ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ರೈಲು ನಿಲ್ದಾಣದ ಆಹಾರದ ವಾಹನವನ್ನೇ ದೋಚಿದ ಕಾರ್ಮಿಕರು

|
Google Oneindia Kannada News

ಭೋಪಾಲ್, ಮೇ 25: ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ಸಂಗತಿಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತೀವೆ.

ಆಹಾರ ಸಿಗದೇ ಕಂಗೆಟ್ಟಿದ್ದ ಕೆಲ ವಲಸೆ ಕಾರ್ಮಿಕರು ಸೋಮವಾರ ಮಧ್ಯಪ್ರದೇಶದ ರೈಲ್ವೆ ನಿಲ್ದಾಣವೊಂದರಲ್ಲಿ ಆಹಾರದ ಟ್ರಾಲಿಯನ್ನು ದೋಚಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.

Special Shramik Train Migrant Labours Loot Food Van In Madhya Pradesh

3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು 3 ಸಾವಿರ ಶ್ರಮಿಕ್ ರೈಲು ಸಂಚಾರ; ತವರಿಗೆ ಸೇರಿದ್ದು 40 ಲಕ್ಷ ಜನರು

ಮಧ್ಯಪ್ರದೇಶದ ನರ್ಮದಪುರಂ ವಿಭಾಗದ ಇಟಾರ್ಸಿ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ರೈಲ್ವೆ ಸಂರಕ್ಷಣಾ ಪಡೆ ಸಿಬ್ಬಂದಿ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕಾರ್ಮಿಕರು ಟ್ರಾಲಿಯಲ್ಲಿ ಹಂಚಲು ತಂದಿದ್ದ ಆಹಾರವನ್ನು ಸಂಪೂರ್ಣ ದೋಚಿದ್ದಾರೆ. ಕೆಲವರು ಆಹಾರ ಸಿಗದೇ ಹೊಡೆದಾಡಿಕೊಂಡಿದ್ದಾರೆ.

ಲಾಕ್‌ಡೌನ್ ನಿಂದ ತತ್ತರಿಸಿರುವ ವಲಸೆ ಕಾರ್ಮಿಕರು ಶ್ರಮೀಕ್ ರೈಲುಗಳಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಅವರಿಗೆ ಅನ್ನ ಆಹಾರದ ವ್ಯವಸ್ಥೆ ಮಾಡುತ್ತೇವೆ ಎಂದು ಸರ್ಕಾರಗಳು ಹೇಳುತ್ತಿದ್ದಾರಾದರೂ ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಕಾರ್ಮಿಕರು ಆಹಾರಕ್ಕೆ ಹೊಡೆದಾಡುವುದು ಆಗಾಗ ಕಂಡು ಬರುತ್ತಿದೆ.

English summary
Special Shramik Train Migrant Labours Loot Food Van In Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X