ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಶಿವರಾಜ್ ಸಿಂಗ್ ರಾಜೀನಾಮೆ

|
Google Oneindia Kannada News

ಭೋಪಾಲ್, ಡಿಸೆಂಬರ್ 12: ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದಾರೆ.

ವರಸೆ ಬದಲಿಸಿದ ಮಾಯಾವತಿ... ಇದು ರಾಜಕೀಯ 'ಮಾಯಾ'ಜಾಲ! ವರಸೆ ಬದಲಿಸಿದ ಮಾಯಾವತಿ... ಇದು ರಾಜಕೀಯ 'ಮಾಯಾ'ಜಾಲ!

ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾದ ನಂತರ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರಿಗೆ ಬುಧವಾರ ಬೆಳಿಗ್ಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.

ಎಂಪಿಯಲ್ಲಿ ರೋಚಕ ಸ್ಪರ್ಧೆಯಲ್ಲಿ ಕಡೆಗೂ ಗೆದ್ದಿದ್ದು ಕಾಂಗ್ರೆಸ್! ಎಂಪಿಯಲ್ಲಿ ರೋಚಕ ಸ್ಪರ್ಧೆಯಲ್ಲಿ ಕಡೆಗೂ ಗೆದ್ದಿದ್ದು ಕಾಂಗ್ರೆಸ್!

ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶ ಡಿ.11 ಮಂಗಳವಾರದಂದು ಹೊರಬಿದ್ದಿತ್ತು. 230 ಕ್ಷೇತ್ರಗಳ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 114 ಕ್ಷೇತ್ರಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಪಕ್ಷೇತರರು, ಎಸ್ಪಿ ಮತ್ತು ಬಿಎಸ್ಪಿ ಬೆಂಬಲದೊಂದಿಗೆ ಕಾಂಗ್ರೆಸ್ ಇಲ್ಲಿ ಸರ್ಕಾರ ರಚಿಸುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಿ, ಹೊಸ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Shivraj Singh Chouhan tenders his resignation as CM of MP

ಬಿಜೆಪಿ 109 ಸ್ಥಾನಗಳನ್ನು ಗೆದ್ದು ಕೊನೆಯ ಕ್ಷಣದವರೆಗೂ ಕಾಂಗ್ರೆಸಿಗೆ ಪೈಪೋಟಿ ನೀಡಿತ್ತು. ಕಳೆದ ಮೂರು ಅವಧಿಯಿಂದಲೂ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿತ್ತು.

English summary
Madhya Pradesh BJP leader Shivraj Singh Chouhan tenders his resignation to the Governor Anandiben Patel as MP CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X