ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಚಿತ್ರ ಘಟನೆ: ತಹಸೀಲ್ದಾರ್ ಲಂಚ ಕೇಳಿದ್ದಕ್ಕೆ ರೈತ ಮಾಡಿದ್ದೇನು ಗೊತ್ತಾ?

|
Google Oneindia Kannada News

ಭೋಪಾಲ್, ಫೆ 25: ತಹಸೀಲ್ದಾರ್ ಕೇಳಿದ ಲಂಚವನ್ನು ಹಣದ ರೂಪದಲ್ಲಿ ಕೊಡಲಾಗದ ರೈತನೊಬ್ಬ ತನ್ನ ಎಮ್ಮೆಯನ್ನೇ ಲಂಚದ ರೂಪದಲ್ಲಿ ಕೊಟ್ಟ ವಿಚಿತ್ರ ಘಟನೆ ಟಿಕಾಂಗಢ್ ಜಿಲ್ಲೆಯಿಂದ ವರದಿಯಾಗಿದೆ.

ಜಿಲ್ಲೆಯ, ದೇವಪುರ ಎನ್ನುವ ಗ್ರಾಮದ ಐವತ್ತು ವರ್ಷದ ರೈತ ಲಕ್ಷ್ಮೀ ಯಾದವ್ ಎನ್ನುವವರು ಭೂವರ್ಗಾವಣೆ ಸಂಬಂಧದ ಕೆಲಸಕ್ಕಾಗಿ ಖರ್ಗಾಪುರದಲ್ಲಿರುವ ತಹಸೀಲ್ದಾರ್ ಕಚೇರಿಗೆ ಬಂದಿದ್ದರು.

ಅಧಿಕಾರಿಗಳಿಗೆ ಲಂಚ ಕೊಡಬೇಕೆಂದು ರೈತ ಕುಟುಂಬದಿಂದ ಭಿಕ್ಷಾಟನೆಅಧಿಕಾರಿಗಳಿಗೆ ಲಂಚ ಕೊಡಬೇಕೆಂದು ರೈತ ಕುಟುಂಬದಿಂದ ಭಿಕ್ಷಾಟನೆ

ತನ್ನ ಸೊಸೆಯ ಹೆಸರಿನಲ್ಲಿ ಖರೀದಿ ಮಾಡಲಾಗಿದ್ದ ಜಮೀನನ್ನು ವರ್ಗಾವಣೆ ಮಾಡಲು ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ರೆಡಿಮಾಡಲು, ತಹಸೀಲ್ದಾರ್ 50 ಸಾವಿರ ರೂಪಾಯಿ ನೀಡಬೇಕೆಂದಿದ್ದರು.

Unable to meet demand for bribe, farmer ties buffalo to MP officer’s vehicle

ಐವತ್ತು ಸಾವಿರ ರೂಪಾಯಿಯನ್ನು ಹೇಗೋ ಹೊಂದಿಸಿ ರೈತ ಲಕ್ಷ್ಮೀ ಯಾದವ್ ನೀಡಿದ್ದರು. ಆದರೆ, ಇದಾದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಇನ್ನೂ ಐವತ್ತು ಸಾವಿರ ರೂಪಾಯಿ ನೀಡುವಂತೆ ಡಿಮಾಂಡ್ ಮಾಡಿದ್ದರು.

ಎಲ್ಲರೂ ತಿರುಗಿನೋಡುವಂಥ ದಾಖಲೆ ಸೃಷ್ಟಿಸಿದ ಮಧ್ಯ ಪ್ರದೇಶದ ಜನತೆ ಎಲ್ಲರೂ ತಿರುಗಿನೋಡುವಂಥ ದಾಖಲೆ ಸೃಷ್ಟಿಸಿದ ಮಧ್ಯ ಪ್ರದೇಶದ ಜನತೆ

ಹೆಚ್ಚಿನ ಹಣ ಹೊಂದಿಸಲಾಗದೇ ರೈತ ಲಕ್ಷ್ಮೀ ಯಾದವ್, ತನ್ನ ಜೊತೆ ಕರೆದುಕೊಂಡು ಬಂದಿದ್ದ ಎಮ್ಮೆಯನ್ನು ಲಂಚದ ರೂಪದಲ್ಲಿ ನೀಡಿ, ಇಲಾಖೆಯ ಅಧಿಕಾರಿಗಳ ವಾಹನಕ್ಕೆ ಎಮ್ಮೆಯನ್ನು ಕಟ್ಟಿಬಂದ ಘಟನೆ ನಡೆದಿದೆ.

ಟಿಕಾಂಗಢ್ ಜಿಲ್ಲೆಯ ಕಲೆಕ್ಟರ್ ಸೌರವ್ ಕುಮಾರ್ ಸುಮನ್, ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ನೀಡುವಂತೆ ಖರ್ಗಾಪುರ ತಹಸೀಲ್ದಾರ್ ಕಚೇರಿಗೆ ಸೂಚಿಸಿದ್ದಾರೆ.

English summary
Unable to meet the demand for bribe by a tehsildar for the transfer of two pieces of land, a farmer tied his buffalo to the revenue department officer’s vehicle in Tikamgarh district of Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X