ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಅಪರೂಪದ ಡೈನೋಸಾರ್ ಮೊಟ್ಟೆ ಪತ್ತೆ

|
Google Oneindia Kannada News

ಭೋಪಾಲ್, ಜೂನ್ 13: ದೆಹಲಿ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಅಪರೂಪದ ಡೈನೋಸಾರ್ ಮೊಟ್ಟೆಯನ್ನು ಪತ್ತೆಹಚ್ಚಿದೆ. ಪಳೆಯುಳಿಕೆ ಇತಿಹಾಸದಲ್ಲಿ ಈ ರೀತಿ ಮೊಟ್ಟೆಯೊಳಗೆ ಮೊಟ್ಟೆ ಅಪರೂಪದ ಪ್ರಕರಣ ಎಂದು ಹೇಳಿಕೊಂಡಿದೆ. ಈ ಹೊಸ ಆವಿಷ್ಕಾರದಿಂದ ಭಾರತದಲ್ಲಿ ಡೈನೋಸಾರ್ ಅಸ್ತಿತ್ವದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ. ಪತ್ತೆಯಾಗಿರುವ ಮೊಟ್ಟೆಗಳು ಟೈಟಾನೋಸಾರ್‌ ಪ್ರಬೇಧದ ಜೀವಿಗಳಿಗೆ ಸೇರಿವೆ, ಇದು ಸೌರೋಪಾಡ್ ಡೈನೋಸಾರ್‌ಗಳ ವೈವಿಧ್ಯಮ ಗುಂಪಾಗಿದೆ.

ಅಮೆರಿಕದಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲಿದೆ ಟಿಟಿಡಿ ಅಮೆರಿಕದಲ್ಲಿ ಶ್ರೀನಿವಾಸ ಕಲ್ಯಾಣ ಆಯೋಜಿಸಲಿದೆ ಟಿಟಿಡಿ

ಸಂಶೋಧಕರ ಪ್ರಕಾರ, ಇದುವರೆಗೆ ಸರಿಸೃಪಗಳಲ್ಲಿ ಯಾವುದೇ 'ಅಂಡಾಣು-ಒವೊ' ಮೊಟ್ಟೆ ಕಂಡುಬಂದಿಲ್ಲವಾದ್ದರಿಂದ ಈ ಸಂಶೋಧನೆಯು "ಅಪರೂಪದ ಮತ್ತು ಮಹತ್ವದ ಸಂಶೋಧನೆಯಾಗಿದೆ". ಆವಿಷ್ಕಾರದ ಕುರಿತು ನೇಚರ್ ಗ್ರೂಪ್ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ "ಫಸ್ಟ್ ಅಂಡಾಣು-ಇನ್-ಓವೊ ರೋಗಶಾಸ್ತ್ರೀಯ ಟೈಟಾನೋಸಾರ್ ಮೊಟ್ಟೆಯು ಸೌರೋಪಾಡ್ ಡೈನೋಸಾರ್‌ ಸಂತಾನೋತ್ಪತ್ತಿ ಜೀವಶಾಸ್ತ್ರದ ಮೇಲೆ ಈ ಆವಿಷ್ಕಾರ ಬೆಳಕು ಚೆಲ್ಲುತ್ತದೆ" ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ.

ಚೀನಾ: 60 ಮಿಲಿಯನ್ ಹಿಂದಿನ ಡೈನೊಸಾರ್ ಭ್ರೂಣ ಪತ್ತೆಚೀನಾ: 60 ಮಿಲಿಯನ್ ಹಿಂದಿನ ಡೈನೊಸಾರ್ ಭ್ರೂಣ ಪತ್ತೆ

ಆಮೆಗಳು, ಹಲ್ಲಿಗಳು ಅಥವಾ ಮೊಸಳೆಗಳು ಮತ್ತು ಪಕ್ಷಿಗಳಂತಹ ಸಂತಾನೋತ್ಪತ್ತಿ ಜೀವಶಾಸ್ತ್ರವನ್ನು ಡೈನೋಸಾರ್‌ಗಳು ಹೊಂದಿವೆಯೇ ಎಂಬುದರ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಸೌರೋಪಾಡ್ ಗೂಡು ಪತ್ತೆ

ಸೌರೋಪಾಡ್ ಗೂಡು ಪತ್ತೆ

ಮಧ್ಯ ಭಾರತದ ಮೇಲಿನ ಕ್ರಿಟೇಶಿಯಸ್ ಲ್ಯಾಮೆಟಾ ರಚನೆಯು ಡೈನೋಸಾರ್ ಪಳೆಯುಳಿಕೆಗಳ (ಅಸ್ಥಿಪಂಜರ ಮತ್ತು ಮೊಟ್ಟೆಯ ಅವಶೇಷಗಳೆರಡೂ) ಆವಿಷ್ಕಾರಕ್ಕೆ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ. ಬಾಗ್ ಪಟ್ಟಣಕ್ಕೆ ಸಮೀಪವಿರುವ ಪಡ್ಲ್ಯಾ ಗ್ರಾಮದ ಬಳಿ ಹೆಚ್ಚಿನ ಸಂಖ್ಯೆಯ ಟೈಟಾನೊಸೌರಿಡ್ ಸೌರೋಪಾಡ್ ಗೂಡುಗಳು ಪತ್ತೆಯಾಗಿವೆ. ಗೂಡುಗಳ ಬಗ್ಗೆ ಅಧ್ಯಯನದ ವೇಳೆ ಒಂದು 'ಅಸಹಜ ಮೊಟ್ಟೆ'ಯನ್ನು ಕಂಡುಹಿಡಿದ್ದಾರೆ.

ಅಂಡಾಣು-ಒವೊ (ಒಂದು ಮೊಟ್ಟೆಯೊಳಗೆ ಒಂದು ಮೊಟ್ಟೆ) ಪಕ್ಷಿಗಳ ರೋಗಶಾಸ್ತ್ರವನ್ನು ನೆನಪಿಸುವ ವಿಶಾಲವಾದ ಅಂತರದಿಂದ ಬೇರ್ಪಟ್ಟ ಎರಡು ನಿರಂತರ ಮತ್ತು ವೃತ್ತಾಕಾರದ ಮೊಟ್ಟೆಯ ಚಿಪ್ಪಿನ ಪದರಗಳನ್ನು ಹೊಂದಿರುವ ಅಸಹಜ ಮೊಟ್ಟೆ ಸೇರಿದಂತೆ 10 ಮೊಟ್ಟೆಗಳನ್ನು ಒಳಗೊಂಡಿರುವ ಸೌರೋಪಾಡ್ ಡೈನೋಸಾರ್ ಗೂಡನ್ನು ಸಂಶೋಧನಾ ತಂಡವು ಪತ್ತೆಮಾಡಿದೆ.

ಇದುವರೆಗೂ ಈ ರೀತಿಯ ಮೊಟ್ಟೆ ಪತ್ತೆಯಾಗಿಲ್ಲ

ಇದುವರೆಗೂ ಈ ರೀತಿಯ ಮೊಟ್ಟೆ ಪತ್ತೆಯಾಗಿಲ್ಲ

ರೋಗಶಾಸ್ತ್ರೀಯ ಮೊಟ್ಟೆಯ ಸೂಕ್ಷ್ಮ ರಚನೆ ಮತ್ತು ಅದೇ ಗೂಡಿನಲ್ಲಿರುವ ಪಕ್ಕದ ಮೊಟ್ಟೆಯು ಅದನ್ನು ಟೈಟಾನೊಸೌರಿಡ್ ಸೌರೋಪಾಡ್ ಡೈನೋಸಾರ್‌ಗಳೊಂದಿಗೆ ಸಾಮ್ಯತೆ ಕಂಡುಬಂದಿದೆ. ಈವರೆಗೆ ತನಕ, ಡೈನೋಸಾರ್‌ಗಳಲ್ಲಿ ಮತ್ತು ಆಮೆಗಳು, ಹಲ್ಲಿಗಳು ಮತ್ತು ಮೊಸಳೆಗಳಂತಹ ಈರೀತಿ ಸರೀಸೃಪಗಳಲ್ಲಿ ಮೊಟ್ಟೆಯಲ್ಲಿನ ಮೊಟ್ಟೆಯ ಅಸಹಜ ಪಳೆಯುಳಿಕೆ ಮೊಟ್ಟೆ ಕಂಡುಬಂದಿಲ್ಲ ಎಂದು ಅದು ಹೇಳಿದೆ.

ಆಮೆಗಳು ಮತ್ತು ಇತರ ಸರೀಸೃಪಗಳಂತೆಯೇ ಡೈನೋಸಾರ್‌ಗಳು ಸಂತಾನೋತ್ಪತ್ತಿ ಕಾರ್ಯವನ್ನು ಹೊಂದಿವೆ ಎಂದು ನಂಬಲಾಗಿದೆ. ಮೊಸಳೆಗಳು ಮತ್ತು ಪಕ್ಷಿಗಳ ಪ್ರತ್ಯೇಕ ಪ್ರದೇಶಗಳ ಪೊರೆ ಮತ್ತು ಶೆಲ್ ಶೇಖರಣೆಯ ವಿಭಜಿತ ಸಂತಾನೋತ್ಪತ್ತಿ ಪ್ರದೇಶಕ್ಕೆ ಇದು ವ್ಯತಿರಿಕ್ತವಾಗಿದೆ.

ಸಂಶೋಧಕರು ಹೇಳಿದ್ದೇನು?

ಸಂಶೋಧಕರು ಹೇಳಿದ್ದೇನು?

"ಟೈಟಾನೋಸೌರಿಡ್ ಗೂಡಿನಿಂದ ಅಂಡಾಣು-ಇನ್-ಓವೊ ಮೊಟ್ಟೆಯ ಪತ್ತೆಯು ಸೌರೋಪಾಡ್ ಡೈನೋಸಾರ್‌ಗಳು ಮೊಸಳೆಗಳು ಅಥವಾ ಪಕ್ಷಿಗಳಂತೆಯೇ ಅಂಡಾಣು ರೂಪವಿಜ್ಞಾನವನ್ನು ಹೊಂದಿರುವ ಸಾಧ್ಯತೆ ಬಗ್ಗೆ ಹೇಳುತ್ತದೆ ಮತ್ತು ಅವು ಪಕ್ಷಿಗಳ ಮೊಟ್ಟೆಯಿಡುವ ಗುಣಲಕ್ಷಣಕ್ಕೆ ಹೊಂದಿಕೊಂಡಿರಬಹುದು" ಎಂದು ದೆಹಲಿ ವಿಶ್ವವಿದ್ಯಾನಿಲಯ ಸಂಶೋಧಕ ಡಾ ಹರ್ಷ ಧಿಮಾನ್ ಹೇಳಿದ್ದಾರೆ.

"ಹೊಸ ರೋಗಶಾಸ್ತ್ರೀಯ ಮೊಟ್ಟೆಯು ಅಪರೂಪದ ಮತ್ತು ಪ್ರಮುಖವಾದ ಆವಿಷ್ಕಾರವಾಗಿದೆ ಏಕೆಂದರೆ ಇದುವರೆಗೆ ಸರೀಸೃಪಗಳಲ್ಲಿ ಯಾವುದೇ ಅಂಡಾಣು-ಒವೊ ಮೊಟ್ಟೆ ಕಂಡುಬಂದಿಲ್ಲ ಮತ್ತು ಡೈನೋಸಾರ್‌ಗಳು, ಆಮೆಗಳು ಮತ್ತು ಹಲ್ಲಿಗಳು ಅಥವಾ ಅವುಗಳ ತಕ್ಷಣದ ಸೋದರಸಂಬಂಧಿಗಳಂತೆ ಮೊಸಳೆಗಳು ಮತ್ತು ಪಕ್ಷಿಗಳ ಸಂತಾನೋತ್ಪತ್ತಿ ಜೀವಶಾಸ್ತ್ರವನ್ನು ಹೊಂದಿವೆಯೇ ಎಂಬ ಮಹತ್ವದ ಮಾಹಿತಿಯನ್ನು ಅರಿಯಬಹುದಾಗಿದೆ" ಎಂದಿದ್ದಾರೆ.

ಹೊಸ ಸಂಶೋಧನೆಯ ಆರಂಭ

ಹೊಸ ಸಂಶೋಧನೆಯ ಆರಂಭ

ಮೊಸಳೆಗಳು ಶೆಲ್ ಮೆಂಬರೇನ್ ಮತ್ತು ಖನಿಜಯುಕ್ತ ಶೆಲ್ ಶೇಖರಣೆಯ ಪ್ರತ್ಯೇಕ ಪ್ರದೇಶಗಳನ್ನು ಹೊಂದಿದ್ದರೂ, ಅವು ಆಮೆಗಳು ಮತ್ತು ಇತರ ಸರೀಸೃಪಗಳಂತೆ ಎಲ್ಲಾ ಮೊಟ್ಟೆಗಳನ್ನು ಏಕಕಾಲದಲ್ಲಿಎಲ್ಲಾ ಮೊಟ್ಟೆಗಳನ್ನು ಇಡುತ್ತವೆ. ಆದರೆ ಪಕ್ಷಿಗಳು ಅಂಡೋತ್ಪತ್ತಿಗೆ ವಿರುದ್ಧವಾಗಿ ಒಂದು ಸಮಯದಲ್ಲಿ ಒಂದು ಮೊಟ್ಟೆಯನ್ನು ಇಡುತ್ತದೆ.

ಆವಿಷ್ಕಾರವು ಡೈನೋಸಾರ್‌ಗಳು ಮತ್ತು ಸರೀಸೃಪಗಳ ನಡುವಿನ ಸಂಪರ್ಕ, ಡೈನೋಸಾರ್‌ಗಳೊಳಗಿನ ವೈವಿಧ್ಯತೆ, ಅವುಗಳ ಗೂಡುಕಟ್ಟುವ ನಡವಳಿಕೆ ಮತ್ತು ಡೈನೋಸಾರ್ ಸಂತಾನೋತ್ಪತ್ತಿಗೆ ಹೆಚ್ಚಿನ ಮಾಹಿತಿ ನೀಡುತ್ತದೆ.

English summary
Delhi University Researchers Found Rare and Abnormal Dinosaur Egg Found In Madhya Pradesh. researchers claims discovery is a "rare and important find".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X