ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿತಿಂಗಳು ಇವರ ಖಾತೆಗೆ ಪ್ರಧಾನಿ ಮೋದಿಯಿಂದ ಸಾವಿರ ಸಾವಿರ ಜಮೆ!

|
Google Oneindia Kannada News

ಭೂಪಾಲ್, ನವೆಂಬರ್.22: ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ವಿದೇಶದಲ್ಲಿನ ಕಪ್ಪುಹಣವನ್ನು ಭಾರತಕ್ಕೆ ತರುತ್ತೇನೆ. ದೇಶದ ಪ್ರತಿಯೊಬ್ಬ ಬಡವರ ಖಾತೆಗೆ 15 ಲಕ್ಷ ರೂಪಾಯಿ ಸಿಗುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದು, ನೆನಪಿದೆ ಅಲ್ವಾ.

ಇದು ಜನರ ಮನಸಿನಲ್ಲಿ ಎಷ್ಟರ ಮಟ್ಟಿಗೆ ಅಚ್ಚು ಒತ್ತಿದೆ ಎಂಬುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ತಮ್ಮ ಖಾತೆಗೆ ಹಣ ಹಾಕುತ್ತದೆ ಎಂದು ಇಂದಿಗೂ ಜನರು ನಂಬಿಕೊಂಡು ಕುಳಿತಿದ್ದಾರೆ. ಹೀಗೆ ಕುಳಿತಿದ್ದ ಬಡವನ ಬ್ಯಾಂಕ್ ಖಾತೆಗೆ ತಿಂಗಳು ತಿಂಗಳು ಸಾವಿರಾರು ರೂಪಾಯಿ ಜಮೆ ಆಗಿದೆ.

ಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆಸತ್ಯವಾಗ್ಲೂ ಹೌದು, 2000 ನೋಟು ಪ್ರಿಂಟ್ ಆಗ್ತಿಲ್ಲ... ಆತಂಕ ಹುಟ್ಟಿಸಿದ ಸರ್ಕಾರದ ನಡೆ

ಅಸಲಿಗೆ ಇಂಥದೊಂದು ಘಟನೆ ಭೂಪಾಲ್ ನ ಅಲಂಪುರ್ ನಲ್ಲಿ ನಡೆದಿದೆ. ಪ್ರತಿ ತಿಂಗಳು ತಮ್ಮ ಖಾತೆಗೆ ಸಾವಿರ ಸಾವಿರ ರೂಪಾಯಿ ಜಮೆ ಆಗಿದ್ದನ್ನು ಕಂಡು ವ್ಯಕ್ತಿಯೊಬ್ಬ ಫುಲ್ ಖುಷಿ ಆಗಿದ್ದಾನೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರವೇ ಹಣ ನೀಡುತ್ತಿದೆ ಎಂದು ತಿಳಿದು ತಿಂಗಳು ತಿಂಗಳು ಆ ಹಣವನ್ನು ಬಿಡಿಸಿಕೊಂಡು ಖರ್ಚು ಮಾಡಿದ್ದಾನೆ.

ಬ್ಯಾಂಕ್ ಒಂದು, ಖಾತೆ ಒಂದು, ಖಾತೆದಾರರು ಇಬ್ಬರು!

ಬ್ಯಾಂಕ್ ಒಂದು, ಖಾತೆ ಒಂದು, ಖಾತೆದಾರರು ಇಬ್ಬರು!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಲಂಪುರ್ ಶಾಖೆಯಲ್ಲಿ ಹುಕುಂ ಸಿಂಗ್ ಎಂಬ ಇಬ್ಬರು ಉಳಿತಾಯ ಖಾತೆ ತೆರಿದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ರೂರೈ ಗ್ರಾಮದ ಹುಕುಂ ಸಿಂಗ್ ಹಾಗೂ ರೋಣಿ ಗ್ರಾಮದ ಹುಕುಂ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳಿಗೆ ಒಂದೇ ಬ್ಯಾಂಕ್ ಖಾತೆಯ ಸಂಖ್ಯೆ ನೀಡಿದ್ದಾರೆ. ಇದೇ ಎಲ್ಲ ಯಡವಟ್ಟುಗಳಿಗೆ ಮೂಲ ಕಾರಣವಾಗಿದೆ.

ಅವನು ದುಡಿಯುತ್ತಿದ್ದ, ಇವನು ಖರ್ಚು ಮಾಡುತ್ತಿದ್ದ!

ಅವನು ದುಡಿಯುತ್ತಿದ್ದ, ಇವನು ಖರ್ಚು ಮಾಡುತ್ತಿದ್ದ!

ಆಲಂಪುರ್ ಶಾಖೆಯಲ್ಲಿಲ್ಲಿ ಅಕೌಂಟ್ ತೆರೆದ ರೊರೈ ಗ್ರಾಮದ ಹುಕುಂ ಸಿಂಗ್, ಹರಿಯಾಣಕ್ಕೆ ದುಡಿಯಲು ತೆರಳುತ್ತಾನೆ. ಅಲ್ಲಿ ಪ್ರತಿ ತಿಂಗಳು ತಾನು ದುಡಿದ ಹಣವನ್ನೆಲ್ಲ ರಾಜಸ್ಥಾನ್ ಆಲಂಪುರ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಗೆ ಜಮೆ ಮಾಡುತ್ತಾನೆ. ಆದರೆ, ತನಗೆ ಅರಿವಿಲ್ಲದಂತೆ ತನ್ನ ಖಾತೆಗೆ ಹಣ ಜಮೆ ಆಗುತ್ತಿದ್ದನ್ನು ಕಂಡು ರೋಣಿ ಗ್ರಾಮದ ಹುಕುಂ ಸಿಂಗ್ ಪ್ರಧಾನಮಂತ್ರಿ ಮೋದಿ ಅವರೇ ತಮ್ಮ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ ಎಂದುಕೊಂಡಿದ್ದಾನೆ. ಅಷ್ಟಲ್ಲದೇ ಪ್ರತಿ ತಿಂಗಳು ತನಗೆ ಬೇಕಾದಷ್ಟು ಹಣ ಬಿಡಿಸಿಕೊಂಡು ಖರ್ಚು ಮಾಡಿದ್ದಾನೆ.

ಕವಡೆ ಕಾಸು ಕೊಟ್ಟಿಲ್ಲ ಕೇಂದ್ರ ಸರ್ಕಾರ!

ಕವಡೆ ಕಾಸು ಕೊಟ್ಟಿಲ್ಲ ಕೇಂದ್ರ ಸರ್ಕಾರ!

ಪ್ರಧಾನಮಂತ್ರಿಯೇ ತಮ್ಮ ಖಾತೆಗೆ ಹಣ ಜಮೆ ಮಾಡುತ್ತಿದ್ದಾರೆ ಎಂದುಕೊಂಡ ರೋಣಿ ಗ್ರಾಮದ ಹುಕುಂ ಸಿಂಗ್ ಫುಲ್ ಖುಷಿಯಾಗಿ ಹಣವನ್ನು ಮಜಾ ಉಡಾಯಿಸಿದ್ದಾರೆ. ಪ್ರತಿ ತಿಂಗಳು ತನಗೆ ಬೇಕಾಗುವಷ್ಟು ಹಣವನ್ನು ಬಳಸಿಕೊಂಡು ತನ್ನದಲ್ಲದ 89 ಸಾವಿರ ರೂಪಾಯಿಯನ್ನು ಹುಕುಂ ಸಿಂಗ್ ಖರ್ಚು ಮಾಡಿದ್ದಾನೆ.

ಬ್ಯಾಂಕ್ ಖಾತೆ ಕಂಡು ಹುಕುಂ ಸಿಂಗ್ ಶಾಕ್!

ಬ್ಯಾಂಕ್ ಖಾತೆ ಕಂಡು ಹುಕುಂ ಸಿಂಗ್ ಶಾಕ್!

ಹರಿಯಾಣದಲ್ಲಿ ರೊರೈ ಗ್ರಾಮದ ಹುಕುಂ ಸಿಂಗ್ ದುಡಿದು ಗಳಿಸಿದ ಹಣವೆಲ್ಲ ಮೆಲ್ಲಗೆ ಕರಗುತ್ತಿತ್ತು. ಆರು ತಿಂಗಳು ತಾನು ಗಳಿಸಿದ ಹಣವನ್ನೆಲ್ಲ ಕೂಡಿಟ್ಟಿದ್ದ ರೊರೈ ಗ್ರಾಮದ ಹುಕುಂ ಸಿಂಗ್ ಗೆ ಬ್ಯಾಂಕ್ ಪಾಸ್ ಬುಕ್ ಪರಿಶೀಲಿಸಿದಾಗ ಶಾಕ್ ಆಗಿತ್ತು. ತಾವು ಜಮೆ ಮಾಡಿದ್ದು 1 ಲಕ್ಷ 40 ಸಾವಿರ ರೂಪಾಯಿ. ಆದರೆ, ಬ್ಯಾಂಕ್ ಖಾತೆಯಲ್ಲಿ ಇದ್ದಿದ್ದು ಮಾತ್ರ 35 ಸಾವಿರ 500 ರೂಪಾಯಿ. ಈ ಬಗ್ಗೆ ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ರಾಜೇಶ್ ಸೊಂಕರ್ ಗೆ ದೂರು ನೀಡಿದಾಗ, ಬ್ಯಾಂಕ್ ಅಧಿಕಾರಿಗಲು ಮಾಡಿರುವ ಯಡವಟ್ಟು ಬಯಲಿಗೆ ಬಂದಿದೆ.

English summary
The Prime Minister Narendra Modi Giving Money To Him. Man Though. But Truth, Unfortunately For Him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X