ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಭಾಷೆ ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾ ಭಾರತಿ

|
Google Oneindia Kannada News

ಭೋಪಾಲ್, ಸೆಪ್ಟೆಂಬರ್ 22: "ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ" ಎಂದು ಉಮಾಭಾರತಿ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳು ಇರುವುದು ನಮ್ಮ ಚಪ್ಪಲಿಗಳನ್ನು ತೆಗೆದುಕೊಳ್ಳಲು ಎಂಬ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬಳಿಕ, ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಅವರು ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, ಅವರು ತಮ್ಮ ಭಾಷೆಯನ್ನು ಸುಧಾರಿಸುವುದಾಗಿ ತಿಳಿಸಿದ್ದಾರೆ.

ಉಮಾ ಭಾರತಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉಮಾ ಭಾರತಿ ಕ್ಷಮೆ ಕೋರಿದ್ದಾರೆ. ನನ್ನ ಮಾತಿನಿಂದ ನನಗೆ ತುಂಬಾ ನೋವಾಗಿದೆ. ನಾನು ನಿಮಗೆ ಪದೇ ಪದೇ ಹೇಳುತ್ತಿದ್ದೆ, ನೀವು ಮಿತವಾಗಿ ಭಾಷೆ ಬಳಸುವುದಿಲ್ಲ ಎಂದು. ಆದರೆ ನಾನು ಈಗಿನಿಂದಲೇ ನನ್ನ ಭಾಷೆಯನ್ನು ಸುಧಾರಿಸುತ್ತೇನೆ, ನೀವು ಅದೇ ರೀತಿ ಮಾಡಲು ಸಾಧ್ಯವಾದರೆ, ಅದನ್ನು ಮಾಡಿ ಎಂದು ಹೇಳಿದ್ದಾರೆ.

Uma Bharti Says Will Improve My Language

ಅವರು ಕಾಂಗ್ರೆಸ್ ನಾಯಕನಿಗೆ ಬರೆದ ಪತ್ರದಲ್ಲಿ 'ರಾಮಾಯಣ' ಮಹಾಕಾವ್ಯದ 'ಚೌಪಾಯಿ' (ಪದ್ಯ) ವನ್ನು ಉಲ್ಲೇಖಿಸಿದ್ದಾರೆ. 'ನಾಯಕರನ್ನು ಅಧಿಕಾರಿಗಳು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸಿದ್ದೀರಾ. ಇಲ್ಲ ಹಾಗಲ್ಲ. ಮೊದಲು ಅಧಿಕಾರಿಗಳು ನಮ್ಮ ಬಳಿ ಖಾಸಗಿಯಾಗಿ ಮಾತುಕತೆ ನಡೆಸುತ್ತಾರೆ. ಬಳಿಕ ಅಧಿಕಾರಿಗಳು ಕಡತ ತಯಾರಿಸಿ ಮುಂದಕ್ಕೆ ಕಳಿಸುತ್ತಾರೆ. ಅಧಿಕಾರಿಗಳು ಇರುವುದು ನಮ್ಮ ಚಪ್ಪಲಿ ಎತ್ತಲು ಎಂದು ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ 'ನಿಮಗೆ ಗೊತ್ತಾ..? ಅಧಿಕಾರಿ ವರ್ಗ ಎಂದರೇನು? ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಲು. ಅವರು ನಮ್ಮ ಚಪ್ಪಲಿ ಎತ್ತುತ್ತಾರೆ.

ಹೀಗಾಗಿ ಮಾತ್ರ ನಾವು ಅವರೊಂದಿಗೆ ರಾಜಿಯಾಗುತ್ತೇವೆ' ಎಂದು ಉಮಾ ಭಾರತಿ ಮಾತನಾಡಿರುವುದು ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಭಾರತಿ ಅವರ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ಭಾರೀ ವೈರಲ್‌ ಆಗಿದೆ. ಮುಖ್ಯಮಂತ್ರಿ, ಕೇಂದ್ರ ಸಚಿವೆಯಾಗಿದ್ದವರು ಇಂಥ ಮಾತುಗಳನ್ನು ಹೇಳಬಾರದು ಎಂದು ಟೀಕಿಸಿದ್ದಾರೆ. ಅಲ್ಲದೇ ಕೆಲವರು ಇದು ಅವರ ಮನಸ್ಥಿತಿಯ ಪ್ರತಿರೂಪ ಎಂದು ಕಿಡಿಕಾರಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಉಮಾ ಭಾರತಿ, "ಅಧಿಕಾರಶಾಹಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಮೊದಲು ಖಾಸಗಿಯಾಗಿ ಚರ್ಚೆಗಳು ನಡೆಯುತ್ತವೆ ಮತ್ತು ನಂತರ ಅಧಿಕಾರಶಾಹಿಗಳು ಒಂದು ಕಡತವನ್ನು ತಯಾರಿಸುತ್ತಾರೆ.

ನನ್ನನ್ನು ಕೇಳಿ, 11 ವರ್ಷಗಳಿಂದ ನಾನು ಕೇಂದ್ರ ಸಚಿವೆ ಮತ್ತು ಮುಖ್ಯಮಂತ್ರಿಯಾಗಿದ್ದೇನೆ. ಮೊದಲು ನಾವು ಚರ್ಚೆ ನಡೆಸುತ್ತೇವೆ ಮತ್ತು ನಂತರ ಫೈಲ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

ಅಧಿಕಾರಶಾಹಿ ರಾಜಕಾರಣಿಗಳನ್ನು ನಿಯಂತ್ರಿಸುವುದು ಎಲ್ಲಾ ಅಸಂಬದ್ಧ. ಅವರಿಗೆ ಸಾಧ್ಯವಿಲ್ಲ, ಅವರ ನಿಲುವು ಏನು? ನಾವು ಅವರಿಗೆ ಸಂಬಳ ನೀಡುತ್ತಿದ್ದೇವೆ, ನಾವು ಅವರಿಗೆ ಪೋಸ್ಟಿಂಗ್ ನೀಡುತ್ತಿದ್ದೇವೆ, ನಾವು ಅವರಿಗೆ ಬಡ್ತಿ ಮತ್ತು ಪದವಿಯನ್ನು ನೀಡುತ್ತಿದ್ದೇವೆ - ಅವರು ಏನು ಮಾಡಬಹುದು? ಸತ್ಯವೆಂದರೆ ನಾವು ಅವರನ್ನು ನಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಒಬಿಸಿ ಮುಖಂಡರ ನಿಯೋಗವು ಜಾತಿ ಆಧಾರಿತ ಜನಗಣತಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಕೋಟಾದ ಬೇಡಿಕೆಯನ್ನು ಅವರ ಮುಂದಿಟ್ಟ ವೇಳೆ ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಜಾತಿಗಣತಿ ಕುರಿತು ಬೇಗನೆ ನಿರ್ಧಾರ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದೆ.

ಉಮಾಭಾರತಿ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅವರ ಹೇಳಿಕೆಯನ್ನು ನಾಚಿಕೆಗೇಡು ಎಂದಿರುವ ಕಾಂಗ್ರೆಸ್ ನಾಯಕ ಕೆಕೆ ಮಿಶ್ರಾ "ಅಧಿಕಾರಿಗಳು ರಾಜಕಾರಣಿಗಳ ಚಪ್ಪಲಿ ಎತ್ತುತ್ತಾರೆಯೇ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.

English summary
After her controversial remarks that government officials are there only to "pick up our (leaders') slippers", senior BJP leader Uma Bharti has written a letter to Congress veteran Digvijaya Singh, saying she will improve her language and also urged him to do so.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X