ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

72 ಗಂಟೆಗಳ ಬಳಿಕ ರಕ್ಷಣೆ; ಬದುಕಲಿಲ್ಲ ಬಾಲಕ ಪ್ರಹ್ಲಾದ್

|
Google Oneindia Kannada News

ಭೋಪಾಲ್, ನವೆಂಬರ್ 08 : ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಪ್ರಹ್ಲಾದ್ ಎಂಬ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸತತ 72 ಗಂಟೆಗಳಿಗೂ ಅಧಿಕ ಹೊತ್ತಿನ ಕಾರ್ಯಾಚರಣೆ ಬಳಿಕ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು.

ಮಧ್ಯಪ್ರದೇಶದ ನಿವಾರಿ ಜಿಲ್ಲೆಯ ಸೇತುಪುರ ಗ್ರಾಮದ ಮೂರು ವರ್ಷದ ಬಾಲಕ ಪ್ರಹ್ಲಾದ್ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದಾರೆ. ನವೆಂಬರ್ 4ರಂದು ಆಟವಾಡುವಾಗ ಬಾಲಕ ಕೊಳವೆಬಾವಿಗೆ ಬಿದ್ದಿದ್ದ.

ತೆಲಂಗಾಣದಲ್ಲಿ ಬದುಕಿ ಬರಲಿಲ್ಲ ಕೊಳವೆ ಬಾವಿಗೆ ಬಿದ್ದ 3 ವರ್ಷದ ಕಂದಮ್ಮ! ತೆಲಂಗಾಣದಲ್ಲಿ ಬದುಕಿ ಬರಲಿಲ್ಲ ಕೊಳವೆ ಬಾವಿಗೆ ಬಿದ್ದ 3 ವರ್ಷದ ಕಂದಮ್ಮ!

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸ್ಥಳೀಯ ಪೊಲೀಸರು ಸತತವಾಗಿ ಕಾರ್ಯಾಚರಣೆ ನಡೆಸಿ ಶನಿವಾರ ರಾತ್ರಿ ಬಾಲಕನನ್ನು ಕೊಳವೆಬಾವಿಯಿಂದ ಮೇಲಕ್ಕೆ ಎತ್ತಿದ್ದರು. ಬಳಿಕ ಆಸ್ಪತ್ರೆಗೆ ಆತನನ್ನು ಕರೆದುಕೊಂಡು ಹೋಗಲಾಗಿತ್ತು.

ಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆಚಂದ್ರಪ್ಪ ಹೇಳಿದ ಬೆಂಗಳೂರು ಬೋರ್‌ ವೆಲ್‌ಗಳ ಕಥೆ

Three Year Old Boy Who Fallen Into Borewell Declared Dead

ಕೆಲವು ದಿನಗಳ ಹಿಂದೆ ಸೇತುಪುರ ಗ್ರಾಮದ ಜಮೀನಿನಲ್ಲಿ ತೆಗೆಸಿದ್ದ ಕೊಳವೆಬಾವಿಗೆ ಪ್ರಹ್ಲಾದ್ ಅಕ್ಟೋಬರ್ 4ರಂದು ಬಿದ್ದಿದ್ದ. 200 ಮೀಟರ್ ಆಳದಲ್ಲಿ ಸಿಲುಕಿದ್ದ ಆತನನ್ನು ರಕ್ಷಣೆ ಮಾಡಲು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

ಹರಿಯಾಣ: ಕೊಳವೆ ಬಾವಿಗೆ ಬಿದ್ದ ಬಾಲಕಿ ದುರಂತ ಸಾವುಹರಿಯಾಣ: ಕೊಳವೆ ಬಾವಿಗೆ ಬಿದ್ದ ಬಾಲಕಿ ದುರಂತ ಸಾವು

ಬೋರ್‌ವೆಲ್‌ ಒಳಗೆ ಆಮ್ಲಜನಕ ಪೂರೈಕೆ ಮಾಡುವ ಮೂಲಕ ಉಸಿರಾಡಲು ಸಹಾಯಕವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಬೋರ್‌ವೆಲ್‌ಗೆ ಸಮಾನಾಂತರವಾಗಿ ಚಾನೆಲ್ ಕೊರೆದು ರಕ್ಷಣಾ ಕಾರ್ಯಾಚರಣೆ ಆರಂಭಿಸಿಲಾಗಿತ್ತು.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳು ಸತತ 72 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದವು. ಶನಿವಾರ ಬಾಲಕನನ್ನು ಪತ್ತೆ ಹಚ್ಚಿ, ರಕ್ಷಣೆ ಮಾಡಲಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

English summary
The three-year-old boy Prahald who had fallen into an open borewell at Setupura village in Madhya Pradesh on 4th November rescues after 72 hours of opration and boy declared dead at the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X