ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9,000 ರುಪಾಯಿ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತ

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 25: ಮಧ್ಯಪ್ರದೇಶದ ಛಿಂದ್ವಾರದಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮುಖ್ಯಮಂತ್ರಿ ಕಮಲ್ ನಾಥ್ ಅವರು ಪ್ರತಿನಿಧಿಸುವ ಕ್ಷೇತ್ರ. ಮೇಘಸ್ವಿನಿ ಗ್ರಾಮದ ಅಕಡು ಉಯ್ಕೆ ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಜಮೀನಿನಲ್ಲಿರುವ ಶೆಡ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಆತನ ಪತ್ನಿ ನೀಡಿರುವ ಮಾಹಿತಿ ಪ್ರಕಾರ, ಮಗಳ ಮದುವೆ ಸಲುವಾಗಿ ಸ್ಥಳೀಯ ಲೇವಾದೇವಿದಾರನ ಬಳಿ ಒಂಬತ್ತು ಸಾವಿರ ಸಾಲವಾಗಿತ್ತು. ಅದನ್ನು ತೀರಿಸಲು ಸಾಧ್ಯವಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಕುಟುಂಬ ಬೆಳೆ ನಷ್ಟ ಅನುಭವಿಸುತ್ತಿತ್ತು. ಇದರಿಂದ ಅಕಡು ಬಹಳ ಚಿಂತಿತರಾಗಿದ್ದರು.

"ನನಗೆ ಸಾಲ ಏನೂ ಸಮಸ್ಯೆ ಆಗಿರಲಿಲ್ಲ. ನಮಗೆ ಮಗ ಇದ್ದಾನೆ. ಅವನು ಬಹಳ ಬುದ್ಧಿವಂತ. ಚೆನ್ನಾಗಿ ಓದುತ್ತಾನೆ. ಬೇಗ ಸಾಲ ತೀರಿಸಬಹುದು ಅಂತ ನಾವು ಯೋಚಿಸಿದ್ದೆವು. ಸಾಲ ನೀಡಿದವರು ಕೂಡ ಈಗಲೇ ಹಣ ವಾಪಸ್ ಕೊಡಿ ಅಂತೇನೂ ಕೇಳಿರಲಿಲ್ಲಾ" ಎಂದು ಆಕೆ ಹೇಳಿದ್ದಾರೆ.

Unable to repay 9 thousand rupees loan, farmer commits suicide in Madhya Pradesh

ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿದೆ. ಅದಕ್ಕೂ ಮುನ್ನ ಕೆಲ ವರ್ಷಗಳಲ್ಲಿ ಹಲವು ರೈತರು ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. "ನಾವು ಯಾವುದೇ ಬ್ಯಾಂಕ್ ನಿಂದ ಸಾಲ ತೆಗೆದುಕೊಂಡಿಲ್ಲ" ಎಂದು ರೈತರ ಮಗ ನರೇಶ್ ಹೇಳಿದ್ದಾನೆ.

ತಂಬಾಕು ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆತಂಬಾಕು ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಏಪ್ರಿಲ್ ಇಪ್ಪತ್ತೊಂಬತ್ತರಂದು ಛಿಂದ್ವಾರದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.

English summary
A farmer committed suicide in Chhindwara in Madhya Pradesh, the home constituency of Chief Minister Kamal Nath. Akadu Uike, a resident of Meghasiwni village, was found hanging from a shed in his field this morning. His wife said he had borrowed Rs. 9,000 from a local moneylender for their daughter's wedding and was unable to repay it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X