ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಹನುಮಾನ್ ಚಾಲೀಸಾ ಪಠಣ ಮಾಡಿ, ವೈರಸ್ ಮುಕ್ತರಾಗಿ''

|
Google Oneindia Kannada News

ಭೋಪಾಲ್, ಜುಲೈ 26: ಹಪ್ಪಳ ತಿನ್ನಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೊನಾವೈರಸ್ ಮುಕ್ತರಾಗಿ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಕರೆ ನೀಡಿದ್ದು ನೆನಪಿರಬಹುದು. ಇದೇ ರೀತಿ ಅನೇಕ ರಾಜಕಾರಣಿಗಳು ಅವೈಜ್ಞಾನಿಕ ವಿಧಾನಗಳನ್ನು ಬಳಸಲು ಜನತೆಗೆ ಕರೆ ನೀಡಿ ನಗೆಪಾಟಲಿಗೆ ಒಳಗಾಗಿದ್ದಾರೆ. ಕೆಲವರು ದೇವರನ್ನು ಮುಂದಿಟ್ಟುಕೊಂಡು ಜನರ ಓಲೈಕೆಗೆ ಮುಂದಾಗಿದ್ದಾರೆ.

ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಕೂಡಾ ಇಂಥ ಹೇಳಿಕೆ ನೀಡಿದ್ದಾರೆ. ದಿನಕ್ಕೆ 5 ಸಲ ಹನುಮಾನ್ ಚಾಲೀಸ ಪಠಿಸಿ, ಕೊರೊನಾವೈರಸ್ ಓಡಿಸಿ ಎಂದು ಕರೆ ನೀಡಿದ್ದಾರೆ.

ವೈದ್ಯರು, ಸಂಶೋಧಕರನ್ನು ಮೀರಿಸುತ್ತದೆ ರಾಜಕಾರಣಿಗಳ ಕೊವಿಡ್ ಲಸಿಕೆ!ವೈದ್ಯರು, ಸಂಶೋಧಕರನ್ನು ಮೀರಿಸುತ್ತದೆ ರಾಜಕಾರಣಿಗಳ ಕೊವಿಡ್ ಲಸಿಕೆ!

ಭೋಪಾಲ್ ನಲ್ಲಿ ಜುಲೈ 24ರಿಂದ ಆಗಸ್ಟ್ 4ರ ತನಕ ಪ್ರತಿದಿನ ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕೊರೊನಾವೈರಸ್ ದೂರಾಗಿಸಲು ಇದೊಂದೆ ಮಾರ್ಗ. ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಲಿದೆ. ಆಧ್ಯಾತ್ಮಿಕ ಮಾರ್ಗದಲ್ಲಿ ನಮ್ಮ ಪ್ರಯತ್ನ ನಾವು ಮಾಡೋಣ, ದೇಶದ ಹಿಂದುಗಳೆಲ್ಲ ಒಕ್ಕೊರಲಿನಿಂದ ಹನುಮಾನ್ ಚಾಲೀಸಾ ಪಠಣ ಮಾಡಿದರೆ ಕೊರೊನಾ ಮುಕ್ತರಾಗಲು ಸಾಧ್ಯ ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.

Recite Hanuman Chalisa five times a day to beat COVID-19 says Pragya Thakur

2008ರ ಮಾಲೇಗಾಂವ್​ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್‌ ಅವರು ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ಸಿನ ದಿಗ್ವಿಜಯ್‌ ಸಿಂಗ್‌ ಅವರ ವಿರುದ್ಧ ಸುಮಾರು 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಾಬ್ರಿ ಮಸೀದಿ ಧ್ವಂಸದ ಬಗ್ಗೆ ಹೆಮ್ಮೆ, ಹೇಮಂತ್‌ ಕರ್ಕರೆ ಮತ್ತು ನಾಥೂ ರಾಮ್‌ ಗೊಡ್ಸೆ ಬಗ್ಗೆ ನೀಡಿದ ಹೇಳಿಕೆಯೂ ವಿವಾದಕ್ಕೀಡಾಗಿತ್ತು.

English summary
BJP MP Pragya Singh Thakur on Saturday appealed people to recite the Hanuman Chalisa five times a day till August 5, which she believes will rid the world of the coronavirus pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X