ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಹಬ್ಬಗಳ ಆಚರಣೆಯನ್ನ ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ : ಸಂಸದೆ ಪ್ರಗ್ಯಾ ಸಿಂಗ್

|
Google Oneindia Kannada News

ಭೂಪಾಲ್‌, ಏಪ್ರಿಲ್ 26 : ಬಿಜೆಪಿ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್‌ ಯಾವಾಗಲೂ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿ ಇರ್ತಾರೆ. ಅದರಂತೆ ಈಗಲೂ ಕೂಡ ಮತ್ತೊಂದು ಸ್ಫೋಟಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ರಾಮನವಮಿ ಮತ್ತು ಹನುಮ ಜಯಂತಿ ವೇಳೆ ದೇಶದ ಹಲವು ಕಡೆ ಕೋಮು ಗಲಾಟೆಗಳು ನಡೆದಿದ್ದವು. ಈ ವಿಚಾರದ ಬಗ್ಗೆಯೇ ಹೇಳಿಕೆ ನೀಡಿರುವ ಪ್ರಗ್ಯಾ ಠಾಕೂರ್ ಹಿಂದೂ ಹಬ್ಬಗಳ ಆಚರಣೆಯನ್ನ ವಿರೋಧಿಸುವವರು ಈ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದಾರೆ. ಅಲ್ಲದೆ ದೇಶ ಸ್ವಾತಂತ್ಯ ಪಡೆದುಕೊಂಡಾಗ ಮುಸ್ಲಿಂರು ಧರ್ಮದ ಆಧಾರದ ಮೇಲೆ ದೇಶವನ್ನ ಪಡೆದುಕೊಂಡರು. ಈಗ ಇಲ್ಲಿಯ ನಿಯಮಗಳನ್ನ ಪಾಲಿಸದಿದ್ದರೆ ಅಂತಹವರು ಈ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳುವ ಮೂಲಕ ಕೋಮು ಕಿಡಿ ಹೊತ್ತಿಸಿದ್ದಾರೆ.

ಈ ಕುರಿತು ಭೂಪಾಲ್‌ನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಗ್ಯಾ ಠಾಕೂರ್ "ಸ್ವತಂತ್ರ ಭಾರತದಲ್ಲಿ ಧರ್ಮದ ಆಧಾರದ ಮೇಲೆ ದೇಶವನ್ನು ನಿರ್ಮಿಸಲಾಗಿದೆ. ಈ ದೇಶದಲ್ಲಿ ಹಿಂದೂಗಳು ದೇವರನ್ನು ಆರಾಧನೆ ಮಾಡಲು ಸ್ವಾತಂತ್ರ್ಯವಿದೆ. ಇದಕ್ಕಾಗಿ ನಾವು ಏನೂ ಬೇಕಾದರೂ ಮಾಡುತ್ತೇವೆ. ಈ ದೇಶವನ್ನು ಹಿಂದೂ ಭಾರತ ಮಾಡಲು ಇನ್ನಷ್ಟು ಮುಸ್ಲಿಂ ಮನೆಗಳನ್ನ ಧ್ವಂಸ ಮಾಡುತ್ತೇವೆ. ಹೀಗಾಗಿ ಮುಸ್ಲಿಂರು ಈ ದೇಶ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ," ಎಂದು ಬೆದರಿಕೆ ಹಾಕಿದ್ದಾರೆ.

twitter embed :

Sadvi pragya Controversy; asks those opposing Hindu festivals to go to pakistan

ಸದ್ಯ ಪ್ರಗ್ಯಾ ಠಾಕೂರ್‌ ಈ ವಿವಾದಾತ್ಮಕ ಹೇಳಿಕೆಗೆ ಭಾರಿ ಅಕ್ರೋಶ ವ್ಯಕ್ತವಾಗುತ್ತಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಕೂಡ ಹಿಜಾಬ್ ಕುರಿತಾಗಿ ಇದೇ ರೀತಿಯ ವಿವಾದತ್ಮಕ ಹೇಳಿಕೆ ನೀಡಿದ್ದರು. ಮದರಸಗಳನ್ನ ಹೊರತು ಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬರುವುದನ್ನ ಸಹಿಸುವುದಿಲ್ಲ. ಮದರಸಾಗಳಲ್ಲಿ ಹಿಜಾಬ್‌ ಧರಿಸಿ ನಾವೇನು ಕೇಳುವುದಿಲ್ಲ. ಆದರೆ, ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಿ ಬರುವಂತಿಲ್ಲ. ನಮ್ಮ ಹಿಂದೂ ಸಮಾಜದಲ್ಲೂ ಗುರುಕುಲದಲ್ಲಿ ಮಕ್ಕಳು ಕೇಸರಿ ಉಡುಪು ಧರಿಸಿ ಹೋಗುತ್ತಿದ್ದರು. ಆದರೆ, ಆಧುನಿಕ ಕಾಲದಲ್ಲಿ ಶಾಲಾ ಕಾಲೇಜು ಆರಂಭವಾದ ನಂತರ ಒಂದೇ ರೀತಿಯ ಸಮವಸ್ತ್ರ ಧರಿಸಿ, ಶಿಕ್ಷಣ ಸಂಸ್ಥೆಗಳ ಶಿಸ್ತಿನ ಕ್ರಮವನ್ನ ಅನುಸರಿಸುತ್ತಿದ್ದಾರೆ. ಹೀಗಾಗಿ ಹಿಜಾಬ್‌ ಧರಿಸಿ ಶಾಲೆಗಳಲ್ಲೂ ಧರ್ಮಾದಾಚರಣೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಇದಿಷ್ಟೇ ಅಲ್ಲದೆ ಈ ದೇಶದಲ್ಲಿ ಹಿಜಾಬ್ ಧರಿಸುವ ಅಗತ್ಯವಿಲ್ಲ. ಯಾರು ತಮ್ಮ ಮನೆಗಳಲ್ಲಿ ಸುರಕ್ಷಿತವಲ್ಲವೂ ಅಂತಹವರೂ ಮನೆಗಳಲ್ಲಿ ಹಿಜಾಬ್ ಧರಿಸಿ, ಆದರೆ ಹೊರಗೆ ಬಂದಾಗ ಈ ಹಿಂದೂ ಸಮಾಜದಲ್ಲಿ ಹಿಜಾಬ್‌ ಧರಿಸುವ ಅಗತ್ಯವಿರುವುದಿಲ್ಲ. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಇದರ ಅನಿವಾರ್ಯತೆ ಇರುವುದಿಲ್ಲ ಅಂತ ಹೇಳಿದ್ದರು.

Sadvi pragya Controversy; asks those opposing Hindu festivals to go to pakistan

ಪ್ರಗ್ಯಾ ಠಾಕೂರ್‌ ಅವರದು ಇದೇ ಮೊದಲ ವಿವಾದಾತ್ಮಕ ಹೇಳಿಕೆಯಲ್ಲ ಈ ಹಿಂದೆಯೂ ಸಹ ಹಲವು ವಿವಾದಗಳನ್ನ ಸೃಷ್ಟಿಸಿದ್ದರು. 2008 ರಲ್ಲಿ ಮೆಲ್ಗಾನ್ ಬ್ಲಾಸ್‌ ಪ್ರಕರಣದಲ್ಲೂ ಕೂಡ ಪ್ರಗ್ಯಾ ಮೇಲೆ ದೂರು ದಾಖಲಾಗಿತ್ತು.

English summary
BJP leader Pragya Singh Thakur sparked fresh row with her controversial comment : ask those opposing hindu festivals to go to Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X