ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಬಾರಿಯ ಅವಕಾಶಕ್ಕಾಗಿ ಮಧ್ಯಪ್ರದೇಶದ ಜನರ ಎದುರು ಚೌಹಾಣ್

|
Google Oneindia Kannada News

ಮಧ್ಯಪ್ರದೇಶ ವಿಧಾನಸಭೆಯ 230 ಸ್ಥಾನಗಳಿಗೆ ಬುಧವಾರ ಮತದಾನ ನಡೆಯಲಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅಂದರೆ 2013ರಲ್ಲಿ ಏನಾಗಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳುವ ಸಮಯ ಇದು.

ನವೆಂಬರ್ 25, 2013ರಂದು ಮತದಾನ ನಡೆದಿತ್ತು. ಡಿಸೆಂಬರ್ 8ನೇ ತಾರೀಕು ಫಲಿತಾಂಶ ಬಂದಿತ್ತು. 230 ಸ್ಥಾನಗಳ ಪೈಕಿ 165ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಇನ್ನು ಕಾಂಗ್ರೆಸ್ 58 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಶಿವರಾಜ್ ಸಿಂಗ್ ಚೌಹಾಣ್ ಸತತ ಮೂರನೇ ಬಾರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದರು.

ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ

ಆ ಸಲ ಬಿಜೆಪಿಯ ಸಾಧನೆ 2008ರ ಚುನಾವಣೆಗಿಂತ ಉತ್ತಮವಾಗಿತ್ತು. ಆದರೆ 2003ರಲ್ಲಿ ಗಳಿಸಿದ್ದ 173 ಸ್ಥಾನಗಳಿಗಿಂತ ಕಡಿಮೆ ಸ್ಥಾನ ಪಡೆದಿತ್ತು. ಇನ್ನು ಕಾಂಗ್ರೆಸ್ ಕೂಡ 2008ರ ಚುನಾವಣೆಗೆ ಹೋಲಿಸಿದರೆ 13 ಸ್ಥಾನ ಕಡಿಮೆ ಪಡೆದಿತ್ತು. ಹಿಂದಿನ ಚುನಾವಣೆಯಲ್ಲಿ ಅದು 71 ಸ್ಥಾನಗಳನ್ನು ಪಡೆದಿತ್ತು.

Recalling 2013 Madhya Pradesh polls: Chouhan becomes CM for 3rd time

2003 2008 ಹಾಗೂ 2013ರಲ್ಲಿ ಬಿಜೆಪಿಯು ಕ್ರಮವಾಗಿ 173, 143 ಹಾಗೂ 165 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಇನ್ನು ಕಾಂಗ್ರೆಸ್ 38, 71 ಮತ್ತು 58 ಸ್ಥಾನಗಳನ್ನು ಪಡೆದಿತ್ತು. 2013ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಮತ ಗಳಿಕೆ ಪ್ರಮಾಣ ಅದಕ್ಕೂ ಹಿಂದಿನ ಚುನಾವಣೆಗಿಂತ ಹೆಚ್ಚಾಗಿತ್ತು. ಬಿಜೆಪಿಯು 44.87% ಮತ ಪಡೆಯುವ ಮೂಲಕ ಅದರ ಹಿಂದಿನ ಪ್ರಮಾಣ 42.5% ದಾಟಿದ್ದರೆ, ಕಾಂಗ್ರೆಸ್ ಪಕ್ಷವು 3.97% ಹೆಚ್ಚುವರಿ ಗಳಿಕೆ ಮಾಡಿತ್ತು.

ಮಧ್ಯಪ್ರದೇಶದ 2013ರ ವಿಧಾನಸಭಾ ಚುನಾವಣೆಯ ಅಂತಿಮ ಲೆಕ್ಕಾಚಾರ:

2013ರಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಸಾಧನೆ
ರಾಜಕೀಯ ಪಕ್ಷಗಳು ಗೆದ್ದ ಸ್ಥಾನ ಮತ ಗಳಿಕೆ ಪ್ರಮಾಣ
ಬಿಜೆಪಿ 165 44.88%
ಕಾಂಗ್ರೆಸ್ 58 36.38%
ಬಿಎಸ್ ಪಿ 4 6.29%
ಎನ್ ಸಿಪಿ 00 0.29%
ಎಸ್ ಪಿ 00 1.20%
ಸಿಪಿಐ 00 0.15%
ನೋಟಾ -- --

2018ರಲ್ಲಿ ಸವಾಲುಗಳು

ಶಿವರಾಜ್ ಸಿಂಗ್ ಚೌಹಾಣ್ ಮೂರು ಬಾರಿ ಅಧಿಕಾರದಲ್ಲಿದ್ದು, ನಾಲ್ಕನೇ ಅವಧಿಗೆ ಅವಕಾಶ ಕೇಳುತ್ತಿದ್ದಾರೆ. ಆದರೂ ಇಲ್ಲಿ ಬಗೆಹರಿಸಲೇಬೇಕಾದ ಹಲವು ಸಮಸ್ಯೆಗಳಿವೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಪ್ರಮುಖವಾಗಿದೆ. ಅತ್ಯಾಚಾರ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿರುವ ರಾಜ್ಯ ಮಧ್ಯಪ್ರದೇಶ.

ದೊಡ್ಡ ಸಂಖ್ಯೆಯಲ್ಲಿ ರೈತರು ಸಾಲದ ಸುಳಿಗೆ ಸಿಲುಕಿದ್ದು, ಅದು ಕೂಡ ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಹಾಗೂ ನೀರಿನ ಸಮಸ್ಯೆ ಕೂಡ ರಾಜ್ಯದ ಕೆಲವು ಭಾಗಗಳಲ್ಲಿ ಮುಖ್ಯ ಸಮಸ್ಯೆಯಾಗಿದೆ.

ರಾಜ್ಯ ರಾಜಧಾನಿ
ರಾಜಧಾನಿ ಭೋಪಾಲ್
ಜಿಲ್ಲೆಗಳ ಸಂಖ್ಯೆ 52
ವಿಧಾನಸಭಾ ಸ್ಥಾನಗಳು 230
ಒಟ್ಟಾರೆ ಜನಸಂಖ್ಯೆ 7.2 ಕೋಟಿ
ನಗರ ಪ್ರದೇಶ ಜನಸಂಖ್ಯೆ 2 ಕೋಟಿ
ಗ್ರಾಮೀಣ ಪ್ರದೇಶದ ಜನಸಂಖ್ಯೆ 5.2 ಕೋಟಿ
ಜಿಡಿಪಿ(2018-19) 8.26 ಲಕ್ಷ ಕೋಟಿ
ಸಾಕ್ಷರತೆ ಪ್ರಮಾಣ (2011) 72.60
ಲಿಂಗಾನುಪಾತ(2011) 931
ಸದ್ಯದ ಆಡಳಿತಾರೂಢ ಪಕ್ಷ ಬಿಜೆಪಿ
ಒಟ್ಟು ಮತದಾರರ ಸಂಖ್ಯೆ 5,03,34,620
ಒಟ್ಟಾರೆ ಮತದಾನ ಕೇಂದ್ರಗಳು 65,341
ಮಧ್ಯಪ್ರದೇಶದ ಜನಸಂಖ್ಯೆ (ಧರ್ಮದ ಆಧಾರದಲ್ಲಿ)
ಧರ್ಮ ಜನಸಂಖ್ಯೆ ಪ್ರಮಾಣ
ಹಿಂದೂ 6,60,07,121 90.89%
ಮುಸ್ಲಿಮ್ 4,77,4695 6.57%
ಇತರ ಧರ್ಮ 5,99,594 0.83%
ಜೈನ 5,67,028 0.78%
ಬೌದ್ಧ 2,16,052 0.30%
ಕ್ರಿಶ್ಚಿಯನ್ ಕ್ರಿಶ್ಚಿಯನ್ 0.29%
ಸಿಖ್ 1,51,412 0.21%
ಮಾಹಿತಿ ಲಭ್ಯವಿಲ್ಲ 97,625 0.13%

English summary
With polling for the 230 seats Madhya Pradesh assembly set to be held tomorrow, it is worth recalling what happened in the previous 2013 elections in the state. The BJP registered a thumping win the 2013 elections by bagging 165 of the 230 seats in the state. The Congress party got a drubbing in the state by winning only 58 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X