ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೌಚಾಲಯದಲ್ಲೇ ಅಂಗನವಾಡಿ ಮಕ್ಕಳಿಗೆ ಅಡುಗೆ, ಆರೋಗ್ಯದ ಗತಿ ಏನು?

|
Google Oneindia Kannada News

ಶಿವಪುರಿ, ಜುಲೈ 24: ಶೌಚಾಲಯವನ್ನೇ ಅಂಗನವಾಡಿಯ ಅಡುಗೆ ಮನೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

ಸ್ವಚ್ಛತೆಯ ಬಗ್ಗೆ ಪುಟ್ಟ ಮಕ್ಕಳಲ್ಲಿ ಅರಿವು ತುಂಬುವವರೇ ಈ ರೀತಿ ನಡೆದುಕೊಂಡಿರುವುದು ಅಸಹ್ಯ ಹುಟ್ಟಿಸಿದೆ. ಪುಟ್ಟ ಪುಟ್ಟ ಮಕ್ಕಳು ಅವರು ಮಾಡಿಕೊಟ್ಟ ಊಟವನ್ನೇ ಹೊಟ್ಟೆ ತುಂಬಾ ತಿನ್ನುತ್ತಿವೆ. ಅವರಿಗೇನು ಗೊತ್ತು ಅದು ಜೀವವನ್ನೂ ತೆಗೆಯಬಲ್ಲದೆಂದು.

ಎಷ್ಟೇ ಸ್ವಚ್ಛವಾಗಿದ್ದರೂ ನಾನಾ ರೀತಿಯ ರೋಗಗಳು ಮಾನವನನ್ನು ಆಕ್ರಮಿಸಿಕೊಳ್ಳುತ್ತಿವೆ. ಹೀಗಿರುವಾಗ ಶೌಚಾಲಯದಲ್ಲಿ ಅಡುಗೆ ಮಾಡಿದರೆ ಮಕ್ಕಳ ಆರೋಗ್ಯದ ಗತಿ ಏನಾಗಬೇಡ ನೀವೇ ಒಮ್ಮೆ ಯೋಚಿಸಿ.

Toilet of an Anganwadi centre in Shivpuri being used as a makeshift kitchen

ಸ್ವಚ್ಛತೆಯಿಂದಲೇ ಆರೋಗ್ಯ ಎನ್ನುವ ಘೋಷವಾಖ್ಯವನ್ನು ಎಲ್ಲೆಡೆ ಸಾರುತ್ತಿದ್ದರೂ, ಕೆಲವರು ಮಾತ್ರ ಅದು ತಮಗೆ ಮಾತ್ರ ಅನ್ವಯಿಸುವುದಿಲ್ಲ ಎಂದು ದೂರವೇ ಉಳಿದಿದ್ದಾರೆ.

ಹೌದು ಮಕ್ಕಳಿಗೆ ಚಿಕ್ಕಂದಿನಿಂದಲೇ ಸ್ವಚ್ಛತೆ ಪಾಠ ಮಾಡುವ ಗುರುಗಳೇ ಸ್ವಚ್ಛತೆ ಕಾಪಾಡದಿದ್ದರೆ ಇನ್ಯಾರು ಹೇಳಿಕೊಡುತ್ತಾರೆ.

ಹೌದು ಶೌಚಾಲಯದಲ್ಲಿ ತಯಾರಿಸಿದ ಆಹಾರವನ್ನೇ ಇಷ್ಟು ದಿನ ಮಕ್ಕಳು ಸೇವಿಸುತ್ತಿದ್ದಾರೆ. ಎಎನ್‌ಐ ಮಾಹಿತಿ ಪ್ರಕಾರ ಅಂಗನವಾಡಿ ಕೇಂದ್ರದಲ್ಲಿ ಈಗ ಎಲ್‌ಪಿಜಿ ಸೌಲಭ್ಯವೂ ಇದೆ. ಅಲ್ಲಿ ಉತ್ತಮ ಅಡುಗೆಮನೆಯನ್ನೂ ಕೂಡ ನಿರ್ಮಿಸಿಕೊಡಲಾಗಿದೆ. ಆದರೂ ಕೆಲವು ಅಡುಗೆ ಪಾತ್ರೆಗಳು ಶೌಚಾಲಯದಲ್ಲಿ ಕಂಡು ಬಂದಿರುವ ಕುರಿತು ವರದಿ ಮಾಡಿದೆ.

Toilet of an Anganwadi centre in Shivpuri being used as a makeshift kitchen

ವರದಿ ಪ್ರಕಾರ ದಿನನಿತ್ಯ ಅಡುಗೆಯನ್ನು ಶೌಚಾಲಯದಲ್ಲೇ ಮಾಡುತ್ತಿದ್ದು, ಬಳಿಕ ಮಕ್ಕಳಿಗೆ ಉಣಬಡಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಮಧ್ಯಪ್ರದೇಶದ ಮಂತ್ರಿ ಇಮಾರ್ತಿ ದೇವಿಯ ಹೇಳಿಕೆ ನಿಬ್ಬೆರಗಾಗಿಸಿದೆ. 'ಶೌಚಾಲಯದಲ್ಲಿ ಅಡುಗೆ ಮಾಡಿದರೆ ತೊಂದರೆ ಏನಿದೆ' ಎನ್ನುವ ಉತ್ತರವನ್ನು ಅವರು ನೀಡಿದ್ದಾರೆ ಎಂದು ಎಎನ್‌ಐ ತಿಳಿಸಿದೆ. ಮನೆಯಲ್ಲಿ ಕೂಡ ಅಟಾಚ್ಡ್ ಬಾತ್‌ರೂಮ್‌ಗಳಿರುತ್ತವೆ. ಹಾಗೆಂದ ಮಾತ್ರಕ್ಕೆ ನಮ್ಮ ಮನೆಗೆ ಬಂದಿರುವ ನೆಂಟರಿಷ್ಟರು ನಿಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ ಎಂದು ಹೇಳುತ್ತಾರೆಯೇ? ಹಾಗೆಯೇ ಇದು ಎಂದು ಹೇಳಿದ್ದಾರೆ.

English summary
Toilet of an Anganwadi centre in Shivpuri being used as a makeshift kitchen, Action being taken against Anganwadi supervisor and workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X