• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮಶಾನದ ಉದ್ಯಾನ ಅಭಿವೃದ್ಧಿಗೆ ಕೊರೊನಾದಿಂದ ಮೃತರಾದವರ ಚಿತಾಭಸ್ಮ ಬಳಕೆ

|
Google Oneindia Kannada News

ಭೋಪಾಲ್, ಜುಲೈ 05: ಸ್ಮಶಾನವೊಂದರಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಕೊರೊನಾ ಸೋಂಕಿನಿಂದ ಮೃತರಾದವರ ಚಿತಾಭಸ್ಮವನ್ನು ಬಳಕೆ ಮಾಡಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ.

''ಸ್ಮಶಾನದಲ್ಲಿ ಹೀಗ 21 ಟ್ರಕ್ ಲೋಡ್ ಚಿತಾಭಸ್ಮವಿದೆ. ಚಿತಾಭಸ್ಮವನ್ನು ನರ್ಮದಾ ನದಿಗೆ ಬಿಡುವುದು ಕಷ್ಟಕರ ಮತ್ತು ಪರಿಸರ ಸ್ನೇಹಿಯಲ್ಲ. ಹಾಗೆ ಮಾಡುವುದರಿಂದ ನದಿಯನ್ನು ಕಲುಷಿತಗೊಳಿಸಬಹುದು. ಆದ್ದರಿಂದ, ಪಾರ್ಕ್ ಅಭಿವೃದ್ಧಿಪಡಿಸುವುದಕ್ಕೆ ಚಿತಾಭಸ್ಮವನ್ನು ಬಳಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ'' ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮಮತೇಶ್ ಶರ್ಮಾ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನು ಬಳಸಿ ಭೋಪಾಲ್‌ನ ಹಿಂದೂ ಸ್ಮಶಾನದಲ್ಲಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಭಾಭಾದಾ ವಿಶ್ರಮ್ ಘಾಟ್ ನಲ್ಲಿ 21 ಟ್ರಕ್ ಲೋಡ್ ಸತ್ತವರ ಚಿತಾಭಸ್ಮ ಬಳಸಿಕೊಳ್ಳಲಾಗುತ್ತದೆ. ಕೊರೊನಾದಿಂದ ಮೃತಪಟ್ಟವರ ಚಿತಾಭಸ್ಮವನ್ನು ಮೃತನ ಕುಟುಂಬಸ್ಥರು ಸಂಗ್ರಹಿಸಿಲ್ಲ. ಕಾರಣ ಕೊರೊನಾ ಪ್ರೇರಿತ ನಿರ್ಬಂಧಗಳು ಮತ್ತು ಅದರ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ.

ಭಾರತದಲ್ಲಿ 35 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 35 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

ಮಾರ್ಚ್ 15ರಿಂದ ಜೂನ್ 15ರವರೆಗಿನ 90 ದಿನಗಳ ಅವಧಿಯಲ್ಲಿ ಕೊರೊನಾ ಪ್ರೋಟೋಕಾಲ್ ಅನ್ನು ಅನುಸರಿಸಿ ಭಡ್ಭಾದಾ ವಿಶ್ರಮ್ ಘಾಟ್‌ನಲ್ಲಿ 6,000 ಕ್ಕೂ ಹೆಚ್ಚು ಶವಗಳನ್ನು ದಹಿಸಲಾಯಿತು.

ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಶವಾಗಾರದಲ್ಲಿ 12,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸ್ಮಶಾನದ ನಿರ್ವಹಣಾ ಸಮಿತಿಯ ಪದಾಧಿಕಾರಿ ಮಾಹಿತಿ ನೀಡಿದ್ದಾರೆ.

ಕುಟುಂಬದ ಹೆಚ್ಚಿನ ಸದಸ್ಯರು ಮೂಳೆಗಳನ್ನು ಸಂಗ್ರಹಿಸಿ ಕೊರೊನಾ ಪ್ರೇರಿತ ನಿರ್ಬಂಧಗಳಿಂದ ಚಿತಾಭಸ್ಮವನ್ನು ಬಿಟ್ಟರು ಎಂದು ಅದರ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮಮತೇಶ್ ಶರ್ಮಾ ತಿಳಿಸಿದ್ದಾರೆ.

English summary
A park is being developed at a crematorium in Bhopal using the ashes of those who died after contracting the coronavirus infection during the second wave of the pandemic this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X