ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶ: ಉಪಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನಿಶ್ಚಿತ

|
Google Oneindia Kannada News

ಭೂಪಾಲ್, ನವೆಂಬರ್ 10: ಮಧ್ಯಪ್ರದೇಶದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯುವುದು ನಿಶ್ಚಿತವಾಗಿದೆ.

ಮಧ್ಯಪ್ರದೇಶದ 28 ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುತೇಕ ಸ್ಪಷ್ಟ ಬಹುಮತ ದೊರೆಯುವುದು ಖಚಿತವಾಗಿದೆ.

ಬಿಜೆಪಿಯಲ್ಲಿ ಬಲ ಪ್ರದರ್ಶಿಸಿದ ಮಾಜಿ ಕಾಂಗ್ರೆಸ್ಸಿಗ ಸಿಂಧಿಯಾಬಿಜೆಪಿಯಲ್ಲಿ ಬಲ ಪ್ರದರ್ಶಿಸಿದ ಮಾಜಿ ಕಾಂಗ್ರೆಸ್ಸಿಗ ಸಿಂಧಿಯಾ

ಆದರೆ, ಬಿಜೆಪಿ ರಾಜ್ಯಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ವಕ್ಷೇತ್ರ ಗ್ವಾಲಿಯಾರ್ - ಚಂಬಲ್ ಪ್ರದೇಶದಲ್ಲಿ 8-10 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಚುನಾವಣೆ ನಡೆದ 28 ಸ್ಥಾನಗಳ ಪೈಕಿಯಲ್ಲಿ 16 ಸ್ಥಾನಗಳನ್ನು ಗ್ವಾಲಿಯರ್ - ಚಂಬಲ್ ವಲಯದಲ್ಲಿಯೇ ಇವೆ. ಮೊರೆನಾ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಕಡಿಮೆ ಅಂತರೊಂದಿಗೆ ಮುನ್ನಡೆಯಲ್ಲಿದೆ.

Saffron Surge In MP By-Polls Set To Give BJP Clear-Cut Majority In assembly

ನವೆಂಬರ್ 3ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಇಂದು ಮಧ್ಯಾಹ್ನದವರೆಗೂ ಬಿಜೆಪಿ 19, ಕಾಂಗ್ರೆಸ್ 8 ಮತ್ತು ಬಿಎಸ್ ಪಿ ಒಂದು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಪ್ರಮುಖವಾಗಿ ಮಾಲ್ವಾ-ನಿಮಾರ್ ಪ್ರದೇಶದ ಸ್ಥಾನಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರುತ್ತಿದ್ದರೆ, ಕೇಂದ್ರ ಸಂಸದ ಮತ್ತು ಬುಂದೇಲ್‌ಖಂಡ್ ಪ್ರದೇಶದ ಎರಡು ಸ್ಥಾನಗಳಲ್ಲಿ ದೊಡ್ಡ ಅಂತರದೊಂದಿಗೆ ಮುಂದಿದೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಸಂಜೆಯವರೆಗೂ ಇದೇ ರೀತಿಯಲ್ಲಿ 19-20 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಮುಂದುವರೆದರೆ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಸರಳ ಬಹುಮತ ಸಿಕ್ಕಂತಾಗಲಿದೆ. ಬಿಜೆಪಿ ಪ್ರಸ್ತುತ 107 ಸ್ಥಾನಗಳನ್ನು ಹೊಂದಿದ್ದು, ಸರಳ ಬಹುಮತಕ್ಕೆ ಇನ್ನೂ 9 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ ಸರಳ ಬಹುಮತ ಪಡೆಯಲು ಎಲ್ಲಾ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗಿದೆ.

ಬಿಜೆಪಿಯ ಅಭಿವೃದ್ಧಿ ಮತ್ತು ಸಾರ್ವಜನಿಕರ ಕಲ್ಯಾಣ ರಾಜಕೀಯಕ್ಕೆ ಜನರು ಮತ ಚಲಾಯಿಸಿದ್ದಾರೆ ಎಂಬ ಪ್ರವೃತ್ತಿಗಳು ಸ್ಪಷ್ಟವಾಗಿ ಬಿಂಬಿಸುತ್ತವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ.

English summary
By Polls:The make-or-break assembly by-polls in 28 seats in Madhya Pradesh is witnessing a saffron surge. The BJP is now set for a clear-cut majority on its own in the 230-member Vidhan Sabha of the central Indian state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X