ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಕಳೆದುಕೊಂಡು ಒತ್ತಡಲ್ಲಿದ್ದ ಟೆಕಿ ಕುಟುಂಬದ ನಾಲ್ವರು ಸಾವು

|
Google Oneindia Kannada News

ಇಂದೋರ್ (ಮಧ್ಯಪ್ರದೇಶ), ಸೆಪ್ಟೆಂಬರ್ 28: ಮಧ್ಯಪ್ರದೇಶದ ಇಂದೋರ್ ನಲ್ಲಿ ಟೆಕಿ, ಅವರ ಹೆಂಡತಿ, ಮಗ ಹಾಗೂ ಮಗಳು ಸಾವನ್ನಪ್ಪಿದ್ದು, ತಮ್ಮ ಉದ್ಯೋಗ ಕಳೆದುಕೊಂಡ ನಂತರ ಟೆಕಿ ಒತ್ತಡದಲ್ಲಿ ಇದ್ದರು. ಆನ್ ಲೈನ್ ನಲ್ಲಿ ಸೋಡಿಯಂ ನೈಟ್ರೇಟ್ ಖರೀದಿಸಿ, ಅದನ್ನು ಬಳಸಿ ತನ್ನ ಕುಟುಂಬವನ್ನು ಹತ್ಯೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಟೆಕಿ ಆನ್ ಲೈನ್ ಟ್ರೇಡಿಂಗ್ ನಲ್ಲಿ ನಷ್ಟ ಅನುಭವಿಸಿರಬಹುದು ಎಂಬ ಅನುಮಾನ ಕೂಡ ಇದೆ. ಸದ್ಯಕ್ಕೆ ಆ ಟೆಕಿಯ ಬ್ಯಾಂಕ್ ಖಾತೆ, ಇಮೇಲ್ ಮತ್ತಿತರ ಮಾಹಿತಿಗಳಿಗಾಗಿ ಲ್ಯಾಪ್ ಟಾಪ್, ಮೊಬೈಲ್ ಫೋನ್ ಅನ್ನು ಶೋಧಿಸುತ್ತಿದ್ದಾರೆ. ಟೆಕಿ ಹಾಗೂ ಕುಟುಂಬದ ಸಾವಿಗೆ ಏನು ಕಾರಣ ಎಂದು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ.

ಮ.ಪ್ರ.ದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಬಯಲು, ದೊಡ್ಡ ತಲೆಗಳೇ ಶಾಮೀಲುಮ.ಪ್ರ.ದಲ್ಲಿ ಅತಿ ದೊಡ್ಡ ಲೈಂಗಿಕ ಹಗರಣ ಬಯಲು, ದೊಡ್ಡ ತಲೆಗಳೇ ಶಾಮೀಲು

ನಲವತ್ತೈದು ವರ್ಷದ ಅಭಿಷೇಕ್ ಸಕ್ಸೇನಾ ಆತ್ಮಹತ್ಯೆ ಮಾಡಿಕೊಂಡವರು. ಹೆಂಡತಿ ಪ್ರೀತಿ ಸಕ್ಸೇನಾ, ಅವಳಿ ಮಕ್ಕಳಾದ ಅದ್ವಿತ್ ಹಾಗೂ ಅನನ್ಯಾ ಕೂಡ ಮೃತಪಟ್ಟಿದ್ದಾರೆ. ಇಂದೋರ್ ನ ಖುದೇಲ್ ರೆಸಾರ್ಟ್ ನಲ್ಲಿ ಶವಗಳು ಪತ್ತೆಯಾಗಿವೆ. ಅಭಿಷೇಕ್ ಅವರ ಎಂಬತ್ತು ವರ್ಷದ ತಾಯಿಯನ್ನು ಅಪಾರ್ಟ್ ಮೆಂಟ್ ನಲ್ಲಿ ಬಿಟ್ಟು ಬರಲಾಗಿತ್ತು.

Techie Who Lost Job Commits Suicide and Killed Wife, Son, Daughter

ಆಭಿಷೇಕ್ ರೆಸಾರ್ಟ್ ಗೆ ಹೋದ ಮೇಲೆ ಎರಡು ದಿನಗಳಾದರೂ ರೂಮ್ ನಿಂದ ಹೊರಬಾರದಿದ್ದರಿಂದ ಅನುಮಾನಗೊಂಡು, ಮಾಸ್ಟರ್ ಕೀ ಬಳಸಿ ಕೋಣೆ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ರಾಸಾಯನಿಕದ ಬಾಟಲಿ, ಉಗುರು ನೀಲಿ ಆಗಿರುವುದು ಹಾಗೂ ಬಾಯಲ್ಲಿ ನೊರೆ ಬಂದಿರುವುದು ಕಂಡುಬಂದಿದೆ.

ಸಾಫ್ಟ್ ವೇರ್ ಕಂಪೆನಿಯ ಕೆಲಸ ಕಳೆದುಕೊಂಡ ಮೇಲೆ ಅಭಿಷೇಕ್ ಒತ್ತಡದಲ್ಲಿ ಇದ್ದರು. ಅವರ ಪತ್ನಿ ಇ ಕಾಮರ್ಸ್ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರೂ ಕುಟುಂಬ ನಿರ್ವಹಣೆಗೆ ಅಗತ್ಯ ಇರುವಷ್ಟು ಸಂಪಾದನೆ ಆಗುತ್ತಿರಲಿಲ್ಲ. ಆ ಕಾರಣಕ್ಕೆ ಇಂಥ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

English summary
Abhishek Saxena, 45 year old techie commits suicide and before that, killed son and daughter in Indore. After losing job, he was under pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X