ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವರು ಹೆಂಡಿರ ಖರ್ಚು ನಿಭಾಯಿಸಲು ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

|
Google Oneindia Kannada News

ಭೋಪಾಲ್ (ಮಧ್ಯಪ್ರದೇಶ), ಅಕ್ಟೋಬರ್ 17: ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಭೋಪಾಲ್ ನ ಏಮ್ಸ್ ನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಗಿದ ತಂಡವೊಂದನ್ನು ಮಧ್ಯಪ್ರದೇಶದ ಪೊಲೀಸ್ ವಿಶೇಷ ತಂಡ ಬಂಧಿಸಿದೆ. ಸರ್ಕಾರದ ಹೆಸರಾಂತ ಆಸ್ಪತ್ರೆಯಲ್ಲಿ ನರ್ಸ್ ಉದ್ಯೋಗ ಕೊಡಿಸುವ ಭರವಸೆ ನೀಡಿ, ವಂಚನೆ ಎಸಗಲಾಗಿದೆ.

ವಂಚನೆ ಗ್ಯಾಂಗ್ ನ ಮುಖ್ಯ ಆರೋಪಿ ದಿಲ್ಷಾದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಜಬಲ್ ಪುರ್ ದವನು. ಆತನ ಸಹಚರ ಅಲೋಕ್ ಕುಮಾರ್ ಭೋಪಾಲ್ ನಿವಾಸಿ. ದಿಲ್ಷಾದ್ ಖಾನ್ ಗೆ ಐವರು ಹೆಂಡತಿಯರು. ಈ ಐವರು ಹೆಂಡತಿಯರು ದುಬಾರಿ ಖರ್ಚು ನಿಭಾಯಿಸಲು ಜನರಿಗೆ ವಂಚನೆ ಮಾಡಲು ಆರಂಭಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಹಜ್ ಯಾತ್ರೆ ಮಾಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಹಜ್ ಯಾತ್ರೆ ಮಾಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿ

ದಿಲ್ಷಾನ್ ಖಾನ್ ನ ಒಬ್ಬ ಹೆಂಡತಿ ಜಬಲ್ ಪುರ್ ನಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಾರೆ. ಇನ್ನು ಮತ್ತೊಬ್ಬ ಆರೋಪಿ ಅಲೋಕ್ ಕುಮಾರ್ ನ ಪತ್ನಿ ಸರ್ಕಾರದ ಬಾಲಕಿಯರ ಹಾಸ್ಟೆಲ್ ನ ಸೂಪರಿಂಟೆಂಡೆಂಟ್ ಆಗಿದ್ದಾರೆ.

To Meet Expenses Of 5 Wives, Cheated More Than 50 Women

ಆ ಮಹಿಳೆಯರಿಗೂ ಈ ವಂಚನೆ ಪ್ರಕರಣಕ್ಕೂ ನೇರ ಸಂಬಂಧ ಇಲ್ಲ. ಆದರೂ ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಂದ ಹಾಗೆ ವಂಚಕರ ತಂಡವು ವಿದ್ಯಾವಂತ ಹೆಣ್ಣುಮಕ್ಕಳನ್ನೇ ಗುರಿ ಮಾಡಿಕೊಳ್ಳಲಾಗಿದೆ. ಇದೀಗ ನಗರ ಅಥವಾ ಹಳ್ಳಿಗಳಲ್ಲಿ ಇರುವ ವಂಚನೆಗೆ ಒಳಗಾದ ಮಹಿಳೆಯರನ್ನು ಹುಡುಕಲು ಪ್ರಯತ್ನ ನಡೆಯುತ್ತಿದೆ.

English summary
Dilshad Khan from Madhya Pradesh cheated more than 50 women to meet expenses of 5 wives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X