ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದೋರ್‌ನಲ್ಲಿ ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ, ದೇಶದಲ್ಲಿ ಬೇರೆಲ್ಲಿವೆ ಟ್ರೀ ಆಂಬ್ಯುಲೆನ್ಸ್‌?

|
Google Oneindia Kannada News

ಇಂದೋರ್‌, ಆಗಸ್ಟ್‌ 26: ಮಧ್ಯಪ್ರದೇಶದ ಇಂದೋರ್‌ನಲ್ಲಿ 'ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಲಾಗಿದೆ. ಇದು ನಗರದಲ್ಲಿನ ಜೈವಿಕ ವೈವಿಧ್ಯತೆಯನ್ನು ಸಂರಕ್ಷಿಸಲು ಮತ್ತು ಮರಗಳ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ.

ದೇಶದಲ್ಲಿ ಸ್ವಚ್ಛತೆಯಲ್ಲಿ ಸತತವಾಗಿ ನಂಬರ್ ಒನ್ ಸ್ಥಾನದಲ್ಲಿರುವ ಕ್ಲೀನ್ ಸಿಟಿ ಇಂದೋರ್ ಇದೀಗ ಗ್ರೀನ್ ಸಿಟಿಯೂ ಆಗುವತ್ತ ಸಾಗುತ್ತಿದೆ. ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು ಮತ್ತು ನಗರವನ್ನು ಹಸಿರಾಗಿಡಲು ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ತನ್ನ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ರಾಜಧಾನಿ ನಗರದಲ್ಲಿ ಹಸಿರು ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಈ ವಾಹನಗಳಿಗೆ ಚಾಲನೆ ನೀಡಿದೆ.

Breaking: ಶಿರೂರು ಟೋಲ್ ಗೇಟ್‌ಗೆ ಆಂಬುಲೆನ್ಸ್‌ ಡಿಕ್ಕಿ, ನಾಲ್ವರ ಸಾವು, ನಾಲ್ವರು ಗಂಭೀರBreaking: ಶಿರೂರು ಟೋಲ್ ಗೇಟ್‌ಗೆ ಆಂಬುಲೆನ್ಸ್‌ ಡಿಕ್ಕಿ, ನಾಲ್ವರ ಸಾವು, ನಾಲ್ವರು ಗಂಭೀರ

ನಗರದ ಸುತ್ತಮುತ್ತಲಿನ ಮರಗಳನ್ನು ಆರೋಗ್ಯವಾಗಿಡಲು ಮತ್ತು ಅವುಗಳನ್ನು ಕಾಪಾಡಿಕೊಳ್ಳಲು 'ಟ್ರೀ ಆಂಬ್ಯುಲೆನ್ಸ್' ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಮಹಾನಗರ ಪಾಲಿಕೆಯ ಕಾರ್ಯಾಗಾರದಲ್ಲಿಯೇ ಈ ಆಂಬ್ಯುಲೆನ್ಸ್ ಸಿದ್ಧಪಡಿಸಲಾಗಿದ್ದು, ಅನಾರೋಗ್ಯ, ಹುಳು ಬಾಧಿತ ಮರಗಳು ಮತ್ತು ಗಿಡಗಳಿಗೆ ಚಿಕಿತ್ಸೆ ನೀಡಲಿದೆ.

ಹಸಿರು ಕಾಪಾಡಿಕೊಳ್ಳಲು ಆರಂಭ

ಹಸಿರು ಕಾಪಾಡಿಕೊಳ್ಳಲು ಆರಂಭ

ಆಂಬುಲೆನ್ಸ್‌ನಲ್ಲಿ ಮರಗಳಿಗೆ ಔಷಧಿ ಸಿಂಪಡಣೆ, ನೀರು ಸಿಂಪಡಿಸುವುದು, ಕತ್ತರಿಸುವುದು ಸೇರಿದಂತೆ ಎಲ್ಲಾ ಸೌಲಭ್ಯಗಳು ಮತ್ತು ಉಪಕರಣಗಳು ಈ ವಾಹನದಲ್ಲಿ ಇವೆ. ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ್ ಮಾತನಾಡಿ, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಜೀವವೈವಿಧ್ಯ ರಕ್ಷಣೆಗಾಗಿ ಸ್ಥಾಪಿಸಲಾದ ಟ್ರೀ ಆಂಬ್ಯುಲೆನ್ಸ್ ಸ್ಪ್ರಿಂಕ್ಲರ್‌ಗಳು, ನೀರಿನ ವ್ಯವಸ್ಥೆ, ಔಷಧಗಳು ಮತ್ತು ಇತರ ಉಪಕರಣಗಳಂತಹ ಅಗತ್ಯತೆಗಳೊಂದಿಗೆ ಇಂದೋರ್ ಅನ್ನು ಹಸಿರು ಕಾಪಾಡಿಕೊಳ್ಳಲು ಆರಂಭ ಮಾಡಲಾಗಿದೆ ಎಂದಿದ್ದಾರೆ. ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯಿಂದ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸಲಿದೆ.

ಆಧುನಿಕ ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿ ವಿಳಂಬಕ್ಕೆ ಹೈಕೋರ್ಟ್ ಗರಂಆಧುನಿಕ ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿ ವಿಳಂಬಕ್ಕೆ ಹೈಕೋರ್ಟ್ ಗರಂ

ಅನಾರೋಗ್ಯಕರ ಮರಗಳ ಸಂರಕ್ಷಣೆ

ಅನಾರೋಗ್ಯಕರ ಮರಗಳ ಸಂರಕ್ಷಣೆ

ಇದಕ್ಕೂ ಮೊದಲು ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಕೊಳೆಯುತ್ತಿರುವ ಮತ್ತು ಅನಾರೋಗ್ಯಕರ ಮರಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ತುರ್ತು 'ಟ್ರೀ ಆಂಬುಲೆನ್ಸ್' ಸೇವೆಯನ್ನು ಪರಿಚಯಿಸಲು ಸಜ್ಜಾಗಿತ್ತು. ಗೆದ್ದಲು ಮತ್ತು ಇತರ ಕೀಟಗಳಿಂದ ಹಲವಾರು ಮರಗಳು ಕೊಳೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನಾವು ಮರಗಳಿಗೆ ಆಂಬ್ಯುಲೆನ್ಸ್ ಸೇವೆಯ ಕಲ್ಪನೆಯನ್ನು ತಂದಿದ್ದೇವೆ. ನಾವು ಫೋನ್ ಸಂಖ್ಯೆಯನ್ನು ಬಿಡುಗಡೆ ಮಾಡುತ್ತೇವೆ. ಇದರಿಂದ ಜನರು ಕೆಟ್ಟ ಸ್ಥಿತಿಯಲ್ಲಿ ಮರವನ್ನು ಕಂಡಾಗಲೆಲ್ಲಾ ನಮ್ಮನ್ನು ಸಂಪರ್ಕಿಸಬಹುದು. ಒಬ್ಬರು ಚಂಡೀಗಢದ ಪರಿಯಾವರಣ್ ಭವನಕ್ಕೆ ಕರೆ ಮಾಡಿದರೆ ಸಾಕು. ಆಗ ತಜ್ಞರೊಂದಿಗೆ ವಿಶೇಷ ವಾಹನವು ಸ್ಥಳವನ್ನು ತಲುಪುತ್ತದೆ ಎಂದು ಚಂಡೀಗಢದ ಪರಿಸರ ನಿರ್ದೇಶಕ ದೇಬೇಂದ್ರ ದಲೈ ಹೇಳಿದ್ದರು.

ಪರಿಸರ ಜಾಗೃತಿಯನ್ನು ಹರಡಲು ಸಹಾಯ

ಪರಿಸರ ಜಾಗೃತಿಯನ್ನು ಹರಡಲು ಸಹಾಯ

2019ರಲ್ಲಿಯೇ ಚೆನ್ನೈನಲ್ಲಿ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಟ್ರೀ ಆಂಬ್ಯುಲೆನ್ಸ್‌ಗೆ ಚಾಲನೆ ನೀಡಲಾಗಿತ್ತು. ಇದು ಮರಗಳಿಗೆ ಉಪಚರಿಸುವ ಮೂಲಕ ಮತ್ತು ಇತರ ಸಂಬಂಧಿತ ಸೇವೆಗಳನ್ನು ನೀಡುವ ಮೂಲಕ ಪರಿಸರ ಜಾಗೃತಿಯನ್ನು ಹರಡಲು ಸಹಾಯ ಮಾಡುತ್ತಿದೆ. ಟ್ರೀ ಆಂಬ್ಯುಲೆನ್ಸ್ ಸೀಡ್ ಬಾಲ್ ವಿತರಣೆ, ಸಸ್ಯ ವಿತರಣೆ, ಮರದ ನೆಡುವಿಕೆಗೆ ಸಹಾಯ ಮಾಡುವುದು, ಮರಗಳ ಸ್ಥಳಾಂತರ ಮತ್ತು ಸಮೀಕ್ಷೆ ಮತ್ತು ಸತ್ತ ಮರಗಳನ್ನು ತೆಗೆಯುವುದು ಮುಂತಾದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಚಂಡಮಾರುತಕ್ಕೆ ನೂರಾರು ಮರಗಳು ಬುಡಮೇಲು

ಚಂಡಮಾರುತಕ್ಕೆ ನೂರಾರು ಮರಗಳು ಬುಡಮೇಲು

ಟ್ರೀ ಆಂಬ್ಯುಲೆನ್ಸ್ ಸೇವೆಯ ಸಂಸ್ಥಾಪಕ ಅಬ್ದುಲ್ ಘನಿ ಮಾತನಾಡಿ, ಅನಾರೋಗ್ಯಪೀಡಿತರನ್ನು ನೋಡಿಕೊಳ್ಳುವ ಮಾದರಿಯಲ್ಲಿ ಮರಗಳನ್ನು ನೋಡಿಕೊಳ್ಳಲಾಗುವುದು. ಅಲ್ಲದೆ ಬೇರುಸಹಿತ ಮರಗಳನ್ನು ಮರಳಿ ಸ್ಥಳಾಂತರಿಸಲು ಮತ್ತು ಮರಗಳನ್ನು ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದರು. ಈ ಯೋಜನೆಯ ಅಧ್ಯಕ್ಷ ಸುರೇಶ್, ವರ್ದಾ ಮತ್ತು ಗಜ ಚಂಡಮಾರುತವು ತಮಿಳುನಾಡಿನಲ್ಲಿ ನೂರಾರು ಮರಗಳನ್ನು ಕಿತ್ತುಹಾಕಿದೆ. 2015ರ ಚೆನ್ನೈ ಪ್ರವಾಹವನ್ನು ನಾನು ಖುದ್ದಾಗಿ ನೋಡಿದ್ದೇನೆ. ಆದ್ದರಿಂದ, ಚೆನ್ನೈನಲ್ಲಿ ಟ್ರೀ ಆಂಬ್ಯುಲೆನ್ಸ್ ಅನ್ನು ರಚಿಸುವ ಅಬ್ದುಲ್ ಘನಿ ಅವರ ಆಲೋಚನೆಗೆ ನಮ್ಮ ಬೆಂಬಲವಿದೆ. ಇಡೀ ದೇಶದಲ್ಲಿ ನಮ್ಮ ಟ್ರೀ ಆಂಬ್ಯುಲೆನ್ಸ್ ದೊಡ್ಡ ಮರಗಳನ್ನು ಎತ್ತುವ ಹೈಡ್ರಾಲಿಕ್ ಯಂತ್ರವನ್ನು ಹೊಂದಿರುವ ಮೊದಲನೆಯ ಉಪಕ್ರಮವಾಗಿದೆ ಎಂದರು.

English summary
'Tree Ambulance' launched in Indore, Madhya Pradesh. It provides all the necessary facilities for conserving the biodiversity and protection of trees in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X