ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಬೂಟ್ ಪಾಲಿಶ್ ಮಾಡ್ತಾರೆ ಮಧ್ಯಪ್ರದೇಶದ ಈ ಅಭ್ಯರ್ಥಿ!

|
Google Oneindia Kannada News

ಮಧ್ಯಪ್ರದೇಶ, ನವೆಂಬರ್ 26: ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಹತ್ತಿರ ಬಂದಿದೆ,ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಸರ್ಕಸ್ ಗಳನ್ನು ಮಾಡಲು ಆರಂಭಿಸಿದ್ದಾರೆ.

ಸಾಮಾನ್ಯವಾಗಿ ಗೃಹ ಬಳಕೆ ವಸ್ತುಗಳನ್ನು ನೀಡುವುದು, ಹಣ ಹಂಚುವುದು, ಸೀರೆಗಳನ್ನು ನೀಡುವುದನ್ನು ನೋಡಿದ್ದೇವೆ ಆದರೆ ಶೂ ಪಾಲಿಶ್ ಮಾಡುವ ಅಭ್ಯರ್ಥಿಯನ್ನು ಎಲ್ಲಾದರೂ ನೋಡಿದ್ದೀರಾ.

ಹಾಗೆಯೇ ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಆಮ್ಜಾನ್ ಪಕ್ಷದ ಅಭ್ಯರ್ಥಿ ಶರದ್ ಸಿಂಗ್ ಕುಮಾರ್ ಕೂಡ ಮತದಾರರ ಬೂಟುಗಳನ್ನು ಪಾಲಿಶ್ ಮಾಡುವ ಮೂಲಕ ಮತದಾರರ ಮನ ಗೆಲ್ಲಲು ಯತ್ನ ನಡೆದಿದೆ. ಇದೀಗ ಈ ವಿಚಾರ ದೊಡ್ಡ ಸುದ್ದಿಯಾಗಿದೆ. ಶರದ್ ಶೂ ಗುರುತಿನ ಚಿಹ್ನೆಯನ್ನೇ ಹೊಂದಿದ್ದಾರೆ. ಶೂ ಪಾಲಿಶ್ ಮಾಡಿ ಮತಯಾಚಿಸಿದ್ದಾರೆ.

ಡಿ. 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆ ಅಂಗವಾಗಿ ಜಾಗ್ತಿಯಲ್‌ ಜಿಲ್ಲೆಯ ಕೋರುತ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ಅಕುಲಾ ಹನುಮಂತ್‌ ಅವರು ಮತದಾರರ ಕೈಗೆ ಚಪ್ಪಲಿ ಕೊಟ್ಟು ಮತ ನೀಡುವಂತೆ ಕೇಳುತ್ತಿದ್ದರು. ಗೆದ್ದ ಮೇಲೆ ನಾನು ಅಭಿವೃದ್ಧಿ ಕಾರ್ಯ ಮಾಡದಿದ್ದರೆ ನೀವು ಇದೇ ಚಪ್ಪಲಿಯಿಂದ ನನಗೆ ಹೊಡೆಯಿರಿ ಎಂದು ಮನವಿ ಮಾಡಿಕೊಂಡು ಸುದ್ದಿಯಾಗಿದ್ದರು.

This candidate is polishing shoes to please voters

230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ. 28 ರಂದು ಚುನಾವಣೆ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಪ್ರಕಟವಾಗಿಲಿದೆ.
ಈ ಕುರಿತು ಮಾತನಾಡಿರುವ ಸಿಂಗ್, ಇದೊಂದು ಉಚಿತ ಮತದಾನದ ಚಿಹ್ನೆಯಾಗಿತ್ತು. ಯಾರೊಬ್ಬರು ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಹಾಗಾಗಿ ನಾವು ಇದನ್ನು ತೆಗೆದುಕೊಂಡಿದ್ದು, ಇದನ್ನೇ ಆಶೀರ್ವಾದವನ್ನಾಗಿ ಬದಲಾಗಿಸುತ್ತೇವೆ ಎಂದಿದ್ದಾರೆ.

English summary
Ahead of assembly elections in Madhya Pradesh, politicians from all political parties are leaving no stone unturned to woo the voters. Sharad Singh Kumar, of Rashtriya Aamjan Party contesting on the election symbol of a shoe has garnered attention owing to his unique style of campaigning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X