ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ; ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಕ್ವಾರಂಟೈನ್‌

|
Google Oneindia Kannada News

ಭೋಪಾಲ್, ಏಪ್ರಿಲ್ 06 : ಮಧ್ಯಪ್ರದೇಶದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕ್ವಾರಂಟೈನ್‌ನಲ್ಲಿದ್ದಾರೆ. ಐಎಎಸ್ ಅಧಿಕಾರಿ ಸೇರಿದಂತೆ ಇಲಾಖೆಯ 11 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಇಲಾಖೆಯ ಇಬ್ಬರು ಐಎಎಸ್ ಅಧಿಕಾರಿಗಳು, ಇಲಾಖೆಯ ನಿರ್ದೇಶಕರಿಗೆ ಕೊರೊನಾ ಸೋಂಕು ತಗುಲಿದೆ ಎಂಬುದು ಶನಿವಾರ ಖಚಿತವಾಗಿದೆ. ಇವರಲ್ಲಿ 8 ಜನರ ವರದಿ ಭಾನುವಾರ ಹೊರ ಬಂದಿದೆ. ರಾಜ್ಯದಲ್ಲಿ ಇದುವರೆಗೂ 193 ಪ್ರಕರಣ ದಾಖಲಾಗಿದ್ದು, 14 ಜನರು ಮೃತಪಟ್ಟಿದ್ದಾರೆ.

ಹೋಮ್ ಕ್ವಾರಂಟೈನ್ ಗಳ ಓಡಾಟ: ಮೈಸೂರಿನಲ್ಲಿ ಆತಂಕಹೋಮ್ ಕ್ವಾರಂಟೈನ್ ಗಳ ಓಡಾಟ: ಮೈಸೂರಿನಲ್ಲಿ ಆತಂಕ

ಹೆಚ್ಚುವರಿ ನಿರ್ದೇಶಕರು, ಜಂಟಿ ನಿರ್ದೇಶಕರು, ನಾಲ್ವರು ಸಹಾಯಕ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಎಲ್ಲಾ ಅಧಿಕಾರಿಗಳು ಸೋಂಕು ಖಚಿತವಾದ ಅಧಿಕಾರಿಗಳ ಜೊತೆ ಸಭೆಗಳಲ್ಲಿ ಪಾಲ್ಗೊಂಡಿದ್ದರು.

ಕ್ವಾರಂಟೈನ್ 14 ರಿಂದ 28 ದಿನಕ್ಕೆ ವಿಸ್ತರಣೆ, ಮುಂದುವರೆಯುತ್ತಾ ಲಾಕ್‌ಡೌನ್? ಕ್ವಾರಂಟೈನ್ 14 ರಿಂದ 28 ದಿನಕ್ಕೆ ವಿಸ್ತರಣೆ, ಮುಂದುವರೆಯುತ್ತಾ ಲಾಕ್‌ಡೌನ್?

Madhya Pradesh Health Department Is Under Quarantine

ಐಎಎಸ್ ಅಧಿಕಾರಿ ಆಸ್ಪತ್ರೆಯಲ್ಲ ಕ್ವಾರಂಟೈನ್‌ನಲ್ಲಿ ಇರಲು ನಿರಾಕರಿಸಿದ್ದಾರೆ. ಆದ್ದರಿಂದ, ಭೋಪಾಲ್ ಸ್ಥಳೀಯ ಆಡಳಿತ ಅವರ ನಿವಾಸಕ್ಕೆ ಸ್ಟಿಕ್ಕರ್ ಅಂಟಿಸಿದ್ದು, ಯಾರೂ ಮನೆಗೆ ಭೇಟಿ ನೀಡಬಾರದು ಎಂದು ಸೂಚನೆ ನೀಡಿದೆ.

ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು? ಏಪ್ರಿಲ್ 14ಕ್ಕೆ ಲಾಕ್ ಡೌನ್ ಅಂತ್ಯ; ಮುಂದೇನು?

ಮಾಧ್ಯಮದವರ ಕರೆಯನ್ನು ಐಎಎಸ್ ಅಧಿಕಾರಿಗಳು ಸ್ವೀಕಾರ ಮಾಡಿಲ್ಲ. ವಿಡಿಯೋ ಮೆಸೇಜ್‌ ಒಂದು ಹರಿದಾಡುತ್ತಿದೆ. "ನಾನು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೂ ಬೇರೆಯವರಿಂದ ಸೋಂಕು ಹಬ್ಬಿವರುವ ಸಾಧ್ಯತೆ ಇದೆ. ನನಗೆ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದಾನೆ" ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ವಿವಿಧ ಇಲಾಖೆಗಳ 50ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸೋಂಕು ಹರಡಿದೆ. ಅವರೆಲ್ಲರೂ ಸ್ವಯಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಇಂಧೋರ್ ಮತ್ತು ಭೋಪಾಲ್‌ನಲ್ಲಿ ಹೆಚ್ಚು ಪ್ರಕರಣದಳು ದಾಖಲಾಗಿವೆ.

English summary
Madhya Pradesh health department is under quarantine after 11 of department including 2 IAS officers and the director of health services have tested positive for Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X