• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಧ್ಯಪ್ರದೇಶ: ಮಸೀದಿ ಮುಂದೆ ದಲಿತಮದುವೆ:ವಾದ್ಯ ನುಡಿಸಿದ್ದಕ್ಕೆಕಲ್ಲು ತೂರಾಟ

|
Google Oneindia Kannada News

ರಾಜ್‌ಗಢ (ಮಧ್ಯಪ್ರದೇಶ) ಮೇ 19: ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರ ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ವಾದ್ಯವನ್ನು ನುಡಿಸುವ ವಿವಾದದ ಹಿನ್ನೆಲೆಯಲ್ಲಿ ಸ್ಥಳೀಯರು ಕಲ್ಲು ಎಸೆದ ಪರಿಣಾಮ ಮೂವರು ಗಾಯಗೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳಿಂದ ಕಲ್ಲು ತೂರಾಡಿದವರನ್ನು ಗುರುತಿಸಲಾಗಿದ್ದು, ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಜಿರಾಪುರದ ಮಸೀದಿಯೊಂದರ ಹೊರಗೆ ಮೆರವಣಿಗೆ ಸಾಗುತ್ತಿದ್ದಾಗ ಕೆಲವು ಸಮುದಾಯದ ಸದಸ್ಯರು ಆಚರಣೆಯ ಸಮಯದಲ್ಲಿ ವಾದ್ಯ ನುಡಿಸುವುದನ್ನು ವಿರೋಧಿಸಿದರು. ಮದುವೆ ವಾದ್ಯಗಾರರು ಕೆಲಕಾಲ ಸಂಗೀತವನ್ನು ನಿಲ್ಲಿಸಿದರು. ಆದರೆ ಕೆಲವು ನಿಮಿಷಗಳ ನಂತರ, ಅವರು ಮತ್ತೆ ವಾದ್ಯ ಬಾರಿಸಲು ಪ್ರಾರಂಭಿಸಿದಾಗ ಮುಸ್ಲಿಂ ಸಮುದಾಯದ ಸದಸ್ಯರು ಕಲ್ಲು ಎಸೆದರು ಎಂದು ಆರೋಪಿಸಲಾಗಿದೆ.

ಮದುವೆ ವೇಳೆ ಪವರ್ ಕಟ್: ವಧುಗಳನ್ನೇ ಬದಲಿ ಮಾಡಿದ ಪಂಡಿತಮದುವೆ ವೇಳೆ ಪವರ್ ಕಟ್: ವಧುಗಳನ್ನೇ ಬದಲಿ ಮಾಡಿದ ಪಂಡಿತ

ವಧುವಿನ ಸಹೋದರ ಅಂಕಿತ್ ಮಾಳವಿಯಾ ಮಾತನಾಡಿ, 'ಮದುವೆಯ ಮೆರವಣಿಗೆ ಮಸೀದಿಯನ್ನು ಹಾದು ಹೋಗುವಾಗ ವಾದ್ಯ ನುಡಿಸುವುದನ್ನ ನಿಲ್ಲಿಸಲು ಹೇಳಲಾಯಿತು. ಆರಂಭದಲ್ಲಿ ಸ್ವಲ್ಪ ಹೊತ್ತು ನಿಲ್ಲಿಸಿ ಮತ್ತೆ ವಾದ್ಯಗಾರರು ನುಡಿಸಲು ಶುರು ಮಾಡಿದ್ದಾರೆ. ಇದರಿಂದ ಅವರು ಕಲ್ಲುಗಳನ್ನು ಎಸೆದಿದ್ದಾರೆ' ಎಂದು ಆರೋಪಿಸಿದ್ದಾರೆ. ಬ್ಯಾಂಡ್ ಸದಸ್ಯರು ಮತ್ತು ವರನ ಮೆರವಣಿಗೆಯ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ ಮತ್ತು ಕೆಲವು ಮಹಿಳೆಯರನ್ನು ಹತ್ತಿಕ್ಕಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ' ಎಂದು ಅಂಕಿತ್ ಅವರು ಹೇಳಿದ್ದಾರೆ.

"ಇಲ್ಲಿ ಸ್ಥಳೀಯರು ಮಸೀದಿಯ ಮುಂದೆ ಯಾವುದೇ ವಾದ್ಯ ನುಡಿಸಬಾರದು ಎಂಬುದು ಸಂಪ್ರದಾಯವಾಗಿದೆ. ಬ್ಯಾಂಡ್ ನುಡಿಸುವ ಜನರು ಮಸೀದಿಯನ್ನು ದಾಟಿ ಸ್ವಲ್ಪ ದೂರದಲ್ಲಿ ವಾದ್ಯ ನುಡಿಸಲು ಪ್ರಾರಂಭಿಸಿದರು. ನಂತರವೂ ತೊಂದರೆ ಪ್ರಾರಂಭವಾಗಿದೆ" ಎಂದು ಜಿರಾಪುರ ಪೊಲೀಸ್ ಠಾಣೆಯ ಪ್ರಭಾತ್ ಗೌಡ್ ಹೇಳಿದ್ದಾರೆ.

Stones pelting At Wedding Party in Madhya Pradesh Over Music Played

ಘಟನೆಯಲ್ಲಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ದೌರ್ಜನ್ಯ ತಡೆ ಕಾಯಿದೆಯ ಮೇಲಿನ ಕಾನೂನು ಆರೋಪ ಹೊರಿಸಲಾಗಿದೆ.

English summary
Rajgarh (Madhya Pradesh): Three persons were injured when locals threw stones at the wedding procession of a Dalit man in Madhya Pradesh's Rajgarh district, following a dispute over the music being played during the celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X