗಿ ರತ್ಲಾಮ್ ನಿಲ್ದಾಣಕ್ಕೆ ಬಂದಾಗ ಇದು ಪ್ರಾರಂಭವಾಯಿತು. ರೈಲು ಹೊರಡಲು 10 ನಿಮಿಷಗಳ ನಿಲುಗಡೆ ಸಮಯವನ್ನು ಹೊಂದಿತ್ತು.

ವಿಡಿಯೊ: ಬೆಂಕಿಯನ್ನೇ ತಿನ್ನುವ ಅಗ್ನಿ ಪ್ರೇಮಿವಿಡಿಯೊ: ಬೆಂಕಿಯನ್ನೇ ತಿನ್ನುವ ಅಗ್ನಿ ಪ್ರೇಮಿ

ಪ್ರಯಾಣಿಕರ ಕೈಯಲ್ಲಿ ಸುಮಾರು 30 ನಿಮಿಷಗಳಿರುವಾಗ, ಪ್ರಯಾಣಿಕರ ಗುಂಪು ಗರ್ಭಾ ನೃತ್ಯ ಮಾಡಲು ಪ್ರಾರಂಭಿಸಿದೆ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ 'ಒಡ್ನಿ ಉಡಿ ಉಡಿ ಜಾಯೆ' ಮುಂತಾದ ಹಾಡುಗಳಿಗೆ ಗುಂಪು ನೃತ್ಯ ಮಾಡುವುದನ್ನು ನೋಡಬಹುದು. ಇದರಿಂದ, ನೋಡುಗರಿಗೆ ಆಶ್ಚರ್ಯವಾಗಿದೆ.

VIDEO of Passengers Garba dancing in Railway station

ಈ ಕ್ಲಿಪ್ ಅನ್ನು ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಕೂ ಆಪ್‌ನಲ್ಲಿ "ಹ್ಯಾಪಿ ಜರ್ನಿ" ಎಂದು ಬರೆಯುವ ಮೂಲಕ ಹಂಚಿಕೊಂಡಿದ್ದಾರೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ಕೂ ಬಳಕೆದಾರರು, "ಭಾರತೀಯರಾದ ನಾವು ಆಚರಿಸಲು ಇಷ್ಟಪಡುತ್ತೇವೆ. ನಮಗೆ ಸಂತೋಷಪಡಲು ಒಂದು ಕಾರಣವನ್ನು ನೀಡಿ ... " ಎಂದು ಬರೆಯುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

"ಬಹುತ್ ಸುಂದರ್ (ತುಂಬಾ ಸುಂದರ)" ಎಂದು ಮತ್ತೊಬ್ಬರು ಬರೆದಿದ್ದಾರೆ.

"ರೈಲು ಸಮಯಕ್ಕೆ ಸರಿಯಾಗಿ ಬಂದಾಗ, ಅದು ನಿಜವಾಗಿಯೂ ಸಂತೋಷದ ಮೂಲವಾಗಿದೆ" ಎಂದು ಹಿಂದಿಯಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
A video of Garbha dancing at the Ratlam train station in Madhya Pradesh late Wednesday night has gone viral on the social networking site.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X